- Advertisement -
www.karnatakatv.net : ಯಡಿಯೂರಪ್ಪ ಅವರು ರಾಜೀನಾಮೆ ಕೊಟ್ಟ ಬೆನ್ನಲೆ ಶಾಸಕಾಂಗ ಸಭೆಯಲ್ಲಿ ಹೊಸ ಸಿಎಂ ಅವರನ್ನು ಆಯ್ಕೆಮಾಡಲು ನಿರ್ಧರಿಸಿದ್ದು ಈ ಸಭೆಯಲ್ಲಿ 90 ಕ್ಕೂ ಹೆಚ್ಚು ಶಾಸಕರು ಭಾಗಿಯಾಗಿದ್ದರು, ಅದರಲ್ಲಿ ಲಿಂಗಾಯತ್ ಸಮುದಾಯದ ಮೂವರಲ್ಲಿ ಪೈಪೊಟಿ ಹೆಚ್ಚಿತ್ತು.. ಬಸವರಾಜ್ ಬೊಮ್ಮಾಯಿ, ಮುರುಗೆಶ್ ನಿರಾಣಿ, ಅರವಿಂದ್ ಬೆಲ್ಲದ್ ಅವರು ಈ ರೆಸ್ ನಲ್ಲಿ ಮುಂದಿದ್ದು ಎಲ್ಲಾ ಕಡೆ ಬಸವರಾಜ್ ಬೊಮ್ಮಾಯಿ ಅವರ ಹೆಸರೇ ಕೆಳಿ ಬರುತ್ತಿತ್ತು. ಅವರು ಸಿಎಂ ಆಗುವುದು ಬಹುತೇಕ ಖಚಿತ ಎನ್ನುವ ಮಾತು ಕೇಳುತ್ತಿದ್ದು, ಅದು ನಿಜವಾಗಿದೆ ಈಗ ನೂತನ ಸಿಎಂ ಆಗಿ ಬಸವರಾಜ್ ಬೊಮ್ಮಾಯಿ ಅವರು ಅಧಿಕೃತವಾಗಿ ಆಯ್ಕೆ ಯಾಗಿದ್ದಾರೆ. ಲಿಂಗಾಯತ ಸಮುದಾಯದಲ್ಲಿ ಒಬ್ಬರಾದ ಬಸವರಾಜ್ ಬೊಮ್ಮಾಯಿ ಅವರು ನಾಳೆ ಪ್ರಮಾಣ ವಚನವನ್ನು ಸ್ವಿಕರಿಸಲಿದ್ದಾರೆ.
- Advertisement -