ಕರ್ನಾಟಕ ಟಿವಿ : ಒಂದೇ ದಿನದಲ್ಲಿ ರಾಜ್ಯಾದ್ಯಂತ 44 ಕೊರೋನ ಸೋಂಕಿತರ ಸಂಖ್ಯೆ ಹೆಚ್ಚಳ, ಬೆಂಗಳೂರಿನಲ್ಲಿ 10 ಸೋಂಕಿತರ ಹೆಚ್ಚಳವು ಅಪಾಯದ ಮುನ್ಸೂಚನೆಯಾಗಿದೆ. ಆದ ಕಾರಣ ವ್ಯಾಪಕವಾಗಿ ತೀವ್ರ ಉಚಿತ ಕಡ್ಡಾಯ ಪರೀಕ್ಷೆಗೆ ಸಕಾ೯ರ ಮತ್ತು ಬಿಬಿಎಂಪಿ ಮುಂದಾಗ ಬೇಕೆಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾಕ್ಸ೯ವಾದಿ) ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಕೆ.ಎನ್ ಉಮೇಶ್ ಒತ್ತಾಯಿಸಿದ್ದಾರೆ.. ಅದೇ ವೇಳೆ ರಾಜ್ಯ ಸಕಾ೯ರವು ಪರೀಕ್ಷೆಗೆ ಖಾಸಗಿ ಪ್ರಯೋಗಾಲಯಗಳಲ್ಲಿ ಅನುಮತಿಸಿ ಅದಕ್ಕೆ 2250 ರೂ ದರ ನಿಗದಿ ಪಡಿಸಿರುವ ಕ್ರಮವು ಲಾಕ್ಡೌನ್ ನಂತಹ ಗಂಭೀರ ಸಂದಭ೯ವನ್ನು ಖಾಸಗಿಯವರು ಲಾಭಮಾಡಿ ಕೊಳ್ಳಲು ಅನುಗೊಳಿಸಲಿದೆ ಎಂದು ಸಿಪಿಐ(ಎಂ) ಖಂಡಿಸಿದೆ.
ಲಾಕ್ಡೌನ್ ನಿಂದಾಗಿ ದೊಡ್ಡ ಪ್ರಮಾಣದ ಜನತೆ ಆದಾಯವಿಲ್ಲದೆ ಸಂಕಷ್ಟಕ್ಕೆ ಸಿಲುಕಿ ಜೀವನ ನಿವ೯ಹಣೆಗೆ ಪರದಾಡುತ್ತಿರುವಾಗ ಕೊರೋನ ಸೋಂಕಿನ ಪತ್ತೆಗೆ 2250 ರೂ ಶುಲ್ಕ ನಿಗದಿ ಕ್ರಮವು ರೋಗ ಪತ್ತೆಯನ್ನು ಖಾಸಗೀಕರಿಸುವ ಸಕಾ೯ರದ ಹೊಣೆ ಗೇಡಿತನವನ್ನು ತೋರುತ್ತದೆ ಎಂದು ಸಿಪಿಐ(ಎಂ) ಟೀಕಿಸಿದೆ.
ಈಗಾಗಲೆ ಜನತೆಯನ್ನು ಪರೀಕ್ಷಿಸಿ ಸೋಂಕಿತರನ್ನು ಪತ್ತೆ ಹಚ್ಚಿ ಪ್ರತ್ಯೇಕಿಸಿ ಚಿಕಿತ್ಸೆ ನೀಡಲು ಲಭ್ಯವಿದ್ದ 25 ದಿನಗಳ ಲಾಕ್ಡೌನ್ ಕಾಲಾವಧಿಯನ್ನು ರಾಜ್ಯ ಸಕಾ೯ರ ಮತ್ತು ಬಿಬಿಎಂಪಿ ಕಳೆದು ಕೊಂಡಿರುವುದು ಆಡಳಿತಾರೂಡರಲ್ಲಿನ ಗಂಭೀರತೆಯ ಕೊರತೆಯನ್ನು ಎತ್ತಿ ತೋರುತ್ತದೆ. ಅವರ ಈ ಹೊಣೆಗೆಡತನಕ್ಕೆ ಇಡಿ ಜನತೆ ಬೆಲೆ ತೆರ ಬೇಕಾಗುತ್ತದೆ ಎಂದು ಸಿಪಿಐ(ಎಂ) ಕಳವಳ ವ್ಯಕ್ತಪಡಿಸಿದೆ. ಶುಲ್ಕ ರಹಿತ ಪರೀಕ್ಷೆಗೆ ರಾಜ್ಯ ಸಕಾ೯ರವು ಅಗತ್ಯ ಕ್ರಮ ವಹಿಸಬೇಕೆಂದು ಸಿಪಿಐ(ಎಂ) ಆಗ್ರಹಿಸಿದೆ.
ಶಿವಕುಮಾರ್ ಬೆಸಗರಹಳ್ಳಿ, ಕರ್ನಾಟಕ ಟಿವಿ, ಬೆಂಗಳೂರು