Monday, December 11, 2023

Latest Posts

ಅತ್ತ ಬಿಜೆಪಿ, ಇತ್ತ ದೋಸ್ತಿ- ವಿಶ್ವಾಸಮತ ಯಾಚನೆಗೆ ಸ್ಪೀಕರ್ ಮೇಲೆ ಹೆಚ್ಚಿದ ಒತ್ತಡ…!

- Advertisement -

ಬೆಂಗಳೂರು: ಏನೇ ಆಗಲಿ ಇಂದೇ ವಿಶ್ವಾಸಮತ ಯಾಚನೆ ಮಾಡಿ ಅಂತ ಬಿಜೆಪಿ ಸ್ಪೀಕರ್ ಮೇಲೆ ಒತ್ತಡ ಹೇರುತ್ತಿದ್ರೆ ಮತ್ತೊಂದೆಡೆ ಇನ್ನೆರಡೇ ಎರಡು ದಿನ ನಮಗೆ ಟೈಂ ಕೊಡಿ ಅಂತ ದೋಸ್ತಿ ಪಟ್ಟು ಹಿಡಿದು ಕುಳಿತಿದೆ. ಈ ಮಧ್ಯೆ ಸ್ಪೀಕರ್ ರಮೇಶ್ ಕುಮಾರ್ ಯಾವ ನಿರ್ಧಾರಕ್ಕೆ ಬರ್ತಾರೆ ಅನ್ನೋದು ಮಾತ್ರ ಈವರೆಗೂ ಅಸ್ಪಷ್ಟವಾಗಿದೆ.

ಸದನದ ಆರಂಭದಿಂದಲೂ ಸ್ಪೀಕರ್ ರಮೇಶ್ ಕುಮಾರ್ ಇಂದು ವಿಶ್ವಾಸಮತ ಯಾಚನೆ ಪೂರ್ಣಗೊಳಿಸಬೇಕು ದಯವಿಟ್ಟು ಇದಕ್ಕೆ ಎಲ್ಲರೂ ಸಹಕರಿಸಿ, ನನ್ನನ್ನು ವಚನಭ್ರಷ್ಟನನ್ನಾಗಿ ಮಾಡಬೇಡಿ ಅಂತ ಸದಸ್ಯರಲ್ಲಿ ಮನವಿ ಮಾಡಿಕೊಳ್ಳುತ್ತಿದ್ರು. ಅದಕ್ಕೆ ತುಟಿಕ್ ಪಿಟಿಕ್ ಎನ್ನದ ದೋಸ್ತಿ ಸದಸ್ಯರು ಮಧ್ಯಾಹ್ನದ ಮೇಲೆ ತಮ್ಮ ಹಳೇ ವರಸೆ ಶುರು ಮಾಡಿದ್ರು. ಒಂದೆಡೆ ಸಿಎಲ್ ಪಿ ನಾಯಕ ಸಿದ್ದರಾಮಯ್ಯ, ನಾಳೆ ಪಕ್ಷೇತರರ ಅರ್ಜಿ ವಿಚಾರಣೆ ಇದ್ದು, ಅದನ್ನು ನೋಡಿಕೊಂಡು ವಿಶ್ವಾಸಮತ ಮಂಡನೆ ಮಾಡಿದ್ರೆ ಒಳ್ಳೇದು ಅಂತ ಸಿದ್ದರಾಮಯ್ಯ ಹೇಳಿದ್ರೆ. ಮತ್ತೊಂದೆಡೆ ಇಂದು ಸಂಜೆ ವೇಳೆಗೆ ಸದನದಿಂದ ಹೊರಬಂದ ಸಿಎಂ ಕುಮಾರಸ್ವಾಮಿ ಸ್ಪೀಕರ್ ರನ್ನು ಭೇಟಿಯಾಗಿ ಇನ್ನೆರಡೇ ಎರಡು ದಿನ ನಮಗೆ ಟೈಂ ಕೊಡಿ ಪ್ಲೀಸ್ ಅಂತ ಮನವಿ ಮಾಡಿದ್ರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸ್ಪೀಕರ್ ಯಾವುದೇ ಕಾರಣಕ್ಕೂ ಇದು ಅಸಾಧ್ಯ, ವಿಶ್ವಾಸಮತ ಯಾಚನೆಯಾಗದಿದ್ದರೆ ಸದನದಲ್ಲಿ ನಾನು ನೀಡಿದ್ದ ಮಾತು ತಪ್ಪಿದಂತಾಗುತ್ತೆ, ಬಿಜೆಪಿಯವರು ಪ್ರತಿಭಟನೆ ನಡೆಸುತ್ತಾರಷ್ಟೇ ಅಂತ ಸಿಎಂಗೆ ಉತ್ತರಿಸಿದ್ದರು. ಇದಕ್ಕೆ ಬೇಸರಗೊಂಡಿದ್ದ ಸಿಎಂ ಸದನಕ್ಕೆ ಹಾಜರಾಗದೆ ತಮ್ಮ ಕಚೇರಿಯಲ್ಲಿ ಕುಳಿತ್ರು.

ಇನ್ನು ಕಲಾಪ ಆರಂಭವಾಗ್ತಿದ್ದಂತೆ ಮತ್ತೆ ದೋಸ್ತಿ ಸದಸ್ಯರು ವಿಶ್ವಾಸಮತ ಮುಂದೂಡಿಕೆ ಬಗ್ಗೆ ಪ್ರಸ್ತಾಪಿಸಿದಾಗ ಪ್ರತಿಪಕ್ಷ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ, ಸಭಾಪತಿಗಳು ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು ಅಂತ ಒತ್ತಾಯಿಸಿದ್ರು. ಈ ವೇಳೆ ಗದ್ದಲವುಂಟಾದ್ದರಿಂದ ಕಲಾಪ ಮುಂದೂಡಲ್ಪಟ್ಟಿತು.

ಈ ಮಧ್ಯೆ ವಿಶ್ವಾಸಮತ ಯಾಚನೆಗೆ ಎಂದಿನಂತೆ ಕಾಯುತ್ತಿರೋ ಬಿಜೆಪಿ ಇಂದು ರಾತ್ರಿಯೇ ಆಗಲೀ ಎಷ್ಟೇ ಹೊತ್ತಾಗಲೀ ನಾವು ಕಾದು ಕುಳಿತುಕೊಳ್ಳುತ್ತೇವೆ. ಇಂದೇ ವಿಶ್ವಾಸಮತ ನಿರ್ಣಯವನ್ನು ಮತಕ್ಕೆ ಹಾಕಿ ಅಂತ ಬಿಜೆಪಿ ನಿಯೋಗ ಸ್ಪೀಕರ್ ರನ್ನು ಭೇಟಿ ಮಾಡಿ ಒತ್ತಾಯಿಸಿದೆ. ಅಲ್ಲದೆ ಶುಕ್ರವಾರ ನೀವು ಆಡಿದ ಮಾತನ್ನು ನಾವು ಒಪ್ಪಿ ಇಂದಿಗಾಗಿ ಕಾಯುತ್ತಿದ್ದೆವು. ಆದರೆ ದೋಸ್ತಿ ಸದಸ್ಯರ ಒತ್ತಾಯಕ್ಕೆ ಮಣಿಯದೆ ಇಂದೇ ವಿಶ್ವಾಸಮತ ಯಾಚನೆ ಪೂರ್ಣಗೊಳಿಸಿ ಕೊಟ್ಟ ಮಾತು ಉಳಿಸಿಕೊಳ್ಳಿ ಅಂತ ಬಿಜೆಪಿ ಕೂಡ ಒತ್ತಡದ ತಂದಿದೆ. ಆದರೆ ಈ ಕುರಿತು ಇನ್ನೂ ಸ್ಪಷ್ಟ ನಿರ್ಧಾರಕ್ಕೆ ಬಾರದ ಸ್ಪೀಕರ್ ತಮ್ಮ ನಿಲುವು ಪ್ರಕಟಿಸಿದೆ ಈವರೆಗೂ ತಟಸ್ಥರಾಗಿರುವಂತೆ ಕಂಡುಬರುತ್ತಿದೆ.

- Advertisement -

Latest Posts

Don't Miss