ಮಂಡ್ಯ : ಕೊರೋನಾ ಹಿನ್ನೆಲೆ ದೇಶಾದ್ಯಂತ ಲಾಕ್ ಡೌನ್ ಮಾಡಲಾಗಿದೆ.. ಕುಡುಕರು ಎಣ್ಣೆ ಸಿಗದೆ ಆತ್ಮಹತ್ಯೆಗೆ ಶರಣಾಗ್ತಿದೆ.. ಕೇರಳ ಸರ್ಕಾರ ಕುಡುಕರ ಮೇಲೆ ಕರುಣೆ ತೋರಿದ್ರು ಹೈ ಕೋರ್ಟ್ ಮಾತ್ರ ಖಡಕ್ಕಾಗಿ ಬಾರ್ ಬಂದ್ ಮಾಡಿಸಿದೆ. ಸಿಎಂ ಯಡಿಯೂರಪ್ಪ ಏಪ್ರಿಲ್ 14ರ ವರೆಗೆ ಯಾವುದೇ ಕಾರಣಕ್ಕೂ ಎಣ್ಣೆ ಸಿಗಲ್ಲ ಅಂತ ಹೇಳಿದ್ದಾರೆ. ಆದ್ರೆ, ಮಂಡ್ಯದಲ್ಲಿ ಕೆಲವು ಬಾರ್ ಮಾಲೀಕರು ಕದ್ದು ಮುಚ್ಚಿ ಎಣ್ಣೆ ಮಾರಾಟ ಮಾಡ್ತಿದ್ದಾರೆ.. ಈ ಹಿನ್ನೆಲೆ ಲಾಕ್ ಡೌನ್ ಮುಗಿದ ನಂತರ ಸ್ಟಾಕ್ ಚೆಕ್ ಮಾಡ್ತೇವೆ. ಸ್ಟಾಕ್ ನಲ್ಲಿ ವ್ಯತ್ಯಾಸ ಕಂಡುಬಂದ್ರೆ ಅಂಥಹ ಬಾರ್ ಗಳ ಲೈಸೆನ್ಸ್ ರದ್ದು ಮಾಡೋದಾಗಿ ಅಬಕಾರಿ ಇಲಾಖೆ ಮೈಸೂರು ವಲಯದ ಜಂಟಿ ಆಯುಕ್ತ ಮಾದೇಶ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಬಾರ್ ಗಳಿಗೆ ಜಿಲ್ಲಾಡಳಿತವೂ ಬೀಗ ಹಾಕಿದೆ. ಈ ವೇಳೆ ಅಧಿಕಾರಿಗಳೇ ಶಾಮೀಲಾಗಿ ಓಪನ್ ಮಾಡಿಸಿ ಹಿಂಭಾಗಿಲ ಮೂಲಕ ಮಾರಾಟ ಮಾಡಿಸಿರುವ ಆರೋಪವಿದೆ..ಸ್ಟಾಕ್ ನಲ್ಲಿ ವ್ಯತ್ಯಾಸ ಬಂದ್ರೆ ಎಲ್ಲರ ಮೇಲೂ ಕ್ರಮಕೈಗೊಳ್ತೀವಿ ಅಂತ ಮಾದೇಶ್ ಎಚ್ಚರಿಕೆ ನೀಡಿದ್ರು.
ಪ್ರವೀಣ್ ಕುಮಾರ್, ಕರ್ನಾಟಕ ಟಿವಿ, ಮಂಡ್ಯ