ಬೆಂಗಳೂರು: ನವರಾತ್ರಿ ಹಬ್ಬದ ಸಂಭ್ರಮದಲ್ಲಿರುವ ರಾಜ್ಯದ ಹಲವಾರು ಕ್ರೀಡಾ ತರಬೇತಿ ಸಂಸ್ಥೆಗಳು ಕ್ರೀಡೆಯನ್ನು ಆಯೋಜನೆ ಮಾಡಿದ್ದು ಬೆಂಗಳೂರಿನ ಕರ್ನಾಟಕ ಫ್ಲಾಗ್ ಮತ್ತು ಅಮೇರಿಕಾ ಫುಟ್ಬಾಲ್ ಅಸೋಸಿಯೇಶನ್ ವತಿಯಿಂದ ಪ್ರೀ ದಸರಾ ಫ್ರೆಂಡ್ಲಿ ಎನ್ನುವ ಹೆಸರಿನಲ್ಲಿ ಪಂದ್ಯವನ್ನು ಸೂಪರ್ ಪಾರ್ಕ್ ಸ್ಪೋರ್ಟ್ಸ್ ಮೈದಾನದಲ್ಲಿ ಆಯೋಜನೆ ಮಾಡಲಾಗಿತ್ತು.
ಕರ್ನಾಟಕ ಅಮೇರಿಕನ್ ಫುಟ್ಬಾಲ್ ಅಸೋಸಿಯೇಷನ್ ಜನರಲ್ ಸೆಕರೆಟ್ರಿ ಮತ್ತುಹಿರಿಯ ಕ್ರೀಡಾಪಟು ತೇಜಸ್ ಮಾತನಾಡಿ 2006 ರಿಂದ ಶುರುವಾದ ಈ ಸಂಸ್ಥೆಯನ್ನು ಬಹು ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕು ಮತ್ತು ಕರ್ನಾಟಕ ಹಲವು ಜಿಲ್ಲೆಗಳಲ್ಲಿ ಈಗಾಗಲೆ ಈ ಸಂಸ್ಥೆಯ ಉಪ ವಿಭಾಗಗಳಿದ್ದು ಸಾಕಷ್ಟು ಕ್ರೀಡಾಸಕ್ತಿಗಳಿಗೆ ತರಬೇತಿ ನೀಡುತ್ತಿದ್ದೇವೆ. ಹಾಗೂ ನಮ್ಮ ಸಂಸ್ಥೆಯಿಂದ ವರ್ಷಕ್ಕೆ ಮೂರು ನಾಲ್ಕು ಜನ ಕ್ರೀಡಾಪಟುಗಳು ಅಂತರಾಷ್ಟ್ರೀಯ ಕ್ರೀಡೆಯಲ್ಲಿ ಭಾಗವಹಿಸುತ್ತಿರುವುದಕ್ಕೆ ಹೆಮ್ಮೆ ಪಡುತ್ತೇನೆ ಎಂದು ಹೇಳಿದರು.
ಇನ್ನು ಕರ್ನಾಟಕ ಅಮೇರಿಕನ್ ಪುಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷರಾದ ಸತೀಶ್ ಗೌಡ ಮಾತನಾಡಿ ನಮ್ಮ ಸಂಸ್ಥೆ ಪ್ರತಿ ವರ್ಷವೂ ಸಾಕಷ್ಟು ಯುವಕರಿಗೆ ತರಬೇತಿ ನೀಡುತ್ತಿದ್ದು ಈ ವರ್ಷ ನಾಲ್ಕು ಕ್ರೀಡಾಪಟುಗಳು ಏಷ್ಯಾನ್ ಗೇಮ್ಸ್ ಗೆ ಆಯ್ಕೆಯಾಗಿರುವುದು ಸಂತೋಷ ತಂದಿದೆ ಎಂದು ಹೇಳಿದರು.
ಇನ್ನು ಈ ಸಂಸ್ಥೆಯಿಂದ ನಾಲ್ಕು ಜನ ಕ್ರೀಡಾಪಟುಗಳು ಮಲೇಷ್ಯಾದಲ್ಲಿ ನಡೆಯಲಿರುವ ಏಷ್ಯಾನ್ ಫುಟ್ಬಾಲ್ ಚಾಂಪಿಯನ್ ಷಿಪ್ ನಲ್ಲಿ ಭಾರತ ಪರ ಆಡಲಿದ್ದಾರೆ.
ರೇಖಾ, ಸಂದೀಪ್, ನಿತೀನ್, ಶ್ವೇತಾ ಎಂಬುವವರು ಆಯ್ಕೆಯಾಗಿರುವ ಕ್ರೀಡಾಪಟುಗಳು. ಭಾರತದ ಪರ ಆಡುತ್ತಿರುವುದಕ್ಕೇ ತುಂಬಾ ಸಂತೋಷವಾಗುತ್ತಿದೆ , ಖಂಡಿತವಾಗಿ ಭಾರತ ಗೆಲುವನ್ನು ಸಾಧಿಸಲು ಪ್ರಯತ್ನ ಪಡುತ್ತೇವೆ ನಮಗೆ ಏಷ್ಯಾನ್ ಗೇಮ್ಸ್ ನಲ್ಲಿ ಆಡಲು ಅವಕಾಶ ಕೊಡಿಸಿರುವುದಕ್ಕೆ ಅಸೋಸಿಯೇಶನ್ ಗೆ ಧನ್ಯವಾದಗಳನ್ನು ತಿಳಿಸಿದರು
World Cup; ಅಭಿಮಾನಿಗಳಿಗಾಗಿ ವಿಶ್ವಕಪ್ ಗೆಲ್ಲಲು ಪಣತೊಟ್ಟಿದ್ದೇವೆ..!ಕೋಹ್ಲಿ