ಪೆಟ್ರೋಲ್ – ಡೀಸೆಲ್ ಬೆಲೆ ಇಳಿಕೆ – ಇಲ್ಲಿದೆ ಆಗಸ್ಟ್‌ 13ರ ದರಪಟ್ಟಿ!

ವಿದ್ಯುತ್ ವಾಹನಗಳ ಬಳಕೆ ಹೆಚ್ಚಾಗುತ್ತಿದ್ದರೂ ಕೂಡ, ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ನ ಅವಶ್ಯಕತೆ ಹಾಗೂ ಬೇಡಿಕೆ ಮುಂದುವರೆದಿದೆ. ಎಸ್ ‘ಆಗಸ್ಟ್ 13ರ ಇಂದಿನ ವಹಿವಾಟಿನಂತೆ, ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಯಾವ ರೀತಿ ಇವೆ ಅನ್ನೋದರ ಸಂಪೂರ್ಣ ಮಾಹಿತಿ ಈಗ ನೋಡ್ತಾ ಹೋಗೋಣ!

ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ಬೆಲೆಯ ಸ್ಥಿತಿಗತಿ ಹೀಗಿದೆ – ನಮ್ಮ ರಾಜ್ಯ ರಾಜಧಾನಿ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ ರೂ. 111.68 ಇದೆ. ಇನ್ನು ಬಾಗಲಕೋಟೆ, ಬೆಳಗಾವಿ, ಬಳ್ಳಾರಿ, ಗದಗ, ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ರೂ. 112.02 ರಂತೆ ಮಾರಾಟವಾಗುತ್ತಿದೆ. ಇದರ ಜೊತೆಗೆ ‘ಬೀದರ್, ವಿಜಯಪುರ ಮತ್ತು ಕಲಬುರಗಿ ಭಾಗದಲ್ಲಿ ತುಸು ಕಡಿಮೆ ಇದ್ದು, 110.66 ರೂಪಾಯಿಯಿದೆ ಅಂತ ಹೇಳಲಾಗ್ತಿದೆ!

ಹಾಗೆಯೇ ಚಿತ್ರದುರ್ಗ, ದಾವಣಗೆರೆ, ಧಾರವಾಡ, ಹಾವೇರಿ, ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಗರಿಷ್ಠ ಮಟ್ಟದಲ್ಲಿ ಅಂದರೆ 112.12 ರೂಪಾಯಿ ಇದೆ. ಇನ್ನು ಇದರ ಜೊತೆಗೆ ‘ ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಕೊಡಗು, ಮೈಸೂರು ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರತಿ ಲೀಟರ್‌ಗೆ 110.92 ರೂ. ದಾಖಲಾಗಿದೆ.

ಹಾಗೆಯೇ, ಇಂದಿನ ಡೀಸೆಲ್ ಮಾರುಕಟ್ಟೆ ದರಗಳ ವಿವರ ಗಮನಿಸುವುದಾದರೆ – ಬೆಂಗಳೂರು ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಒಂದು ಲೀಟರ್ ಡೀಸೆಲ್ ಬೆಲೆ ರೂ. 99.56 ಇದೆ. ಬಾಗಲಕೋಟೆ, ಬೆಳಗಾವಿ, ಬಳ್ಳಾರಿ, ಗದಗ, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ನಿಖರವಾಗಿ ರೂ. 100 ಇದೆ. ಬೀದರ್, ವಿಜಯಪುರ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ರೂ. 98.61 ಇದ್ದರೆ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಕೊಡಗು, ಮೈಸೂರು ಮತ್ತು ಉಡುಪಿ ಜಿಲ್ಲೆಗಳಲ್ಲಿ ರೂ. 98.64 ರಂತೆ ವಹಿವಾಟು ನಡೆಸುತ್ತಿದೆ.

ಇನ್ನು ಚಿತ್ರದುರ್ಗ, ದಾವಣಗೆರೆ, ಧಾರವಾಡ, ಹಾವೇರಿ, ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಡೀಸೆಲ್ ಬೆಲೆ ರೂ. 100.09 ತಲುಪಿದೆ. ಹೌದು ‘ಸ್ಥಳೀಯ ತೆರಿಗೆಗಳು ಹಾಗೂ ಸಾರಿಗೆ ವೆಚ್ಚಕ್ಕೆ ಅನುಗುಣವಾಗಿ ವಿವಿಧ ಜಿಲ್ಲೆಗಳಲ್ಲಿ ಇಂಧನ ಬೆಲೆಯಲ್ಲಿ ಈ ವ್ಯತ್ಯಾಸಗಳು ಕಂಡುಬರುತ್ತಿದ್ದು ಅದನ್ನು ಕೂಡ ನೀವು ಗಮನಿಸಬೇಕಾಗುತ್ತದೆ…

About The Author