ಜೈಲಿನಲ್ಲೂ ಬದಲಾಗದ ಪ್ರಜ್ವಲ್ – ನಟಿಯರ ಅರೆಬೆ*ತ್ತಲೆ ಫೋಟೋ ಪತ್ತೆ!

ಲೈಂ*ಗಿಕ ಹಗರಣದಲ್ಲಿ ಜೈಲುಪಾಲಾಗಿರೋ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜೈಲು ಸೇರಿ ಇಷ್ಟು ದಿನವಾದರೂ ಸ್ವಲ್ಪವೂ ಬುದ್ಧಿ ಕಲಿತಿಲ್ಲ ಅನ್ನೋದಕ್ಕೆ ಇದೀಗ ಮತ್ತೊಂದು ಶಾಕಿಂಗ್ ವಿಷಯ ಹೊರಬಂದಿದೆ. ಎಸ್ ‘ಜೈಲಿನೊಳಗೆ ಇದ್ದುಕೊಂಡು ಕೂಡ ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋಗಳನ್ನು ನೋಡುತ್ತಿದ್ದರು ಎಂಬ ಗಂಭೀರ ವಿಚಾರ ‘ಸಿಸಿಬಿ ದಾಳಿ’ ವೇಳೆ ಬೆಳಕಿಗೆ ಬಂದಿದೆ.

ಎರಡು ದಿನಗಳ ಹಿಂದೆ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಸಿಸಿಬಿ ಪೊಲೀಸರು ದಿಢೀರ್ ದಾಳಿ ನಡೆಸಿದ್ದರು. ಈ ವೇಳೆ ಅತ್ಯಾಚಾರ ಪ್ರಕರಣದಲ್ಲಿ ಸಜಾ ಕೈದಿಯಾಗಿರುವ ಪ್ರಜ್ವಲ್ ರೇವಣ್ಣ ಅವರ ಕೊಠಡಿಯಲ್ಲಿ ಮೊಬೈಲ್ ಹಾಗೂ ಪೆನ್‌ಡ್ರೈವ್‌ಗಳು ಪತ್ತೆಯಾಗಿದ್ದವು ಅಂತ ಕೇಳಿ ಬಂದಿತ್ತು!

ಅಷ್ಟೇ ಅಲ್ಲ, ಸಿಸಿಬಿ ವಶಕ್ಕೆ ಪಡೆದ ಆ ಪೆನ್‌ಡ್ರೈವ್‌ನಲ್ಲಿ ಬರೋಬ್ಬರಿ 70ಕ್ಕೂ ಹೆಚ್ಚು ಅಶ್ಲೀಲ ವಿಡಿಯೋಗಳು ಸಿಕ್ಕಿವೆ ಅಂತ ಕೇಳಿ ಬರ್ತಿದೆ! ಜೊತೆಗೆ ಪ್ರಜ್ವಲ್ ಮಲಗುತ್ತಿದ್ದ ಹಾಸಿಗೆಯ ಕೆಳಗೆ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದ ನಟಿಯರು ಹಾಗೂ ರೂಪದರ್ಶಿಗಳ ಅರೆನ*ಗ್ನ ಫೋಟೋಗಳು ಕೂಡ ಪತ್ತೆಯಾಗಿವೆ ಅಂತ ಮಾಧ್ಯಮಗಳಲ್ಲಿ ಕೇಳಿ ಬಂದಿದ್ದು ‘ಇಷ್ಟು ಗಂಭೀರ ಪ್ರಕರಣದಲ್ಲಿ ಜೈಲಿಗೆ ಹೋದ್ರು ಆತನ ವಿಕೃತ ಮನಸ್ಥಿತಿ ಮಾತ್ರ ಬದಲಾಗಿಲ್ಲ ಅಂತ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಕೂಡ ಆಗ್ತಿದೆ!

ಈ ಘಟನೆಯ ಬೆನ್ನಲ್ಲೇ ಪ್ರಜ್ವಲ್ ರೇವಣ್ಣ ಹಾಗೂ ಆತನ ಜೊತೆಗಿದ್ದ ಸಹ ಕೈದಿ ಪ್ರತಾಪ್ ರಾಯ್ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಕಾರಾಗೃಹ ಅಧಿಕಾರಿಗಳು ಪ್ರಜ್ವಲ್‌ನನ್ನು ವಿಶೇಷ ಭದ್ರತಾ ವಿಭಾಗದಿಂದ ಸಾಮಾನ್ಯ ಕೈದಿಗಳ ಕೊಠಡಿಗೆ ಎತ್ತಂಗಡಿ ಮಾಡಿದ್ದಾರೆ.

ಇನ್ನು ಜೈಲಿನೊಳಗೆ ಈತನಿಗೆ ಮೊಬೈಲ್ ಸಿಗಲು ಜೈಲು ಸಿಬ್ಬಂದಿಯೇ ನೆರವು ನೀಡಿದ್ದಾರೆ ಎನ್ನುವ ಗಂಭೀರ ಶಂಕೆಯೂ ಸಹ ಮತ್ತೊಂದು ಕಡೆ ವ್ಯಕ್ತವಾಗಿದೆ. ಕಾನೂನಿನ ಕಣ್ಣಿಗೆ ದಂಡನೆ ಅನುಭವಿಸುತ್ತಿದ್ದರೂ ಜೈಲಿನೊಳಗೆ ನಡೆಯುತ್ತಿರುವ ಈ ರೀತಿಯ ಅಕ್ರಮ ಚಟುವಟಿಕೆಗಳು ಈಗ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿವೆ…

About The Author