ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳು ಅಂದ್ರೆ ಇವಿ EV ಗಾಡಿಗಳು ಎಷ್ಟೇ ರೋಡ್‌ಗಿಳಿದ್ರೂ, ಪೆಟ್ರೋಲ್ ಮತ್ತು ಡೀಸೆಲ್ ಇಂಧನಗಳ ಬೇಡಿಕೆ ಮಾತ್ರ ಸ್ವಲ್ಪವೂ ಕಡಿಮೆ ಆಗಿಲ್ಲ! ಬದಲಿಗೆ ದಿನದಿಂದ ದಿನಕ್ಕೆ ಹೆಚ್ಚಾಗ್ತಾನೆ ಇದೆ. ಹಾಗಾದ್ರೆ, ನಮ್ಮ ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ಹಾಗೂ ಡೀಸೆಲ್ ರೇಟ್ ಎಷ್ಟಿದೆ?
ರಾಜ್ಯ ರಾಜಧಾನಿ ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ ಇಂದು ಒಂದು ಲೀಟರ್ ಪೆಟ್ರೋಲ್ ಬೆಲೆ 111 ರೂಪಾಯಿ 37 ಪೈಸೆ ಇದೆ. ಇನ್ನು ಡೀಸೆಲ್ ವಿಚಾರಕ್ಕೆ ಬಂದ್ರೆ, ಬೆಂಗಳೂರಿನಲ್ಲಿ ಲೀಟರ್‌ಗೆ 99 ರೂಪಾಯಿ 25 ಪೈಸೆ ಇದೆ.
ಇನ್ನುಳಿದ ಜಿಲ್ಲೆಗಳ ಕಥೆ ನೋಡೋದಾದರೆ – ಬಳ್ಳಾರಿ, ಕೊಪ್ಪಳ, ರಾಯಚೂರು ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಪೆಟ್ರೋಲ್ ದರ ಸ್ವಲ್ಪ ಹೆಚ್ಚಿದ್ದು, ಲೀಟರ್‌ಗೆ ಬರೋಬ್ಬರಿ 112 ರೂಪಾಯಿ 07 ಪೈಸೆ ತಲುಪಿದೆ! ಇಲ್ಲಿ ಡೀಸೆಲ್ ಕೂಡ 99 ರೂಪಾಯಿ 99 ಪೈಸೆ ಅಂದ್ರೆ ಸುಮಾರು ನೂರು ರೂಪಾಯಿ ಹತ್ತಿರದಲ್ಲಿದೆ.
ಮೈಸೂರು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಕೊಡಗು, ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಪೆಟ್ರೋಲ್ ಬೆಲೆ ಕೊಂಚ ಕಡಿಮೆ ಇದ್ದು, ಪ್ರತಿ ಲೀಟರ್‌ಗೆ 110 ರೂಪಾಯಿ 10 ಪೈಸೆ ಇದೆ. ಹಾಗೆಯೇ ಈ ಜಿಲ್ಲೆಗಳಲ್ಲಿ ಡೀಸೆಲ್ ದರ ಲೀಟರ್‌ಗೆ 98 ರೂಪಾಯಿ 03 ಪೈಸೆ ವರೆಗೆ ಮಾರಾಟ ಆಗ್ತಿದೆ.
ಇನ್ನು ಬಾಗಲಕೋಟೆ, ಬೆಳಗಾವಿ, ಬೀದರ್, ಕಲಬುರಗಿ, ದಾವಣಗೆರೆ, ಧಾರವಾಡ, ಹಾವೇರಿ ಹಾಗೂ ಉತ್ತರ ಕನ್ನಡ ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ಪೆಟ್ರೋಲ್ ಬೆಲೆ ಸರಾಸರಿ 111 ರೂಪಾಯಿ 28 ರಿಂದ 34 ಪೈಸೆ ಆಸುಪಾಸಿನಲ್ಲಿದೆ. ಡೀಸೆಲ್ ದರ ಕೂಡ 99 ರೂಪಾಯಿ ಆಸುಪಾಸಿನಲ್ಲೇ ಮುಂದುವರಿದಿದೆ.
ನೀವು ಯಾವುದಾದರೂ ದೂರದ ಊರಿಗೆ ಪ್ರಯಾಣ ಮಾಡೋದಿದ್ರೆ, ನಿಮ್ಮ ವಾಹನದ ಟ್ಯಾಂಕ್ ಫುಲ್ ಮಾಡ್ಸಿಕೊಳ್ಳೋಕೆ ಮುಂಚೆ ಈ ರೇಟ್ ಗಮನದಲ್ಲಿದ್ರೆ ನಿಮಗೂ ಒಳ್ಳೆಯದು. ಇಂದಿನ ಈ ರೇಟ್ ಕಾರ್ಡ್ ಬಗ್ಗೆ ನಿಮ್ಮನಿಸಿಕೆಯನ್ನು ಕಾಮೆಂಟ್ ಮಾಡಿ..
