ಸರ್ಕಾರದ ಭೂಮಿ ವಾಪಸ್: ಡಿಸಿಎಂ ಪರಮೇಶ್ವರ್ ವಾರ್ನಿಂಗ್!

ಸಂಘ-ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಧಾರ್ಮಿಕ ಸಂಸ್ಥೆಗಳಿಗೆ ಸರ್ಕಾರದಿಂದ ಜಮೀನು ಪಡೆದು, ಆಮೇಲೆ ಸುಮ್ಮನೆ ಕೂತಿರೋರಿಗೆ ಕರ್ನಾಟಕ ಸರ್ಕಾರದಿಂದ ಬಿಗ್ ವಾರ್ನಿಂಗ್ ಬಂದಿದೆ!

ಹೌದು, ಯಾವ ಉದ್ದೇಶಕ್ಕೆ ಅಂತ ಸರ್ಕಾರದ ಜಮೀನು ಪಡೆದುಕೊಂಡಿರ್ತೀರೋ, ಆ ಕೆಲಸಕ್ಕೆ ಅದನ್ನ ಬಳಸದೇ ಹೋದ್ರೆ ಅಂತಹ ಭೂಮಿಯನ್ನು ಸರ್ಕಾರವೇ ವಾಪಸ್ ಮರುವಶಪಡಿಸಿಕೊಳ್ಳಲಿದೆ ಅಂತ ಡಿಸಿಎಂ ಡಾ. ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದ ವೇಳೆ ಕಾಂಗ್ರೆಸ್ ಸದಸ್ಯ ಶಿವಕುಮಾರ್ ಅವರು ಈ ಬಗ್ಗೆ ಪ್ರಶ್ನೆ ಎತ್ತಿದ್ದರು. ಸರ್ಕಾರದಿಂದ ಜಮೀನು ಪಡೆದ ಸಂಸ್ಥೆಗಳು ಸರಿಯಾಗಿ ಬಳಕೆ ಮಾಡ್ತಿಲ್ಲ, ಕೆಲವೆಡೆ ದುರ್ಬಳಕೆ ಆಗ್ತಿದೆ ಅಂತ ಸರ್ಕಾರದ ಗಮನಕ್ಕೆ ತಂದಿದ್ರು. ಅದಕ್ಕೆ ಉತ್ತರಿಸಿದ ಡಿಸಿಎಂ ಪರಮೇಶ್ವರ್, ಅಕ್ಷರಶಃ ಖಡಕ್ ಮಾತುಗಳನ್ನಾಡಿದ್ದಾರೆ!

ಎಷ್ಟು ಜಮೀನು ಹಂಚಿಕೆಯಾಗಿದೆ ಗೊತ್ತಾ? 2010ರಿಂದ 2026ರವರೆಗೆ ವಿವಿಧ ಸಂಘ-ಸಂಸ್ಥೆಗಳು ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಬರೋಬ್ಬರಿ 2,400 ಎಕರೆಗೂ ಹೆಚ್ಚು ಭೂಮಿಯನ್ನು ಎಲ್ಲಾ ಸರ್ಕಾರಗಳು ಸೇರಿ ನೀಡಿವೆ. ಪಡೆದ ಉದ್ದೇಶಕ್ಕೇ ಜಮೀನು ಬಳಕೆಯಾಗ್ತಿದೆಯಾ ಇಲ್ವಾ ಅನ್ನೋದನ್ನು ಪರಿಶೀಲನೆ ನಡೆಸಲು 2020ರಲ್ಲೇ ಜಿಲ್ಲಾಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ ಅಂತ ಪರಮೇಶ್ವರ್ ತಿಳಿಸಿದ್ದಾರೆ.

ಸಂಘ-ಸಂಸ್ಥೆಗಳಿಗೆ ಜಮೀನು ನೀಡಲು ನಿರ್ದಿಷ್ಟ ನಿಯಮಗಳಿವೆ. ಆ ನಿಯಮದ ಅನ್ವಯವೇ ಭೂಮಿ ನೀಡಲಾಗಿದೆ. ಆದರೆ ಯಾವ ಉದ್ದೇಶಕ್ಕೆ ಕೇಳಿ ಪಡೆದಿದ್ದರೋ, ಅದಕ್ಕೆ ಬಳಸದೇ ಹಾಗೇ ಬಿಟ್ಟರೆ ಅಥವಾ ಬೇರೆ ಉದ್ದೇಶಕ್ಕೆ ಬಳಸಿದರೆ ಅಂತಹ ಎಲ್ಲಾ ಜಮೀನುಗಳನ್ನು ಯಾವುದೇ ಮುಲಾಜಿಲ್ಲದೆ ವಾಪಸ್ ಪಡೆದೇ ತೀರುತ್ತೇವೆ ಎಂದು ಡಿಸಿಎಂ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಒಟ್ಟಿನಲ್ಲಿ, ಸರ್ಕಾರದ ಭೂಮಿಯನ್ನು ದಂಧೆಗಿಳಿಸಿಕೊಳ್ಳುವವರಿಗೆ ಅಥವಾ ಹಂಚಿಕೆ ಮಾಡಿಸಿಕೊಂಡು ಖಾಲಿ ಬಿಡುವವರಿಗೆ ಇದು ದೊಡ್ಡ ಶಾಕ್ ಎಂದೇ ಹೇಳಬಹುದು. ಸರ್ಕಾರದ ಈ ಹೊಸ ನಿರ್ಧಾರದಿಂದ ಎಷ್ಟು ಅಕ್ರಮ ಭೂಮಿ ವಾಪಸ್ ಬರಲಿದೆ ಎಂಬುದನ್ನ ಮುಂದಿನ ದಿನಗಳಲ್ಲಿ ಕಾದು ನೋಡಬೇಕು. ಸರ್ಕಾರದ ಈ ಕಠಿಣ ಕ್ರಮದ ಬಗ್ಗೆ ನಿಮ್ಮ ಅನಿಸಿಕೆ ಏನು? ಕಮೆಂಟ್ ಮಾಡಿ ತಿಳಿಸಿ.

About The Author