ನಿಮ್ಮ ಗ್ರಾಮದಲ್ಲಿ ಅಥವಾ ಜನವಸತಿ ಪ್ರದೇಶದಲ್ಲಿ ಮನೆಗಳಿದ್ದೂ ಹಕ್ಕುಪತ್ರ ಅಥವಾ ಪ್ರಾಪರ್ಟಿ ಡಾಕ್ಯುಮೆಂಟ್ಸ್ ಇಲ್ಲದೆ ಪರದಾಡುತ್ತಿದ್ದರೆ ನಿಮಗೊಂದು ಗುಡ್ ನ್ಯೂಸ್ ಇಲ್ಲಿದೆ. ಹೌದು, ರಾಜ್ಯದ ಜನವಸತಿ ಪ್ರದೇಶದ ಎಲ್ಲಾ ಆಸ್ತಿಗಳಿಗೆ ಹಕ್ಕು ದಾಖಲೆಗಳನ್ನು ವಿತರಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ ಅವರು ಅಧಿಕೃತವಾಗಿ ಘೋಷಿಸಿದ್ದಾರೆ.
ವಿಧಾನ ಪರಿಷತ್ನಲ್ಲಿ ನಡೆದ ಚರ್ಚೆಯೊಂದರಲ್ಲಿ ಮಾತನಾಡಿದ ಡಾ. ಪರಮೇಶ್ವರ್ ಅವರು, ಪ್ರಸ್ತುತ ನಡೆಯುತ್ತಿರುವ ರೀಸರ್ವೆ ಸಂದರ್ಭದಲ್ಲಿ ಕೃಷಿ ಜಮೀನುಗಳನ್ನು ಅಳತೆ ಮಾಡಿ, ಉಳಿದ ಜನವಸತಿ ಪ್ರದೇಶಗಳನ್ನು ಗ್ರಾಮ ನಕಾಶೆಗಳಲ್ಲಿ ‘ಗ್ರಾಮ ಠಾಣಾ’ ಎಂದು ಗುರುತಿಸಲಾಗುತ್ತಿದೆ ಎಂದು ತಿಳಿಸಿದರು. ದಾಖಲೆ ರಹಿತ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಿ, ಅಲ್ಲಿಯ ನಿವಾಸಿಗಳಿಗೆ ವಾಸದ ಹಕ್ಕು ದಾಖಲೆಗಳನ್ನು ನೀಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ.
ಅಲ್ಲದೆ, ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ‘ಸ್ವಾಮಿತ್ವ’ ಯೋಜನೆಯ ಮೂಲಕ ಗ್ರಾಮೀಣ ಜನವಸತಿ ಪ್ರದೇಶಗಳಲ್ಲಿ ಡ್ರೋನ್ ಆಧಾರಿತ ಸರ್ವೆ ನಡೆಸಿ ಹಕ್ಕು ದಾಖಲೆಗಳನ್ನು ಸಿದ್ಧಪಡಿಸಿ ವಿತರಿಸಲಾಗುತ್ತಿದೆ. ಕಂದಾಯ ಮತ್ತು ಪಂಚಾಯತ್ ರಾಜ್ ಇಲಾಖೆಗಳ ಸಹಕಾರದೊಂದಿಗೆ ಹಂತ ಹಂತವಾಗಿ ಎಲ್ಲಾ ಗ್ರಾಮ ಠಾಣಾ ಆಸ್ತಿಗಳ ಅಳತೆ ಮತ್ತು ನಕ್ಷೆ ತಯಾರಿಸುವ ಕಾರ್ಯ ಭರದಿಂದ ಸಾಗುತ್ತಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.
ಇನ್ನು ಇದರೊಟ್ಟಿಗೆ ‘ಗ್ರಾಮ ನಕಾಶೆಗಳ ಪರಿಷ್ಕರಣೆ ಮತ್ತು ಆಸ್ತಿ ಹಕ್ಕು ದಾಖಲೆಗಳ ವಿತರಣೆಯಿಂದ ಗ್ರಾಮೀಣ ಭಾಗದ ಜನರಿಗೆ ತಮ್ಮ ಆಸ್ತಿಗಳ ಮೇಲೆ ಸ್ಪಷ್ಟ ಹಕ್ಕು ಸಿಗಲು ಅನುಕೂಲವಾಗಲಿದೆ ಅಂತ ಹೇಳಲಾಗ್ತಿದೆ! ಎಸ್ ‘ಈ ಕುರಿತ ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಭೂದಾಖಲೆಗಳ ಇಲಾಖೆಯನ್ನು ಸಂಪರ್ಕಿಸಿ ಖಚಿತ ಮಾಹಿತಿ ಪಡೆದುಕೊಳ್ಳಿ

