Thursday, December 12, 2024

Latest Posts

Lawyer: ರಾಜ್ಯದ ನದಿಗಳ ಪರ ವಾದ ಮಂಡಿಸಲು ವಕೀಲರಿಗೆ ಕೋಟಿಗಟ್ಟಲೆ ಶುಲ್ಕ..!

- Advertisement -

ಬೆಳಗಾವಿ: ಕಾವೇರಿ, ಮಹಾದಾಯಿ, ಕೃಷ್ಣಾ ನದಿ ವಿಚಾರವಾಗಿ ಹಲವು ವರ್ಷಗಳಿಂದ ವಿವಾದಗಳು ನಡೆಯುತ್ತಿದ್ದು ರಾಜ್ಯದ ಪರ ವಾದ ಮಾಡಲು ವಕೀಲರನ್ನು ನೇಮಿಸಲಾಗಿದೆ. ಇವರಿಗೆ ಕೋಟಿಗಟ್ಟಲೆ ಹಣವನ್ನುಫೀಸ್ ರೂಪದಲ್ಲಿ ಕೊಡಲಾಗಿದೆ.

ರಾಜ್ಯದ ‌ಪರ ವಕಾಲತ್ತು ವಹಿಸಿದ್ದ ನ್ಯಾಯವಾದಿಗಳಿಗೆ 122 ಕೋಟಿ ವೆಚ್ಚ ಮಾಡಲಾಗಿದೆ. ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಮೂರು ನ್ಯಾಯಾಧೀಕರಣ ರಚಿಸಿದ್ದಾರೆ.1)ಕಾವೇರಿ ನ್ಯಾಯಾಧೀಕರಣ,2) ಕೃಷ್ಣಾ ನ್ಯಾಯಾಧಿಕರಣ, 3) ಮಹಾದಾಯಿ ನ್ಯಾಯಾಧಿಕರಣ ಎನ್ನುವ ಮೂರು ನ್ಯಾಯಾಧಿಕರಣ ಕರ್ನಾಟಕ ಕೇರಳ ತಮಿಳುನಾಡು ನಡುವೆ ಇರುವ ಜಲ ವಿವಾದವನ್ನು ನ್ಯಾಯಾಧಿಕರಣದ  ಎದುರು ರಾಜ್ಯದ ಪರ ವಕಾಲತ್ತು ವಹಿಸಿದ್ದ ವಕೀಲರಿಗೆ ನೂರಾರು ಕೋಟಿ ವೆಚ್ಚವನ್ನು ರಾಜ್ಯ ಸರ್ಕಾರ ಮಾಡಿದೆ.

1990ರಲ್ಲಿ ಕಾವೇರಿ ವಿವಾದ ಇತ್ಯರ್ಥಕ್ಕೆ ಕಾವೇರಿ ನ್ಯಾಯಾಧೀಕರಣ ರಚಿಸಲಾಗಿದ್ದು , 2017ರವರೆಗೆ ಕಾವೇರಿ ನ್ಯಾಯಾಧೀಕರಣ ಎದುರು ನಡೆದಿವೆ 580 ಸಿಟ್ಟಿಂಗ್‌ಗಳನ್ನು ಹಾಕಲಾಗಿತ್ತು.ಅಂದಿನ ದಿನಮಾನದಲ್ಲಿ ರಾಜ್ಯದ ಪರ ವಕಾಲತ್ತು ವಹಿಸಿದ್ದ ವಕೀಲರಿಗೆ ರಾಜ್ಯ ಸರ್ಕಾರ 54 ಕೋಟಿ 13 ಲಕ್ಷ ಶುಲ್ಕ ನೀಡಲಾಗಿತ್ತು.

ಕರ್ನಾಟಕ- ಮಹಾರಾಷ್ಟ್ರ- ಆಂಧ್ರಪ್ರದೇಶ ಮಧ್ಯೆ ಇರುವ ಕೃಷ್ಣಾ ನದಿ ವಿವಾದ ಇತ್ಯರ್ಥಕ್ಕೆ 2004 ರಲ್ಲಿ  ಕೃಷ್ಣಾ ನ್ಯಾಯಾಧೀಕರಣ ರಚಸಿದ್ದು 2013 ರವರೆಗೆ ಕೃಷ್ಣಾ ನ್ಯಾಯಾಧೀಕರಣ ಎದುರು ನಡೆದಿವೆ 295 ಸಿಟ್ಟಿಂಗ್‌ಗಳು. ರಾಜ್ಯದ ಪರ ವಾದ ಮಂಡಿಸಿದ ವಕೀಲರಿಗೆ 43 ಕೋಟಿ 24 ಲಕ್ಷ ಪಾವತಿಸಿರುವ ಸರ್ಕಾರ.

ಕರ್ನಾಟಕ- ಗೋವಾ- ಮಹಾರಾಷ್ಟ್ರ ಮಧ್ಯೆ ಇರುವ ಮಹಾದಾಯಿ ನದಿ ನೀರು ಹಂಚಿಕೆ ವಿವಾದ.

2010 ರಲ್ಲಿ ಮಹಾದಾಯಿ ವಿವಾದ ಇತ್ಯರ್ಥಕ್ಕೆ ರಚನೆ ಆಗಿರುವ ಮಹಾದಾಯಿ ನ್ಯಾಯಾಧೀಕರಣ. 2017 ರವರೆಗೆ ಮಹಾದಾಯಿ ನ್ಯಾಯಾಧೀಕರಣ ಎದುರು ನಡೆದಿವೆ 97 ಸಿಟ್ಟಿಂಗ್‌ಗಳು. ರಾಜ್ಯದ ಪರ ವಕಾಲತ್ತು ವಹಿಸಿದ್ದ ವಕೀಲರಿಗೆ 25 ಕೋಟಿ 38 ಲಕ್ಷ ಶುಲ್ಕ ಪಾವತಿಸಿದೆ.

ಕಾವೇರಿ, ಕೃಷ್ಣಾ, ಮಹಾದಾಯಿ ವಿವಾದ ಇತ್ಯರ್ಥಕ್ಕೆ 41 ಹಿರಿಯ ವಕೀಲರ ನೇಮಕ ಮಾಡಲಾಗಿದೆ. ರಾಜ್ಯ ಸರ್ಕಾರ ಹೈಕೋರ್ಟ್, ಸುಪ್ರೀಂ ಕೋರ್ಟ್ ಹಿರಿಯ ವಕೀಲರ ನೇಮಿಸಿತ್ತು. ಆರ್‌ಟಿಐ ಅಡಿ ವಕೀಲರ ಶುಲ್ಕದ ಮಾಹಿತಿ ನೀಡಿರುವ ಜಲಸಂಪನ್ಮೂಲ ಇಲಾಖೆ. ಜಲಸಂಪನ್ಮೂಲ ಇಲಾಖೆಗೆ ಮಾಹಿತಿ ಕೋರಿದ್ದ ಬೆಳಗಾವಿ ಮೂಲದ ಆರ್‌ಟಿಐ ಕಾರ್ಯಕರ್ತ ಭೀಮಪ್ಪ.

ಕುಮುಟಾದಲ್ಲಿ ನಡೆದಿದೆ ಕಂಡು ಕೇಳರಿಯದ ಘಟನೆ..!

Bhadra dam: ಭದ್ರಾ ಆಣೆಕಟ್ಟಿನಿಂದ ನೀರು ಬಿಡಲು ಮೀನಾಮೇಶ; ದಾವಣಗೆರೆ ರೈತರಿಂದ ಬಂದ್ ಗೆ ಕರೆ

ಗಂಡನ ಮನೆಯಲ್ಲಿ ಮಹಿಳೆಯ ಕೊಲೆ ಪತಿ ಸೇರಿದಂತೆ ನಾಲ್ವರ ಬಂಧನ..!

- Advertisement -

Latest Posts

Don't Miss