Thursday, November 30, 2023

Latest Posts

Bhadra dam: ಭದ್ರಾ ಆಣೆಕಟ್ಟಿನಿಂದ ನೀರು ಬಿಡಲು ಮೀನಾಮೇಶ; ದಾವಣಗೆರೆ ರೈತರಿಂದ ಬಂದ್ ಗೆ ಕರೆ

- Advertisement -

ದಾವಣಗೆರೆ: ಈಗಾಗಲೇ ಮಂಡ್ಯ ಮತ್ತು ಬೆಂಗಳೂರಿನಲ್ಲಿ ಕಾವೇರಿ ವಿಚಾರವಾಗಿ ಪ್ರತಿಭಟನೆಗಳು ಉಗ್ರ ರೂಪಕ್ಕೆ ತಿರುಗುತ್ತಿವೆ. ಇದರ ಬೆನ್ನಲ್ಲೆ ದಾವಣಗೆರೆಯಲ್ಲಿಯೂ ಸಹ ಬಂದ್ ಗೆ ಕರೆಕೊಟ್ಟಿದ್ದಾರೆ.

ದಾವರಣಗೆರೆ ಭಾಗದ ರೈತರು 62 ಸಾವಿರ ಹೆಕ್ಟರ್ ಪ್ರದೇಶದಲ್ಲಿ  ಭತ್ತ ನಾಟಿ ಮಾಡಿದ್ದು ಭದ್ರಾ ಡ್ಯಾಂನಿಂದ ಬೆಳೆಗೆ ನೀರನ್ನು ಹರಿಸುತ್ತಿದ್ದರು . ಆದರೆ ಡ್ಯಾನಿಂದ 100 ದಿನಗಳ ಕಾಲ ನೀರು ಹರಿಸದೆ ಸರ್ಕಾರ ರೈತರ ಜೀವನದ ಜೊತೆ ಆಟವಾಡುತ್ತಿದ್ದಾರೆ. ಇದರಿಂದಾಗಿ ಬೇಸತ್ತ ರೈತರು ಭಾರತದ ರೈತ ಒಕ್ಕೂಟದಿಂದ ನಗರದಲ್ಲಿ ಪ್ರತಿಭಟನೆ ಕೈಗೊಂಡಿದ್ದಾರೆ. ಕಳೆದ 10 ದಿನಗಳಿಂದ ರೈತರು ಹೋರಾಟ ಮಾಡುತ್ತಾ ಬಂದಿದ್ದರೂ  ಸರ್ಕಾರ ಅಥವಾ ಸಚಿವರು ರೈತರು ಕಡೆಗೆ ತಿರುಗಿ ನೋಡುತ್ತಿಲ್ಲ. ಇದರಿಂದ ರೊಚ್ಚಿಗೆದ್ದ ರೈತರು ಇಂದು ದಾವಣಗೆರೆ  ಬಂದ್ ಗೆ ಕರೆ ಕೊಟ್ಟಿದ್ದಾರೆ.

ದಾವಣಗೆರೆಯ ಜಯದೇವ ವೃತ್ತದಿಂದ ಬೈಕ್ ರ್ಯಾಲಿ ಮಾಡುವ ಮೂಲಕ ಪ್ರತಿಭಟನೆ ಕೈಗೊಂಡಿದ್ದಾರೆ. ಇನ್ನು ಈ ಬಂದ್ ಗೆ ಖಾಸಗಿ ಬಸ್ ಮಾಲೀಕರು, ಆಟೋ ಚಾಲಕರು, ಕೆಲ ಕನ್ನಡ ಪರ ಸಂಘಟನೆ, ಆಮ್ ಆದ್ಮಿ ಪಾರ್ಟಿ ಹಾಗೂ ಜಿಲ್ಲಾ ಬಿಜೆಪಿ ಬೆಂಬಲ ಸೂಚಿಸಿದ್ದಾರೆ. ಅಗತ್ಯ ಸೇವೆ ಹೊರತು ಪಡಿಸಿ ಉಳಿದೆಲ್ಲವೂ ಬಂದ್ ಮಾಡಲಾಗಿದೆ.

’75 ವರ್ಷ ನಾವು ಚಿಲ್ಲರೆ ಮೇಲೆ ಕಟ್ಟಿದ ಬುನಾದಿ ಮೇಲೆ ಇವರು ನೋಟು ಮಾಡಿದ್ರು’

ಲೋಕಸಭೆ ಚುನಾವಣೆ ಹಿನ್ನೆಲೆ ಡಿಕೆಶಿ ಮನೆಗೆ ಸವದಿ ಭೇಟಿ: ರಾಜಕೀಯ ಬೆಳವಣಿಗೆ ಬಗ್ಗೆ ಚರ್ಚೆ

ಕಾಂಗ್ರೆಸ್ ಚಿಲ್ಲರೆ ಹೇಳಿಕೆಗೆ ರೆಡ್ಡಿ ಗರಂ: ಅವರು ಸವಲಕು ನಾಣ್ಯವೆಂದು ಪ್ರತಿಕ್ರಿಯೆ

- Advertisement -

Latest Posts

Don't Miss