ದೇಶದ ಮುಖ್ಯಮಂತ್ರಿಗಳ ಆಸ್ತಿ ವಿವರವನ್ನು ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮಸ್ ಸ್ವಯಂಸೇವಾ ಸಂಸ್ಥೆ ಬಿಡುಗಡೆ ಮಾಡಿದೆ. ಇದ್ರಲ್ಲಿ ಕರ್ನಾಟಕ ಮುಖ್ಯಮಂತ್ರಿ ಸಿದ್ಧರಾಮಯ್ಯ 51 ಕೋಟಿ ರು. ಮೌಲ್ಯದ ಆಸ್ತಯೊಂದಿಗೆ ಶ್ರೀಮಂತ ಸಿಎಂ ಗಳ ಪೈಕಿ 3ನೇ ಸ್ಥಾನ ಪಡೆದಿದ್ದಾರೆ.
ಹೌದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವ್ರು 931 ಕೋಟಿ ರು. ಮೌಲ್ಯದ ಆಸ್ತಿಯೊಂದಿಗೆ ಭಾರತದ ನಂ.1 ಧನಿಕ ಸಿಎಂ ಎನಿಸಿಕೊಂಡಿದ್ದಾರೆ. ಇನ್ನು ಅರುಣಾಚಲ ಪ್ರದೇಶದ ಪೆಮಾ ಖಂಡು 332 ಕೋಟಿ ರು. ಆಸ್ತಿಯೊಂದಿಗೆ 2ನೇ ಹಾಗೂ 51 ಕೋಟಿ ರು. ಆಸ್ತಿಯೊಂದಿಗೆ ಸಿದ್ದರಾಮಯ್ಯ 3ನೇ ಸ್ಥಾನ ಪಡೆದಿದ್ದಾರೆ.
ಆದರೆ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಕೇವಲ 15 ಲಕ್ಷರು. ಆಸ್ತಿಯೊಂದಿಗೆ ‘ಅತ್ಯಂತ ಬಡವ ಸಿಎಂ’ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. ಸಿಎಂಗಳ ನಿವ್ವಳ ಆದಾಯ 7.3 ಪಟ್ಟು ಅಧಿಕ: ಭಾರತದ ತಲಾ ನಿವ್ವಳ ರಾಷ್ಟ್ರೀಯ ಆದಾಯ (ಎನ್‌ಎನ್‌ಐ) 2023-2024ರಲ್ಲಿ ಸರಿಸು ಮಾರು 1,85,854 ರು. ಆಗಿದ್ದರೆ, ಮುಖ್ಯ ಮಂತ್ರಿಗಳ ಸರಾಸರಿ ಸ್ವ-ಆದಾಯವು 13,64, 310 ರು. ಆಗಿದೆ. ಇದು ಭಾರತದ ಸರಾಸರಿ ತಲಾ ಆದಾಯಕ್ಕಿಂತ 7.3 ಪಟ್ಟು ಹೆಚ್ಚು.
ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಕೇವಲ 15 ಲಕ್ಷ ರು. ಆಸ್ತಿಯೊಂದಿಗೆ ‘ಅತ್ಯಂತ ಬಡವ ಸಿಎಂ’ ಆಗಿದ್ದರೆ. 55 ಲಕ್ಷ ರು. ಆಸ್ತಿ ಹೊಂದಿರುವ ಜಮ್ಮು- ಕಾಶ್ಮೀರ ಮುಖ್ಯಮಂತ್ರಿ ಒಮರ್‌ಅಬ್ದುಲ್ಲಾ ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ.
ಶೇ. 42ರಷ್ಟು ಮುಖ್ಯಮಂತ್ರಿಗಳು ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಘೋಷಿಸಿಕೊಂಡಿದ್ದರೆ. ಅವರಲ್ಲಿ ಶೇ.32 ಮಂದಿ ಕೊಲೆ ಯತ್ನ, ಅಪಹರಣ, ಲಂಚ ಮತ್ತು ಕ್ರಿಮಿನಲ್ ಬೆದರಿಕೆ ಸೇರಿದಂತೆ ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿಕೊಂಡಿದ್ದಾರೆ. ಇನ್ನು 18 ಸಿಎಂಗಳ ಮೇಲೆ ಯಾವುದೇ ಕ್ರಿಮಿನಲ್ ಕೇಸಿಲ್ಲ. ದೇಶದ 31 ಮುಖ್ಯಮಂತ್ರಿ ಗಳ ಪೈಕಿ ಪ.ಬಂಗಾಳದ ಮಮತಾ ಬ್ಯಾನರ್ಜಿ ಮತ್ತು ದೆಹಲಿಯ ಅತಿಶಿ ಇಬ್ಬರು ಮಹಿಳೆಯರಾಗಿದ್ದಾರೆ.
ಇನ್ನು ಪೆಮಾ ಖಂಡು 180 ಕೋಟಿ ರು.. ಸಾಲ ಹೊಂದಿದ್ದಾರೆ. ಸಿದ್ದರಾಮಯ್ಯ 23 ಕೋಟಿ ರು. ಹಾಗೂ ನಾಯ್ಡು 10 ಕೋಟಿ ರು. ಸಾಲ ಹೊಂದಿದ್ದಾರೆ ಅಂತ ಎಡಿಆರ್ ವರದಿ ತಿಳಿಸಿದೆ. ರಾಜ್ಯ ವಿಧಾನಸಭೆಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರತಿ ಮುಖ್ಯಮಂತ್ರಿಯ ಸರಾಸರಿ ಆಸ್ತಿ 52.59 ಕೋಟಿ ರು. ಎಂದು ವರದಿ ಹೇಳಿದೆ. ದೇಶದ 31 ಮುಖ್ಯಮಂತ್ರಿಗಳ ಒಟ್ಟು ಆಸ್ತಿ ₹1,630 ಕೋಟಿ ಆಗಿದೆ.