Thursday, July 31, 2025

Latest Posts

Karnataka TV: ಶಿಕ್ಷಣ ಮಂತ್ರಿಗಳೇ ಈ ಮಕ್ಕಳ ಪರಿಸ್ಥಿತಿಯನ್ನು ಒಮ್ಮೆ ನೋಡಿ, ಇದಕ್ಕೇನಾದರೂ ವ್ಯವಸ್ಥೆ ಮಾಡಿ..

- Advertisement -

Dharwad News: ಧಾರವಾಡ: ಧಾರವಾಡದ ನವಲಗುಂದ ಪಟ್ಟಣದಲ್ಲಿರುವ ಸರ್ಕಾರಿ ಶಾಲಾ ಬಿಲ್ಡೀಂಗ್‌ನ ಸ್ಥಿತಿಯನ್ನ ಆ ದೇವರೇ ಮೆಚ್ಚಬೇಕಿದೆ. ಏಕೆಂದರೆ, ಆ ಶಾಲೆಯ ಮಕ್ಕಳು ಸುಮಾರು ವರ್ಷಗಳಿಂದ ದೇವಸ್ಥಾನದಲ್ಲೇ ಪಾಠ ಕೇಳುತ್ತಿದ್ದಾರೆ.

ಒಂದರಿಂದ 4ನೆಯ ತರಗತಿಯ ಸರ್ಕಾರಿ ಕಿರಿಯ ಶಾಲಾ ಮಕ್ಕಳಿಗೆ ಸ್ವಂತ ಶಾಲಾ ಕಟ್ಟಡವೇ ಇಲ್ಲ. ಇನ್ನು ಈ ಶಾಲೆ ಹಳ್ಳಿಯಲ್ಲಿ ಇರೋದಲ್ಲ. ಬದಲಾಗಿ ಸಿಟಿಯಲ್ಲೇ ಇರುವ ಶಾಲೆ. ಆದರೂ ಶಾಲೆಗೆ ಸ್ವಂತದ್ದು ಕಟ್ಟಡ ಇಲ್ಲ ಅನ್ನೋದು ವಿಪರ್ಯಾಸದ ಸಂಗತಿ.

ಈ ಶಾಲೆಯ ಮಕ್ಕಳು ಬೇರೆ ವಿಧಿ ಇಲ್ಲದೇ, ನವಲಗುಂದ ಪಟ್ಟಣದ ತಗ್ಗಿನಕೇರಿ ಉಡಚಮ್ಮ ದೇವಸ್ಥಾನದಲ್ಲೇ ಹಲವು ವರ್ಷಗಳಿಂದ ಪಾಠ ಕಲಿಯುತ್ತಿದ್ದಾರೆ. ಮೊದ ಮೊದಲು ಈ ಶಾಲೆಯಲ್ಲಿ 60ಕ್ಕೂ ಹೆಚ್ಚು ಮಕ್ಕಳು ಓದುತ್ತಿದ್ದರು. ಆದರೆ ಇದೀಗ ಸರಿಯಾದ ಕಟ್ಟಡ ಇಲ್ಲದೇ, ಶಿಕ್ಷಕರು ದೇವಸ್ಥಾನದಲ್ಲೇ ನಿತ್ಯ ಪಾಠ ಮಾಡಬೇಕಿದೆ.

ಇನ್ನು ಪುರಸಭೆಯಿಂದ ಶಾಲಾ ಜಾಗಕ್ಕೆ ಠರಾವು ಮಾಡಿದ್ದರೂ ಸಹ ಕಟ್ಟಡ ನಿರ್ಮಾಣಕ್ಕೆ ವಿಳಂಬವಾಗುತ್ತಿದೆ.  ಮಳೆ, ಚಳಿ ಬಿಸಿಲು ಬಂದರೂ ಸಹ ದೇವಸ್ಥಾನದಲ್ಲಿ ವಿದ್ಯಾರ್ಥಿಗಳಿಗೆ ಪಾಠ ಹೇಳಿಕ“ಡಲಾಗುತ್ತಿದೆ. ಸಾರ್ವಜನಿಕರು ಕೂಡ ಶಾಲೆಯ ಕಟ್ಟಡಕ್ಕಾಗಿ ಹೋರಾಟ ನಡೆಸಿದ್ದಾರೆ. ಸರ್ಕಾರ ವಿವಿಧ ರೀತಿ ಭಾಗ್ಯಗಳನ್ನು ರಾಜ್ಯದ ಜನತೆಗೆ ನೀಡಿದೆ. ಆದರೆ ಈ ಮಕ್ಕಳಿಗೆ ಸ್ವಂತ ಶಾಲಾ ಕಟ್ಟಡವೂ ನೀಡಲಿ ಎಂದು ಹೇಳಿದ್ದಾರೆ. ಇನ್ನು ಸರಿಯಾಗಿ ಪಾಠ ಕೇಳುವ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ನಿತ್ಯ ಪರದಾಡುತ್ತಿದ್ದಾರೆ.

- Advertisement -

Latest Posts

Don't Miss