Saturday, July 27, 2024

Latest Posts

ಕರ್ನಾಟಕ ಟಿವಿ ಫೆಬ್ರವರಿ ಸರ್ವೇ 2023 : ಕಲಬುರಗಿ ಜಿಲ್ಲೆ 9 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸೀಟು.?

- Advertisement -

Political News:

ಬೆಂಗಳೂರು : ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಇದೆ. ಈಗಾಗ್ಲೇ ಎಲ್ಲಾ ಪಕ್ಷಗಳು ಬೇರೆ ಬೇರೆ ಹೆಸರಲ್ಲಿ ಯಾತ್ರೆ, ಸಮಾವೇಶ, ಸಮಾರಂಭ, ಕಾರ್ಯಕ್ರಮಗಳನ್ನ ಶುರು ಮಾಡಿವೆ. ಮಾರ್ಚ್​ ಕೊನೇ ವೇಳೆಗೆ ಚುನಾವಣೆ ಘೋಷಣೆಯೂ ಆಗಿರುತ್ತೆ. ಹೀಗಾಗಿ ಯಾವ ಪಕ್ಷಕ್ಕೆ ಬಹುಮತ ಬರುತ್ತೆ.? ಯಾವ ಪಕ್ಷಕ್ಕೆ ಎಷ್ಟು ಸೀಟು ಬರುತ್ತೆ.? ಯಾವ ಕ್ಷೇತ್ರದಲ್ಲಿ ಯಾರು ಗೆಲ್ಲಬಹುದು ಅನ್ನೋ ಕುತೂಹಲ ಇಡೀ ರಾಜ್ಯಾದ್ಯಂತ ಮನೆ ಮಾಡಿದೆ. ಈ ನಡುವೆ, ಕರ್ನಾಟಕದ ನಂಬರ್ 01 ಡಿಜಿಟಲ್ ಮೀಡಿಯಾ, ಕರ್ನಾಟಕ ಟಿವಿ ಡಿಜಿಟಲ್ ಮಾಧ್ಯಮ ಕಳೆದ 4 ತಿಂಗಳಿನಿಂದ ಪ್ರತಿ ತಿಂಗಳು ಎಲ್ಲಾ 224 ಕ್ಷೇತ್ರಗಳ ಟ್ರೆಂಡ್ ನೀಡ್ತಿದೆ. ಅದರಂತೆ ಫೆಬ್ರವರಿಯಲ್ಲಿ ಯಾವ ಪಕ್ಷಕ್ಕೆ ಎಷ್ಟು ಸೀಟು.? ಯಾವ ಜಿಲ್ಲೆಯಲ್ಲಿ ಯಾರ ಪ್ರಾಬಲ್ಯ ಹೇಗಿದೆ.? ಕ್ಷೇತ್ರವಾರು ಟ್ರೆಂಡ್ ಏನು ಅನ್ನೋ ಸಮೀಕ್ಷೆಯನ್ನ ಪ್ರಸಾರ ಮಾಡಿದೆ. ಕರ್ನಾಟಕ ಟಿವಿಯ ಫೆಬ್ರವರಿ ಸರ್ವೆಯ ಟ್ರೆಂಡ್ ನೋಡೋದಾದ್ರೆ..

ಕಲಬುರಗಿ 9 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸೀಟು.?
ಕರ್ನಾಟಕ ಟಿವಿ ಫೆಬ್ರವರಿ ಟ್ರೆಂಡ್​

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ತವರು ಜಿಲ್ಲೆ ಕಲಬುರಗಿ. ಖರ್ಗೆ ಮಗ ಪ್ರಿಯಾಂಕ್ ಖರ್ಗೆಯನ್ನ ಸೋಲಿಸೋಕೆ ಇಡೀ ಬಿಜೆಪಿ ಟೀಂ ನಿಂತಿದೆ. ಈ ಹಿಂದೆ ಖರ್ಗೆ ಅವರನ್ನ ಲೋಕಸಭೆಯಲ್ಲಿ ಬಿಜೆಪಿ ನಾಯಕರು ಸೋಲಿಸಿದ್ರು. ಈಗ ವಿಧಾನಸಭಾ ಎಲೆಕ್ಷನ್ ಸರದಿ ಬಂದಿದೆ. ಘಟಾನುಘಟಿ ನಾಯಕರು ಜಿಲ್ಲೆಯಲ್ಲಿದ್ದಾರೆ. ಧರಂಸಿಂಗ್ ಮಗ ಅಜಯ್ ಸಿಂಗ್, ಮಾಲೀಕಯ್ಯ ಗುತ್ತೇದಾರ್, ಶರಣ್ ಪ್ರಕಾಶ್ ಪಾಟೀಲ್, ಉಮೇಶ್ ಜಾಧವ್ ಸೇರಿದಂತೆ ಸಾಕಷ್ಟು ದೊಡ್ಡ ದೊಡ್ಡ ನಾಯಕರು ಜಿಲ್ಲೆಯಲ್ಲಿದ್ದಾರೆ.

ಕಲಬುರಗಿ ಜಿಲ್ಲೆಯಲ್ಲಿ 9 ವಿಧಾನಸಭಾ ಕ್ಷೇತ್ರಗಳಿದ್ದು, ಸಾಕಷ್ಟು ತೀವ್ರ ಹಣಾಹಣೆಯಿಂದ ಕೂಡಿವೆ. ಕಲಬುರಗಿ ಜಿಲ್ಲೆಯ 9 ಕ್ಷೇತ್ರಗಳಲ್ಲಿ ಯಾವ ಪಕ್ಷಕ್ಕೆ ಎಷ್ಟು ಸೀಟು ಅನ್ನೋ ಕುತೂಹಲಕ್ಕೆ ಕರ್ನಾಟಕ ಟಿವಿ ಫೆಬ್ರವರಿ ಸಮೀಕ್ಷೆಯಲ್ಲಿ ಸಿಕ್ಕ ಉತ್ತರ ಏನಂದ್ರೆ, 9 ಕ್ಷೇತ್ರಗಳಲ್ಲಿ ಬಿಜೆಪಿ 4 ರಲ್ಲಿ ಮುನ್ನಡೆ ಸಾಧಿಸಿದ್ರೆ, ಕಾಂಗ್ರೆಸ್ 5 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

ಕಲಬುರಗಿ ಜಿಲ್ಲೆ 9 ಕ್ಷೇತ್ರ
ಕರ್ನಾಟಕ ಟಿವಿ ಫೆಬ್ರವರಿ ಟ್ರೆಂಡ್​

ಬಿಜೆಪಿ – 4
ಕಾಂಗ್ರೆಸ್​ – 5

ಕಲಬುರಗಿ ಯಾವ ಕ್ಷೇತ್ರಗಳಲ್ಲಿ ಯಾವ ಪಕ್ಷಕ್ಕೆ ಮುನ್ನಡೆ.?
ಕರ್ನಾಟಕ ಟಿವಿ ಫೆಬ್ರವರಿ ಟ್ರೆಂಡ್​

ಅಫ್ಜಲ್​​ಪುರ : ಬಿಜೆಪಿ ಮುನ್ನಡೆ
ಜೇವರ್ಗಿ : ಕಾಂಗ್ರೆಸ್ ಮುನ್ನಡೆ
ಚಿತ್ತಾಪುರ : ಕಾಂಗ್ರೆಸ್ ಮುನ್ನಡೆ
ಸೇಡಂ : ಕಾಂಗ್ರೆಸ್​ ಮುನ್ನಡೆ
ಚಿಂಚೋಳಿ : ಬಿಜೆಪಿ ಮುನ್ನಡೆ
ಕಲಬುರಗಿ ಗ್ರಾಮೀಣ : ಬಿಜೆಪಿ ಮುನ್ನಡೆ
ಕಲಬುರಗಿ ದಕ್ಷಿಣ : ಬಿಜೆಪಿ ಮುನ್ನಡೆ
ಕಲಬುರಗಿ ಉತ್ತರ : ಕಾಂಗ್ರೆಸ್ ಮುನ್ನಡೆ
ಆಳಂದ : ಕಾಂಗ್ರೆಸ್ ಮುನ್ನಡೆ

ಇದು ಫೆಬ್ರವರಿ ಟ್ರೆಂಡ್ ಮಾತ್ರ ಅಷ್ಟೇ. ಇನ್ನೂ ಅಭ್ಯರ್ಥಿಗಳ ಪಟ್ಟಿ ಅಧಿಕೃತವಾಗಿ ಪ್ರಕಟವಾಗಿಲ್ಲ. ಅಭ್ಯರ್ಥಿಗಳ ಪಟ್ಟಿ ಅಧಿಕೃತವಾಗಿ ಪ್ರಕಟವಾದ ಬಳಿಕ ಜೊತೆಗೆ ಚುನಾವಣೆ ಘೋಷಣೆಯಾದ ಬಳಿಕ ಟ್ರೆಂಡ್​ನಲ್ಲಿ ಸಾಕಷ್ಟು ಬದಲಾವಣೆ ಆಗೋ ಸಾಧ್ಯತೆ ಇದೆ. ನೀವೂ ಕೂಡ ನಿಮ್ಮ ಅಭಿಪ್ರಾಯವನ್ನ ಕಾಮೆಂಟ್​​ನಲ್ಲಿ ತಿಳಿಸಬಹುದು. ನಿಮ್ಮ ಕ್ಷೇತ್ರ ಯಾವುದು.? ನಿಮ್ಮ ಕ್ಷೇತ್ರದಲ್ಲಿ ಯಾರ್ ಆಗ್ತಾರೆ ಶಾಸಕರು.? ಕಾಮೆಂಟ್ ಮಾಡಿ, ನಿಮ್ಮ ಅಭಿಪ್ರಾಯ ತಿಳಿಸಿ.

ಪೊಲಿಟಿಕಲ್ ಬ್ಯುರೋ, ಕರ್ನಾಟಕ ಟಿವಿ.

ಕರ್ನಾಟಕ ಟಿವಿ ಫೆಬ್ರವರಿ ಸರ್ವೇ 2023 : ಚಿಕ್ಕಬಳ್ಳಾಪುರ ಜಿಲ್ಲೆಯ 5 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸೀಟು.?

ಕರ್ನಾಟಕ ಟಿವಿ ಫೆಬ್ರವರಿ ಸರ್ವೇ 2023 : ಕೋಲಾರ ಜಿಲ್ಲೆಯ 6 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸೀಟು.?

ಕರ್ನಾಟಕ ಟಿವಿ ಫೆಬ್ರವರಿ ಸರ್ವೇ 2023 : ಬೆಂಗಳೂರು ಗ್ರಾಮಾಂತರ ಜಿಲ್ಲೆಯ 4 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸೀಟು.?

ಕರ್ನಾಟಕ ಟಿವಿ ಫೆಬ್ರವರಿ ಸರ್ವೇ 2023 : ಉತ್ತರ ಕನ್ನಡ ಜಿಲ್ಲೆಯ 6 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸೀಟು.?

ಕರ್ನಾಟಕ ಟಿವಿ ಫೆಬ್ರವರಿ ಸರ್ವೇ 2023 : ಚಿಕ್ಕಮಗಳೂರು 5 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸೀಟು.?

ಕರ್ನಾಟಕ ಟಿವಿ ಫೆಬ್ರವರಿ ಸರ್ವೇ 2023 : ಶಿವಮೊಗ್ಗ 7 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸೀಟು.?

ಕರ್ನಾಟಕ ಟಿವಿ ಫೆಬ್ರವರಿ ಸರ್ವೇ 2023 : ಚಿತ್ರದುರ್ಗ 6 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸೀಟು.?

ಕರ್ನಾಟಕ ಟಿವಿ ಫೆಬ್ರವರಿ ಸರ್ವೇ 2023 : ಕಲ್ಯಾಣ ಕರ್ನಾಟಕದ 41 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸೀಟು.?

ಕರ್ನಾಟಕ ಟಿವಿ ಫೆಬ್ರವರಿ ಸರ್ವೇ 2023 : ಬಳ್ಳಾರಿ-ವಿಜಯನಗರ 10 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸೀಟು.? ರೆಡ್ಡಿ ಕಥೆ ಏನು.?

ಕರ್ನಾಟಕ ಟಿವಿ ಫೆಬ್ರವರಿ ಸರ್ವೇ 2023 : ಕೊಪ್ಪಳದ 5 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸೀಟು.? ರೆಡ್ಡಿ ಕಥೆ ಏನು.?

- Advertisement -

Latest Posts

Don't Miss