Tuesday, July 22, 2025

Latest Posts

ಕರ್ನಾಟಕ ಟಿವಿ ಫೆಬ್ರವರಿ ಸರ್ವೇ 2023 : ತುಮಕೂರು ಜಿಲ್ಲೆಯ 11 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸೀಟು.?

- Advertisement -

Political News:

Feb:26:ಬೆಂಗಳೂರು : ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಇದೆ. ಈಗಾಗ್ಲೇ ಎಲ್ಲಾ ಪಕ್ಷಗಳು ಬೇರೆ ಬೇರೆ ಹೆಸರಲ್ಲಿ ಯಾತ್ರೆ, ಸಮಾವೇಶ, ಸಮಾರಂಭ, ಕಾರ್ಯಕ್ರಮಗಳನ್ನ ಶುರು ಮಾಡಿವೆ. ಮಾರ್ಚ್​ ಕೊನೇ ವೇಳೆಗೆ ಚುನಾವಣೆ ಘೋಷಣೆಯೂ ಆಗಿರುತ್ತೆ. ಹೀಗಾಗಿ ಯಾವ ಪಕ್ಷಕ್ಕೆ ಬಹುಮತ ಬರುತ್ತೆ.? ಯಾವ ಪಕ್ಷಕ್ಕೆ ಎಷ್ಟು ಸೀಟು ಬರುತ್ತೆ.? ಯಾವ ಕ್ಷೇತ್ರದಲ್ಲಿ ಯಾರು ಗೆಲ್ಲಬಹುದು ಅನ್ನೋ ಕುತೂಹಲ ಇಡೀ ರಾಜ್ಯಾದ್ಯಂತ ಮನೆ ಮಾಡಿದೆ. ಈ ನಡುವೆ, ಕರ್ನಾಟಕದ ನಂಬರ್ 01 ಡಿಜಿಟಲ್ ಮೀಡಿಯಾ, ಕರ್ನಾಟಕ ಟಿವಿ ಡಿಜಿಟಲ್ ಮಾಧ್ಯಮ ಕಳೆದ 4 ತಿಂಗಳಿನಿಂದ ಪ್ರತಿ ತಿಂಗಳು ಎಲ್ಲಾ 224 ಕ್ಷೇತ್ರಗಳ ಟ್ರೆಂಡ್ ನೀಡ್ತಿದೆ. ಅದರಂತೆ ಫೆಬ್ರವರಿಯಲ್ಲಿ ಯಾವ ಪಕ್ಷಕ್ಕೆ ಎಷ್ಟು ಸೀಟು.? ಯಾವ ಜಿಲ್ಲೆಯಲ್ಲಿ ಯಾರ ಪ್ರಾಬಲ್ಯ ಹೇಗಿದೆ.? ಕ್ಷೇತ್ರವಾರು ಟ್ರೆಂಡ್ ಏನು ಅನ್ನೋ ಸಮೀಕ್ಷೆಯನ್ನ ಪ್ರಸಾರ ಮಾಡಿದೆ. ಕರ್ನಾಟಕ ಟಿವಿಯ ಫೆಬ್ರವರಿ ಸರ್ವೆಯ ಟ್ರೆಂಡ್ ನೋಡೋದಾದ್ರೆ..

ತುಮಕೂರು 11ರಲ್ಲಿ ಯಾರಿಗೆ ಎಷ್ಟು ಸೀಟು.?
ಕರ್ನಾಟಕ ಟಿವಿ ಫೆಬ್ರವರಿ ಟ್ರೆಂಡ್​

ಹಳೇ ಮೈಸೂರು ಭಾಗದ ಮೊದಲ ಜಿಲ್ಲೆ ತುಮಕೂರು. ತುಮಕೂರು ಜಿಲ್ಲೆಯಲ್ಲಿ 11 ವಿಧಾನಸಭಾ ಕ್ಷೇತ್ರಗಳು ಬರುತ್ವೆ. ಒಂದ್ ಕಡೆ ನಾನು ಗೆದ್ರೆ ಸಿಎಂ ಆಗ್ತೀನಿ ಅನ್ನೋ ಭರವಸೆಯಲ್ಲಿ ಮಾಜಿ ಡಿಸಿಎಂ ಪರಮೇಶ್ವರ್ ಇದ್ದಾರೆ. ಕುಮಾರಸ್ವಾಮಿ ಪಂಚರತ್ನ ಯಾತ್ರೆ ಜೋಶ್​ ನಲ್ಲಿದ್ದಾರೆ. ಬಿಜೆಪಿಗೆ ಮುದ್ದಹನುಮೇಗೌಡರು ಹೋಗಿರೋದ್ರಿಂದ ಸ್ವಲ್ಪ ಪಾಲಿಟಿವ್ ಆಗುವ ಲೆಕ್ಕಾಚಾರದಲ್ಲಿದ್ದಾರೆ. ಗುಬ್ಬಿ ಶಾಸಕ ಶ್ರೀನಿವಾಸ್ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರ್ತಿದ್ದಾರೆ. ಮತ್ತೊಂದೆಡೆ ಸಚಿವ ಸೋಮಣ್ಣ ಮಗ ಅರುಣ್ ಸೋಮಣ್ಣ ಗುಬ್ಬಿಗೆ ಬರ್ತಾರಂತೆ ಅನ್ನೋ ಚರ್ಚೆ. ಹೀಗೆ ಸಾಕಷ್ಟು ಕುತೂಹಲದ ಜೊತೆ 11 ಕ್ಷೇತ್ರಗಳಲ್ಲಿ ಯಾರು ಹೆಚ್ಚು ಗೆಲ್ತಾರೋ ಅವರು ಅಧಿಕಾರದ ಚುಕ್ಕಾಣಿ ಹಿಡಿಯುತ್ತಾರೆ ಅನ್ನೋ ನಂಬಿಕೆ ಬೇರೆ ಇದೆ.

ಸದ್ಯ ತುಮಕೂರು ಜಿಲ್ಲೆಯ 11 ಕ್ಷೇತ್ರಗಳಲ್ಲಿ ಯಾವ ಪಕ್ಷಕ್ಕೆ ಎಷ್ಟು ಸೀಟು ಅನ್ನೋ ಕುತೂಹಲಕ್ಕೆ ಕರ್ನಾಟಕ ಟಿವಿ ಫೆಬ್ರವರಿ ಸಮೀಕ್ಷೆಯಲ್ಲಿ ಸಿಕ್ಕ ಉತ್ತರ ಏನಂದ್ರೆ, 11 ಕ್ಷೇತ್ರಗಳಲ್ಲಿ ಬಿಜೆಪಿ 2 ರಲ್ಲಿ ಮುನ್ನಡೆ ಸಾಧಿಸಿದ್ರೆ, ಕಾಂಗ್ರೆಸ್ 3 ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಜೆಡಿಎಸ್ 6 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

ತುಮಕೂರು 11 ಕ್ಷೇತ್ರ ಯಾರಿಗೆ ಎಷ್ಟು.?
ಕರ್ನಾಟಕ ಟಿವಿ ಫೆಬ್ರವರಿ ಟ್ರೆಂಡ್​

ಬಿಜೆಪಿ – 2
ಕಾಂಗ್ರೆಸ್​ – 3
ಜೆಡಿಎಸ್ – 6

ತುಮಕೂರು ಯಾವ ಕ್ಷೇತ್ರಗಳಲ್ಲಿ ಯಾವ ಪಕ್ಷಕ್ಕೆ ಮುನ್ನಡೆ.?
ಕರ್ನಾಟಕ ಟಿವಿ ಫೆಬ್ರವರಿ ಟ್ರೆಂಡ್​

ಚಿಕ್ಕನಾಯಕನಹಳ್ಳಿ : ಜೆಡಿಎಸ್ ಮುನ್ನಡೆ
ತಿಪಟೂರು : ಕಾಂಗ್ರೆಸ್ ಮುನ್ನಡೆ
ತುರುವೇಕೆರೆ : ಜೆಡಿಎಸ್ ಮುನ್ನಡೆ
ಕುಣಿಗಲ್ : ಜೆಡಿಎಸ್ ಮುನ್ನಡೆ
ತುಮಕೂರು ಸಿಟಿ : ಬಿಜೆಪಿ ಮುನ್ನಡೆ
ತುಮಕೂರು ರೂರಲ್ : ಜೆಡಿಎಸ್ ಮುನ್ನಡೆ
ಕೊರಟಗೆರೆ : ಕಾಂಗ್ರೆಸ್ ಮುನ್ನಡೆ
ಗುಬ್ಬಿ : ಕಾಂಗ್ರೆಸ್ ಮುನ್ನಡೆ
ಶಿರಾ : ಬಿಜೆಪಿ ಮುನ್ನಡೆ
ಪಾವಗಡ : ಜೆಡಿಎಸ್ ಮುನ್ನಡೆ
ಮಧುಗರಿ : ಜೆಡಿಎಸ್ ಮುನ್ನಡೆ

ಇದು ಫೆಬ್ರವರಿ ಟ್ರೆಂಡ್ ಮಾತ್ರ ಅಷ್ಟೇ. ಇನ್ನೂ ಅಭ್ಯರ್ಥಿಗಳ ಪಟ್ಟಿ ಅಧಿಕೃತವಾಗಿ ಪ್ರಕಟವಾಗಿಲ್ಲ. ಅಭ್ಯರ್ಥಿಗಳ ಪಟ್ಟಿ ಅಧಿಕೃತವಾಗಿ ಪ್ರಕಟವಾದ ಬಳಿಕ ಜೊತೆಗೆ ಚುನಾವಣೆ ಘೋಷಣೆಯಾದ ಬಳಿಕ ಟ್ರೆಂಡ್​ನಲ್ಲಿ ಸಾಕಷ್ಟು ಬದಲಾವಣೆ ಆಗೋ ಸಾಧ್ಯತೆ ಇದೆ. ನೀವೂ ಕೂಡ ನಿಮ್ಮ ಅಭಿಪ್ರಾಯವನ್ನ ಕಾಮೆಂಟ್​​ನಲ್ಲಿ ತಿಳಿಸಬಹುದು. ನಿಮ್ಮ ಕ್ಷೇತ್ರ ಯಾವುದು.? ನಿಮ್ಮ ಕ್ಷೇತ್ರದಲ್ಲಿ ಯಾರ್ ಆಗ್ತಾರೆ ಶಾಸಕರು.? ಕಾಮೆಂಟ್ ಮಾಡಿ, ನಿಮ್ಮ ಅಭಿಪ್ರಾಯ ತಿಳಿಸಿ.

ಪೊಲಿಟಿಕಲ್ ಬ್ಯುರೋ, ಕರ್ನಾಟಕ ಟಿವಿ.

ಕರ್ನಾಟಕ ಟಿವಿ ಫೆಬ್ರವರಿ ಸರ್ವೇ 2023 : ಕಲಬುರಗಿ ಜಿಲ್ಲೆ 9 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸೀಟು.?

ಕರ್ನಾಟಕ ಟಿವಿ ಫೆಬ್ರವರಿ ಸರ್ವೇ 2023 : ಚಿಕ್ಕಬಳ್ಳಾಪುರ ಜಿಲ್ಲೆಯ 5 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸೀಟು.?

ಕರ್ನಾಟಕ ಟಿವಿ ಫೆಬ್ರವರಿ ಸರ್ವೇ 2023 : ಕೋಲಾರ ಜಿಲ್ಲೆಯ 6 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸೀಟು.?

ಕರ್ನಾಟಕ ಟಿವಿ ಫೆಬ್ರವರಿ ಸರ್ವೇ 2023 : ಬೆಂಗಳೂರು ಗ್ರಾಮಾಂತರ ಜಿಲ್ಲೆಯ 4 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸೀಟು.?

ಕರ್ನಾಟಕ ಟಿವಿ ಫೆಬ್ರವರಿ ಸರ್ವೇ 2023 : ಉತ್ತರ ಕನ್ನಡ ಜಿಲ್ಲೆಯ 6 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸೀಟು.?

ಕರ್ನಾಟಕ ಟಿವಿ ಫೆಬ್ರವರಿ ಸರ್ವೇ 2023 : ದಕ್ಷಿಣ ಕನ್ನಡ ಜಿಲ್ಲೆಯ 8 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸೀಟು.?

ಕರ್ನಾಟಕ ಟಿವಿ ಫೆಬ್ರವರಿ ಸರ್ವೇ 2023 : ಚಿಕ್ಕಮಗಳೂರು 5 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸೀಟು.?

ಕರ್ನಾಟಕ ಟಿವಿ ಫೆಬ್ರವರಿ ಸರ್ವೇ 2023 : ಶಿವಮೊಗ್ಗ 7 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸೀಟು.?

ಕರ್ನಾಟಕ ಟಿವಿ ಫೆಬ್ರವರಿ ಸರ್ವೇ 2023 : ದಾವಣಗೆರೆ 7 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸೀಟು.?

ಕರ್ನಾಟಕ ಟಿವಿ ಫೆಬ್ರವರಿ ಸರ್ವೇ 2023 : ದಾವಣಗೆರೆ 7 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸೀಟು.?

ಕರ್ನಾಟಕ ಟಿವಿ ಫೆಬ್ರವರಿ ಸರ್ವೇ 2023 : ಚಿತ್ರದುರ್ಗ 6 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸೀಟು.?

ಕರ್ನಾಟಕ ಟಿವಿ ಫೆಬ್ರವರಿ ಸರ್ವೇ 2023 : ಕಲ್ಯಾಣ ಕರ್ನಾಟಕದ 41 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸೀಟು.?

ಕರ್ನಾಟಕ ಟಿವಿ ಫೆಬ್ರವರಿ ಸರ್ವೇ 2023 : ಬಳ್ಳಾರಿ-ವಿಜಯನಗರ 10 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸೀಟು.? ರೆಡ್ಡಿ ಕಥೆ ಏನು.?

ಕರ್ನಾಟಕ ಟಿವಿ ಫೆಬ್ರವರಿ ಸರ್ವೇ 2023 : ರಾಯಚೂರು 7 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸೀಟು.?

ಕರ್ನಾಟಕ ಟಿವಿ ಫೆಬ್ರವರಿ ಸರ್ವೇ 2023 : ಬೀದರ್ ಜಿಲ್ಲೆ 6 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸೀಟು.?

ಕರ್ನಾಟಕ ಟಿವಿ ಫೆಬ್ರವರಿ ಸರ್ವೇ 2023 : ಯಾದಗಿರಿ ಜಿಲ್ಲೆಯ 4 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸೀಟು.?

ಕರ್ನಾಟಕ ಟಿವಿ ಫೆಬ್ರವರಿ ಸರ್ವೇ 2023 : ಕಿತ್ತೂರು ಕರ್ನಾಟಕದ 50 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸೀಟು.?

- Advertisement -

Latest Posts

Don't Miss