Saturday, July 27, 2024

Latest Posts

ಕರ್ನಾಟಕ ಟಿವಿ ಜನವರಿ ಸರ್ವೇ. ಕಲ್ಯಾಣ ಕರ್ನಾಟಕದ 41 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸ್ಥಾನ.?

- Advertisement -

karnataka TV megha survey:

ಬೆಂಗಳೂರು :

ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನ ಬಾಕಿ ಇದೆ. ಮಾರ್ಚ್ ಮೊದಲ ವಾರದಲ್ಲೇ ಚುನಾವಣೆ ಘೋಷಣೆ ಆಗಬಹುದು. ಈ ನಡುವೆ, ಕರ್ನಾಟಕದ ನಂಬರ್ ಒನ್ ಡಿಜಿಟಲ್ ಮೀಡಿಯಾ, ಕರ್ನಾಟಕ ಟಿವಿ ಜನವರಿ ಸಮೀಕ್ಷೆಯನ್ನ ಪ್ರಸಾರ ಮಾಡಿದೆ. ಕಳೆದ 4 ತಿಂಗಳಿನಿಂದ ಪ್ರತಿ ತಿಂಗಳು, ಆಯಾ ತಿಂಗಳ ಟ್ರೆಂಡ್ ಕೊಡ್ತಿರೋ ಕರ್ನಾಟಕ ಟಿವಿ, ಜನವರಿಯಲ್ಲೂ ಸಮೀಕ್ಷೆಯನ್ನ ಪ್ರಸಾರ ಮಾಡಿದೆ.

ಸದ್ಯ ರಾಜ್ಯದಲ್ಲಿ ಈಗಲೂ ಅತಂತ್ರ ಫಲಿತಾಂಶ ಬರಲಿದೆ ಅನ್ನೋದು ಕರ್ನಾಟಕ ಟಿವಿಯ ಜನವರಿ ಟ್ರೆಂಡ್. ಈ ಕ್ಷಣಕ್ಕೆ ಜೆಡಿಎಸ್ ಪಕ್ಷ ಮಾತ್ರ 93 ಅಭ್ಯರ್ಥಿಗಳ ಪಟ್ಟಿಯನ್ನ ಘೋಷಣೆ ಮಾಡಿದೆ. ಹೀಗಾಗಿ, ಕೆಲವೊಂದು ಕ್ಷೇತ್ರಗಳಲ್ಲಿ ಜೆಡಿಎಸ್ ಮುನ್ನಡೆ ಕಾಯ್ದುಕೊಂಡಿದೆ. ಜೆಡಿಎಸ್ ಅಭ್ಯರ್ಥಿ ಫೈನಲ್ ಆಗಿರೋ ಬಹುತೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್, ಬಿಜೆಪಿಗೆ ಇನ್ನೂ ಅಭ್ಯರ್ಥಿಗಳ ಗೊಂದಲ ಇದೆ. ಕರ್ನಾಟಕ ಟಿವಿಯ ಜನವರಿ ಸರ್ವೇ ಪ್ರಕಾರ, 224 ಕ್ಷೇತ್ರಗಳ ಪೈಕಿ ಬಿಜೆಪಿ 99, ಕಾಂಗ್ರೆಸ್ 79, ಜೆಡಿಎಸ್ 41, ಆಮ್ ಆದ್ಮಿ ಪಕ್ಷ 2, ಕಲ್ಯಾಣ ರಾಜ್ಯ ಪ್ರಗತಿ ಪಕ್ಷ 1, ಪಕ್ಷೇತರರು 2 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದುಕೊಂಡಿದ್ದಾರೆ.

ಕರ್ನಾಟಕ ಟಿವಿ ಜನವರಿ ಟ್ರೆಂಡ್

ಪಕ್ಷ

ಬಿಜೆಪಿ – 99
ಕಾಂಗ್ರೆಸ್ – 79
ಜೆಡಿಎಸ್ – 41
ಆಪ್​ – 02
ಕೆಆರ್​​ ಪಿಪಿ – 01
ಪಕ್ಷೇತರ – 02

ಕಲ್ಯಾಣ ಕರ್ನಾಟಕದಲ್ಲಿ ಯಾವ ಪಕ್ಷಕ್ಕೆ ಎಷ್ಟು ಸೀಟು.?

ಕಲ್ಯಾಣ ಕರ್ನಾಟಕದಲ್ಲಿ ಏಳು ಜಿಲ್ಲೆ ಬರುತ್ತೆ. ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ. ಒಟ್ಟು 41 ಕ್ಷೇತ್ರಗಳು ಕಲ್ಯಾಣ ಕರ್ನಾಟಕ ಭಾಗಕ್ಕೆ ಬರುತ್ತೆ. ಬಿಜೆಪಿ ಎಸ್​​ ಸಿ – ಎಸ್​ ಟಿ ಮೀಸಲಾತಿ ಹೆಚ್ಚಳ ವಿಚಾರವನ್ನ ಎನ್ ಕ್ಯಾಷ್ ಮಾಡಿಕೊಳ್ಳಲು ರೆಡಿಯಾಗಿದ್ರೆ, ಜನಾರ್ದನ ರೆಡ್ಡಿ ಪಕ್ಷ ಘೋಷಣೆ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳಿಗೆ ಹಿನ್ನಡೆ ಆಗೋ ಚಾನ್ಸ್ ಇದೆ. ಕಲ್ಯಾಣ ಕರ್ನಾಟಕದ 41 ಕ್ಷೇತ್ರಗಳ ಪೈಕಿ ಬಿಜೆಪಿ 14, ಕಾಂಗ್ರೆಸ್ 21, ಜೆಡಿಎಸ್ 4, ರೆಡ್ಡಿ ಪಕ್ಷ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ 1 ಹಾಗೂ ಆಪ್​ ಒಂದು ಕ್ಷೇತ್ರದಲ್ಲಿ ಮುನ್ನಡೆ ಪಡೆದುಕೊಂಡಿದೆ. ರೆಡ್ಡಿ ಹಾಗೂ ಆಪ್ ಪಕ್ಷ ಮುಂದಿನ ದಿನಗಳಲ್ಲಿ ಮತ್ತಷ್​ಟು ಡ್ಯಾಮೇಜ್ ಮಾಡುವ ಸಾಧ್ಯತೆ ಇದೆ.

ಕಲ್ಯಾಣ ಕರ್ನಾಟಕ (41)
ಕರ್ನಾಟಕ ಟಿವಿ ಜನವರಿ ಟ್ರೆಂಡ್

ಬಿಜೆಪಿ – 14
ಕಾಂಗ್ರೆಸ್ – 21
ಜೆಡಿಎಸ್ – 04
ಕೆ ಆರ್ ಪಿ ಪಿ – 01
ಆಪ್ – 01

ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಅನ್ನೋದನ್ನ ನೋಡೋದಾದ್ರೆ..

ಕಲ್ಯಾಣ ಕರ್ನಾಟಕ
ಜಿಲ್ಲೆ ಬಿಜೆಪಿ ಕಾಂಗ್ರೆಸ್ ಜೆಡಿಎಸ್​ ಇತರೆ
ಕಲಬುರಗಿ (9) – 05 04 00 00
ಯಾದಗಿರಿ (4) – 02 01 01 00
ಬೀದರ್ (6) – 01 04 01 01 (ಆಪ್)
ರಾಯಚೂರು (7) – 01 03 03 00
ಕೊಪ್ಪಳ (5) – 02 02 00 01 (ರೆಡ್ಡಿ ಪಕ್ಷ)
ಬಳ್ಳಾರಿ/ವಿಜಯನಗರ (10)- 03 07 00 00

ಕಲ್ಯಾಣ ಕರ್ನಾಟಕದಲ್ಲಿ ಜನಾರ್ದನ ರೆಡ್ಡಿ ಪಕ್ಷದ ಎಂಟ್ರಿಯಿಂದಾಗಿ ಮತ್ತಷ್ಟು ಬದಲಾವಣೆ ಆಗಬಹುದು. ಕೇವಲ ಬಿಜೆಪಿಗಷ್ಟೇ ಅಲ್ಲ. ಕಾಂಗ್ರೆಸ್​​ ಗೂ ಹೊಡೆತ ಇದೆ. ಪಕ್ಷಗಳ ಅಭ್ಯರ್ಥಿಗಳ ಪಟ್ಟಿ ಫೈನಲ್ ಆದ್ಮೇಲೆ, ಸಾಕಷ್ಟು ಬದಲಾವಣೆ ನಿರೀಕ್ಷೆ ಮಾಡಬಹುದು. ಕರ್ನಾಟಕ ಟಿವಿ ಮತ್ತೆ ಫೆಬ್ರವರಿಗೂ ಟ್ರೆಂಡ್ ನೀಡಲಿದೆ. ಅಷ್ಟೊತ್ತಿಗಾಗಲೇ ಕಾಂಗ್ರೆಸ್ ತನ್ನ ಮೊದಲ ಪಟ್ಟಿ ಪ್ರಕಟ ಮಾಡಲಿದೆ. ಹೀಗಾಗಿ, ಫೆಬ್ರವರಿ ಟ್ರೆಂಡ್ ಸಾಕಷ್ಟು ಕುತೂಹಲವನ್ನ ಮೂಡಿಸಿದೆ.

ಕರ್ನಾಟಕ ಟಿವಿ, ಬೆಂಗಳೂರು..

ಕರ್ನಾಟಕ ಟಿವಿ ಜನವರಿ ಸರ್ವೇ. ಕಿತ್ತೂರು ಕರ್ನಾಟಕದ 50 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸ್ಥಾನ.?

ಕರ್ನಾಟಕ ಟಿವಿ ಜನವರಿ ಸರ್ವೇ | ಯಾವ ಪಕ್ಷಕ್ಕೆ ಎಷ್ಟು ಸೀಟು..? ಹೇಗಿದೆ ಕರ್ನಾಟಕದಲ್ಲಿ ಎಲೆಕ್ಷನ್ ಟ್ರೆಂಡ್.?

“ನನ್ನ ಮೇಲೆ ಷಡ್ಯಂತ್ರ ರೂಪಿಸೋಕೆ ಯಾರಿಗೂ ಧೈರ್ಯ ಇಲ್ಲ” : ಆರ್.ಅಶೋಕ್

- Advertisement -

Latest Posts

Don't Miss