Friday, October 18, 2024

Latest Posts

ಕರ್ನಾಟಕ ವಿಧಾನಸಭೆ ಅತಂತ್ರ..!? ಕರ್ನಾಟಕ ಟಿವಿ ಡಿಸೆಂಬರ್​ ಸರ್ವೇ ಟ್ರೆಂಡ್

- Advertisement -

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನು ಕೇವಲ 4 ತಿಂಗಳು ಮಾತ್ರ ಬಾಕಿ ಇವೆ. ಈ ನಡುವೆ, ಎಲ್ಲಾ ಪಕ್ಷಗಳು ಚುನಾವಣೆಗೆ ತಯಾರಾಗಿದ್ದು, ಯಾವ ಪಕ್ಷಕ್ಕೆ ಎಷ್ಟು ಸೀಟು ಬರುತ್ತೆ ಎಂಬ ಲೆಕ್ಕಾಚಾರದಲ್ಲಿವೆ. ಈ ನಡುವೆ ಕಾಂಗ್ರೆಸ್, ಬಿಜೆಪಿ ಸೇರಿದಂತೆ ಜೆಡಿಎಸ್ ಕೂಡ ಆಂತರಿಕ ಸಮೀಕ್ಷೆ ಮಾಡಿಸಿದ್ದು, ಸಾಕಷ್ಟು ಚರ್ಚೆ ಆಗುತ್ತಿದೆ.

ಕರ್ನಾಟಕ ಟಿವಿ ಡಿಜಿಟಲ್ ಹೊಸ ಇತಿಹಾಸ.!

ಕರ್ನಾಟಕ ಟಿವಿ ಡಿಜಿಟಲ್ ಮಾಧ್ಯಮ, ಮಾಧ್ಯಮ ಇತಿಹಾಸದಲ್ಲಿ ಮೊದಲ ಬಾರಿಗೆ ಎಲ್ಲಾ 224 ಕ್ಷೇತ್ರಗಳ ಬಗ್ಗೆ ಸವಿಸ್ತಾರವಾದ ಸಮೀಕ್ಷೆ ನಡೆಸಿ ಪ್ರಸಾರ ಮಾಡಿದೆ. ಕರ್ನಾಟಕ ಟಿವಿ ಡಿಜಿಟಲ್ ಮಾಧ್ಯಮ ಪ್ರತಿ ತಿಂಗಳು, ಸರ್ವೇಯನ್ನ ಪ್ರಸಾರ ಮಾಡ್ತಿದೆ. ಅಕ್ಟೋಬರ್, ನವೆಂಬರ್​ ನಲ್ಲೂ ಸಮೀಕ್ಷಾ ವರದಿ ಪ್ರಕಟಿಸಿತ್ತು. ಈಗ ಡಿಸೆಂಬರ್​ 26ರಂದು ರಾಜ್ಯದ 224 ಕ್ಷೇತ್ರಗಳ ಸಮೀಕ್ಷೆಯನ್ನ ಪ್ರಕಟಿಸಿ ಹೊಸ ಇತಿಹಾಸ ಸೃಷ್ಟಿಸಿದೆ.

ಯಾವ ಪಕ್ಷಕ್ಕೆ ಎಷ್ಟು ಸೀಟು.?

ಕರ್ನಾಟಕ ಟಿವಿ ಡಿಜಿಟಲ್ ಮಾಧ್ಯಮದ ಪ್ರೆಡಿಕ್ಷನ್ ಪ್ರಕಾರ ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಅತಂತ್ರ ವಿಧಾನಸಭೆ ಆಗುವ ಸಾಧ್ಯತೆ ಇದೆ. ಇದು ಕೇವಲ ಡಿಸೆಂಬರ್ ಸಮೀಕ್ಷೆ. ಜನವರಿಗೆ ಚಿತ್ರಣ ಬದಲಾಗಬಹುದು. ಇದೇ ಅಂತಿಮವೂ ಅಲ್ಲ. ಆದ್ರೆ, ಡಿಸೆಂಬರ್​ನಲ್ಲಿ ಯಾವ ಪಕ್ಷಕ್ಕೆ ಎಷ್ಟು ಸೀಟು ಅನ್ನೋದನ್ನ ನೋಡೋದಾದ್ರೆ..

ಬಿಜೆಪಿ – 93
ಕಾಂಗ್ರೆಸ್​ – 87
ಜೆಡಿಎಸ್ – 39
ಇತರೆ – 05

ಜನಾರ್ದನ ರೆಡ್ಡಿ ಪಕ್ಷ ಮ್ಯಾಜಿಕ್ ಎಷ್ಟು.?

ಕರ್ನಾಟಕ ಟಿವಿ ಡಿಜಿಟಲ್ ಮಾಧ್ಯಮ ತಮ್ಮ ಸರ್ವೆಯಲ್ಲಿ ಜನಾರ್ದನ ರೆಡ್ಡಿ ಪಕ್ಷವನ್ನೂ ಪರಿಗಣಿಸಿದೆ. ಡಿಸೆಂಬರ್ 25ರಂದು ರೆಡ್ಡಿ ಪಕ್ಷ ಪ್ರಕಟಿಸಿದ್ರು. ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಅನೌನ್ಸ್ ಮಾಡಿದ್ದು, ಸದ್ಯ ಡಿಸೆಂಬರ್​​ ಪ್ರೆಡಿಕ್ಷನ್​ನಲ್ಲಿ ಕೊಪ್ಪಳ ಜಿಲ್ಲೆಯ 5 ಕ್ಷೇತ್ರಗಳ ಪೈಕಿ, ಗಂಗಾವತಿ, ಯಲಬುರ್ಗಾ, ಕನಕಗಿರಿ, ಕೊಪ್ಪಳ ಕ್ಷೇತ್ರಗಳಲ್ಲಿ ರೆಡ್ಡಿ ಪಕ್ಷ ಮುನ್ನಡ ಸಾಧಿಸಬಹುದು ಎನ್ನಲಾಗಿದೆ. ಈ ಕ್ಷಣಕ್ಕೆ ರಡ್ಡಿ ಪಕ್ಷ 4 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಬಹುದು ಎನ್ನಲಾಗಿದೆ.

ಜೆಡಿಎಸ್​ ಫ್ಯಾಕ್ಟರ್ ಏನು..?

ಕರ್ನಾಟಕ ಟಿವಿ ಡಿಜಿಟಲ್ ಮಾಧ್ಯಮದ ಸಮೀಕ್ಷೆ ಪ್ರಕಾರ ಡಿಸೆಂಬರ್ ನಲ್ಲಿ ಜೆಡಿಎಸ್ ಪಕ್ಷ 39 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಪಂಚರತ್ನ ಯಾತ್ರೆ ಲಾಭ ಜೊತೆಗೆ ಬಿಜೆಪಿ ಹಾಗೂ ಕಾಂಗ್ರೆಸ್​ ನಲ್ಲಿ ಇನ್ನೂ ಅಭ್ಯರ್ಥಿಗಳು ಫೈನಲ್ ಆಗದ ಕಾರಣ, ಜೆಡಿಎಸ್ ಇದರ ಲಾಭ ಪಡೆದೆ. ಈ ಮೂಲಕ ಜೆಡಿಎಸ್ 39 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

ಪ್ರಾಂತ್ಯವಾರು ಯಾವ ಪಕ್ಷಕ್ಕೆ ಎಷ್ಟು ಸೀಟು.?

ಕಿತ್ತೂರು ಕರ್ನಾಟಕ (50)

ಬಿಜೆಪಿ 29
ಕಾಂಗ್ರೆಸ್ 20
ಜೆಡಿಎಸ್ 01

ಕಲ್ಯಾಣ ಕರ್ನಾಟಕ (41)

ಬಿಜೆಪಿ 10
ಕಾಂಗ್ರೆಸ್ 22
ಜೆಡಿಎಸ್ 05
ಕೆಆರ್​​ಪಿಪಿ 04

ಮಧ್ಯ ಕರ್ನಾಟಕ (25)

ಬಿಜೆಪಿ 13
ಕಾಂಗ್ರೆಸ್ 10
ಜೆಡಿಎಸ್ 02

ಮೈಸೂರು ಕರ್ನಾಟಕ (61)

ಬಿಜೆಪಿ 15
ಕಾಂಗ್ರೆಸ್ 16
ಜೆಡಿಎಸ್ 29
ಇತರೆ 01

ಬೆಂಗಳೂರು ನಗರ (28)

ಬಿಜೆಪಿ 15
ಕಾಂಗ್ರೆಸ್ 11
ಜೆಡಿಎಸ್ 02
ಎಎಪಿ 00

ಕರಾವಳಿ ಕರ್ನಾಟಕ (19)

ಬಿಜೆಪಿ ೦5
ಕಾಂಗ್ರೆಸ್ ೦3
ಜೆಡಿಎಸ್ ೦೦
ಇತರೆ ೦೦

ಪ್ರತಿ 15 ದಿನ ಅಥವಾ 20 ದಿನಕ್ಕೆ ಕ್ಷೇತ್ರಗಳ ಟ್ರೆಂಡ್ ಬದಲಾಗುತ್ತಲೇ ಇರುತ್ತೆ. ಹೀಗಾಗಿ ಕರ್ನಾಟಕ ಟಿವಿ ಡಿಜಿಟಲ್ ಮಾಧ್ಯಮ ಪ್ರತಿ ತಿಂಗಳು ಕ್ಷೇತ್ರಗಳ ಟ್ರೆಂಡ್ ಲೆಕ್ಕಾಚಾರವನ್ನ ನೀಡ್ತಿದೆ. ಮುಂದೆ 2023ರ ಜನವರಿಯಲ್ಲಿ ಮತ್ತೊಂದು ಟ್ರೆಂಡ್ ಕೂಡ ಕರ್ನಾಟಕ ಟಿವಿ ಡಿಜಿಟಲ್ ಮಾಧ್ಯಮ ಪ್ರಸಾರ ಮಾಡಲಿದೆ. ಸದ್ಯಕ್ಕೆ ಡಿಸೆಂಬರ್​ ಟ್ರೆಂಡ್​ನಲ್ಲಿ ಕರ್ನಾಟಕ ವಿಧಾನಸಭೆ ಅತಂತ್ರ ಆಗಿದೆ.

- Advertisement -

Latest Posts

Don't Miss