Wednesday, July 30, 2025

Latest Posts

ಸಿದ್ದರಾಮಯ್ಯ ರಾಜ್ಯದ ಸಿಎಂ, ನನ್ನ ರಾಜಕೀಯ ನಿವೃತ್ತಿಯಲ್ಲ, ಸ್ಪರ್ಧೆ ಖಚಿತ : ಮೈತ್ರಿಗೆ ಮಾಧುಸ್ವಾಮಿ ಸೆಡ್ಡು!

- Advertisement -

ತುಮಕೂರು : ರಾಜ್ಯ ಬಿಜೆಪಿ ಸರ್ಕಾರದಲ್ಲಿ ಈ ಹಿಂದೆ ಕಾನೂನು ಸಚಿವರಾಗಿದ್ದ ಚಿಕ್ಕನಾಯಕನ ಹಳ್ಳಿಯ ಮಾಜಿ ಶಾಸಕ ಜೆ.ಸಿ. ಮಾಧುಸ್ವಾಮಿ ಪಕ್ಷ ತೊರೆಯುವ ಚರ್ಚೆಗಳ ನಡುವೆಯೇ ಅಚ್ಚರಿಯ ಸುದ್ದಿಯೊಂದು ಹೊರಬಿದ್ದಿದೆ.

ಪಕ್ಷದ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿರುವ ಅವರು, ನಾನು ಸಂತೆಯಲ್ಲಿ ತಪ್ಪಿಸಿಕೊಂಡ ಮಗ, ಯಾರು ಕೈ ಹಿಡಿದು ಮನೆಗೆ ಕರೆದುಕೊಂಡು ಹೋಗುತ್ತಾರೋ ಅವರ ಕಡೆಗೆ ಹೋಗುತ್ತೇನೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ಈ ಮೂಲಕ ಪಕ್ಷಕ್ಕೆ ಗುಡ್‌ ಬೈ ಹೇಳುವ ಮುನ್ಸೂಚನೆ ನೀಡಿದಂತೆ ಕಂಡುಬರುತ್ತಿದೆ.

ತುಮಕೂರಿನಲ್ಲಿ ಮಾತನಾಡಿರುವ ಅವರು, ನಾನು ರಾಜಕೀಯ ನಿವೃತ್ತಿ ಪಡೆಯುವುದಿಲ್ಲ, ಬದಲಿಗೆ ಮತ್ತೆ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ. ಮುಂಬರುವ ಎಲೆಕ್ಷನ್‌ನಲ್ಲಿ ಚಿಕ್ಕನಾಯಕನ ಹಳ್ಳಿ ಕ್ಷೇತ್ರದಿಂದಲೇ ಸ್ಪರ್ಧಿಸುವುದು ಖಚಿತ ಎಂದು ಹೇಳುವ ಮೂಲಕ ಮೈತ್ರಿಗೆ ಸೆಡ್ಡು ಹೊಡೆದಿದ್ದಾರೆ.

ನಾನು ಯಾವತ್ತಿಗೂ ದ್ವಂದ್ವ ನಿಲುವಿನಲ್ಲಿ ಮಾತನಾಡುವುದಿಲ್ಲ, ಆ ರೀತಿಯ ಮನುಷ್ಯನೇ ಅಲ್ಲ. ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ್ದರೆ ಭೇಟಿಯಾಗಿದ್ದೇನೆ ಎಂದು ಹೇಳುತ್ತೇನೆ. ಇದರಲ್ಲಿ ಯಾವನಿಗೂ ಹೆದರುವ ಮಾತೇ ಇಲ್ಲ ಎಂದು ಸಿಎಂ ಭೇಟಿಯ ವಿಚಾರಕ್ಕೆ ಗುಡುಗಿದ್ದಾರೆ.

ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾರೆ, ಅವರನ್ನು ಅದೇ ರೀತಿಯಾಗಿ ನೋಡಿ. ಹಾಗೆಯೇ ಒಬ್ಬ ಎಂಎಲ್‌ಎನಾ ಅದೇ ರೀತಿ ಎಂಎಲ್‌ಎ ಆಗಿ ಕಾಣಿ ಎಂದು ಕುಟುಕಿದ್ದಾರೆ. ನನಗೆ ಇರುವ ವೈಯಕ್ತಿಕ ಅಭಿಪ್ರಾಯದಲ್ಲಿ ನೋಡಿದಾಗ, ಪಾರ್ಟಿ ಸಿಸ್ಟಮ್‌, ಆಫ್‌ ಪಾಲಿಟಿಕ್ಸ್‌ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಡ್ಡಗಾಲಾಗುತ್ತದೆ. ಶಾಸಕರು ಮುಖ್ಯಮಂತ್ರಿಯನ್ನು ಆಯ್ಕೆ ಮಾಡಬೇಕೋ ಅಥವಾ ಹೊರಗಡೆ ಕುಳಿತುಕೊಳ್ಳುವ ವ್ಯಕ್ತಿಗಳು ನಿರ್ಧರಿಸಿ ಇವರು ಸಿಎಂ, ಅವರು ಡೆಪ್ಯುಟಿ ಸಿಎಂ ಆಗಬೇಕು ಅಂತ ನಿಶ್ಚಯಿಸಬೇಕಾ? ಎನ್ನುವ ಗೊಂದಲ ಇದೆ ಎಂದು ಮಾಧುಸ್ವಾಮಿ ಹೇಳಿದ್ದಾರೆ.

ಇನ್ನೂ ಪ್ರಮುಖವಾಗಿ ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿರುವ ಮಾಧುಸ್ವಾಮಿ ಅವರ ನಡೆ ನಿಜಕ್ಕೂ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಸಿಎಂ ಭೇಟಿಯ ಬಳಿಕ ಮಾರ್ಮಿಕವಾಗಿ ನುಡಿದಿರುವ ಬಿಜೆಪಿಯ ಮಾಜಿ ಸಚಿವರು ಯಾವ ಪಕ್ಷದ ಕದ ತಟ್ಟಲಿದ್ದಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ.

- Advertisement -

Latest Posts

Don't Miss