ಕಾರ್ತಿಕ್ ಸ್ಫೋಟಕ ಬ್ಯಾಟಿಂಗ್: ಭಾರತ ಸುಲಭ ಜಯ

ಟ್ರಿನಿಡಾಡ:ದಿನೇಶ್ ಕಾರ್ತಿಕ್ ಅವರ ಸ್ಫೋಟಕ ಬ್ಯಾಟಿಂಗ್ ನೆರೆವಿನಿಂದ ಟೀಮ್ ಇಂಡಿಯಾ ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ 68 ರನ್ ಗಳ ಭರ್ಜರಿ ಗೆಲುವು ದಾಖಲಿಸಿದೆ.

ಇಲ್ಲಿನ ತಾರೌಬ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ಫೀಲ್ಡಿಂಗ್ ಆಯ್ದುಕೊಂಡಿತು. ಭಾರತ ಪರ ಸೂರ್ಯಕುಮಾರ್ 24, ರೋಹಿತ್ ಶರ್ಮಾ 64, ಶ್ರೇಯಸ್ ಅಯ್ಯರ್ 0, ರಿಷಬ್ ಪಂತ್ 14, ಹಾರ್ದಿಕ್ ಪಾಂಡ್ಯ 1,ರವೀಂದ್ರ ಜಡೇಜಾ 16, ದಿನೇಶ್ ಕಾರ್ತಿಕ್ ಅಜೇಯ 41, ಆರ್.ಅಶ್ವಿನ್ ಅಜೇಯ 13 ರನ್ ಗಳಿಸಿದರು.

ಭಾರತ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 190 ರನ್ ಕಲೆ ಹಾಕಿತು. ವೆಸ್ಟ್ ಇಂಡೀಸ್ ಪರ ಅಲಜಾರಿ ಜೋಸೆಫ್ 46ಕ್ಕೆ 2 ವಿಕೆಟ್ ಪಡೆದರು. ಒಬೆಡ್ ಮೆಕ್ ಕೊಯೆ, ಜಾಸನ್ ಹೋಲ್ಡರ್, ಅಖಿಲ್ ಹುಸೇನ್ ಮತ್ತು ಕೀಮ್ ಪಾಲ್ ತಲಾ 1 ವಿಕೆಟ್ ಪಡೆದರು.

191 ರನ್ ಗುರಿ ಬೆನ್ನತ್ತಿದ ವಿಂಡೀಸ್ ಭಾರತದ ಸಾಂಘಿಕ ದಾಳಿಗೆ ತತ್ತರಿಸಿ ಹೋಯ್ತು. ಕೈಲೆ ಮೇಯರ್ಸ್ 15, ಶಾಮಾರ್ಹ ಬ್ರೂಕ್ಸ್ 20, ಹೋಲ್ಡರ್ 0,ನಿಕೊಲೊಸ್ ಪೂರಾನ್ 18, ರೊವಮನ್ ಪೊವೆಲ್ 14, ಶಿಮ್ರಾನ್ ಹೇಟ್ಮಯರ್ 14, ಕಿಮೊ ಪೌಲ್ 19 ರನ್ ಗಳಿಸಿದರು.

ವೆಸ್ಟ್ ಇಂಡೀಸ್ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 122 ರನ್ ಗಳಿಸಿತು. ಭಾರತ ಅಶ್ವಿನ್, ರವಿ ಬಿಷ್ಣೋಯಿ, ಆರ್ಷದೀಪ್ ತಲಾ 2 ವಿಕೆಟ್ ಪಡೆದರು. ಭುವನಶ್ವರ್ ಹಾಗೂ ರವೀಮದ್ರ ಜಡೇಜಾ ತಲಾ 1 ವಿಕೆಟ್ ಪಡೆದರು.

 

 

About The Author