Wednesday, October 29, 2025

Latest Posts

Karwar News: ಗಂಟಲಲ್ಲಿ ಅನ್ನ ಸಿಕ್ಕಿಹಾಕಿಕೊಂಡು ವ್ಯಕ್ತಿ ಸಾ*ವು

- Advertisement -

Karwar News: ಸಾವು ಯಾವಾಗ ಬೇಕಾದರೂ, ಯಾರಿಗೆ ಬೇಕಾದರೂ, ಹೇಗೆ ಬೇಕಾದರೂ ಬರಬಹುದು. ಅದೇ ರೀತಿಯ ಎಷ್ಟೋ ಘಟನೆಗಳು ನಡೆದಿದೆ. ಇದೀಗ ಊಟ ಮಾಡುವಾಗ, ಅನ್ನ ಗಂಟಲಲ್ಲಿ ಸಿಕ್ಕಿಹಾಕಿ, ಪ್ರಾಣವೇ ಹೋದ ಘಟನೆ ನಡೆದಿದೆ.

ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ಈ ಘಟನೆ ನಡೆದಿದ್ದು, ಬಿಣಗಾ ಮಾಣಸವಾಡ ನಿವಾಸಿ, 38 ವರ್ಷದ ಅಮೀತ್ ಮಾಳಸೇರ್ ಎಂಬಾತ ಮೃತನಾಗಿದ್ದಾನೆ. ವೃತ್ತಿಯಲ್ಲಿ ಕಾರು ಚಾಲಕನಾಗಿದ್ದ ಈತ, ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ. ಚಿಕಿತ್ಸೆಯೂ ಪಡೆಯುತ್ತಿದ್ದ.

ಆದರೆ ಊಟ ಮಾಡುವಾಗ ಅನ್ನ ಗಂಟಲಲ್ಲಿ ಸಿಕ್ಕಿ ಹಾಕಿದಾಗ, ಅಮೀತ್‌ಗೆ ಅವನ ಮನೆಯವರು ನೀರು ಕುಡಿಸಿದ್ದಾರೆ. ಆದರೆ ಅಮೀತ್ ಸ್ಥಳದಲ್ಲೇ ಕುಸಿದಿದ್ದಾನೆ. ತಕ್ಷಣ ಅವನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಗಂಟಲಲ್ಲಿ ಅನ್ನ ಸಿಲುಕಿ ಆತ ಮೃತನಾಗಿದ್ದಾನೆಂದು ವೈದ್ಯರು ಹೇಳಿದ್ದಾರೆ. ಕಾರವಾರ ಗ್ರಾಮೀಣ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest Posts

Don't Miss