Saturday, July 27, 2024

Latest Posts

ತಮಿಳುನಾಡಿಗೆ 30.6 ಟಿಎಂಸಿ ನೀರು ಹರಿಸಲು ಸೂಚನೆ

- Advertisement -

ನವದೆಹಲಿ-ತಮಿಳುನಾಡಿಗೆ 30.6 ಟಿಎಂಸಿ ನೀರು ಬಿಡುವಂತೆ ರಾಜ್ಯಕ್ಕೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಸೂಚನೆ ನೀಡಿದೆ. ದೆಹಲಿಯಲ್ಲಿ ಇಂದು ನಡೆದ ಕಾವೇರಿ ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ತಮಿಳುನಾಡಿಗೆ 30.6 ಟಿಎಂಸಿ ನೀರು ಹರಿಸಬೇಕು ಅಂತ ಪ್ರಾಧಿಕಾರದ ಅಧ್ಯಕ್ಷ ಎಸ್.ಕೆ ಹಲ್ದರ್ ಸೂಚನೆ ನೀಡಿದ್ದಾರೆ. 

ತಮಿಳುನಾಡಿಗೆ ಜೂನ್, ಜುಲೈ, ಅಗಸ್ಟ್ ತಿಂಗಳುಗಳಲ್ಲಿ ಬಿಡಬೇಕಿದ್ದ ನೀರನ್ನು ಬಾಕಿ ಉಳಿಸಿಕೊಂಡು 30.6 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸುವಂತೆ ಸೂಚನೆ ನೀಡಲಾಗಿದೆ. ಕರ್ನಾಟಕ ಆಗಸ್ಟ್‌ ಅಂತ್ಯಕ್ಕೆ 86 ಟಿಎಂಸಿ ನೀರು ಬಿಡುಗಡೆ ಮಾಡಬೇಕಿತ್ತು. ಆದರೆ 57 ಟಿಎಂಸಿ ನೀರು ಬಿಡುಗಡೆ ಮಾಡಿರುವುದಾಗಿ ಕರ್ನಾಟಕ ಹೇಳಿದೆ. ಹೀಗಾಗಿ ಬಾಕಿ ನೀರನ್ನು ಬಿಡುವಂತೆ ಕರ್ನಾಟಕಕ್ಕೆ ಹೇಳಿದ್ದೇವೆ. ಸೆಪ್ಟೆಂಬರ್ ನಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆ ಇದ್ದು ಆಗ, ಬಾಕಿ ಉಳಿದ ನೀರು ಹರಿಸಲು ಸಾಧ್ಯವಾಗಲಿದೆ ಅಂತ ತಿಳಿಸಿದ್ದಾರೆ.

- Advertisement -

Latest Posts

Don't Miss