Monday, December 23, 2024

Latest Posts

Engineering : ಕೆಇಎ: ಆ್ಯಪ್ಷನ್ ಎಂಟ್ರಿ ಆ.4 ಶನಿವಾರ  ಸಂಜೆಯಿಂದ ಆರಂಭ : 9000 ಸೀಟು ಹಂಚಿಕೆಗೆ ಲಭ್ಯ

- Advertisement -

Banglore News :ಎಂಜಿನಿಯರಿಂಗ್ ಕೋರ್ಸ್ ಗೆ ಸಂಬಂಧಿಸಿದಂತೆ ಅಂತಿಮ ಹಂಚಿಕೆ ಪಟ್ಟಿಯಿಂದ ಕೈಬಿಟ್ಟಿದ್ದ 9,000 ಸೀಟುಗಳನ್ನು ಉನ್ನತ ಶಿಕ್ಷಣ ಇಲಾಖೆ ಮತ್ತೆ  ಸೇರಿಸಿದ್ದು ಇಷ್ಟೂ ಸೀಟುಗಳು ಈಗ ಹಂಚಿಕೆಗೆ ಲಭ್ಯವಾಗಲಿವೆ.

ಈ ವಿಷಯವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ರಾಜ್ಯದ ಹಲವು ಎಂಜಿನಿಯರಿಂಗ್‌ ಕಾಲೇಜುಗಳು ನಿರಾಕ್ಷೇಪಣಾ ಪ್ರಮಾಣ ಪತ್ರ ಸೇರಿದಂತೆ ಕೆಲವು‌ ದಾಖಲೆಗಳನ್ನು ಒದಗಿಸಿಲ್ಲ ಎನ್ನುವ ಕಾರಣಕ್ಕೆ ಅವುಗಳನ್ನು ಸೀಟು ಹಂಚಿಕೆ ಪ್ರಕ್ರಿಯೆಯಿಂದ ಹೊರಗಿಡಲಾಗಿತ್ತು. ಆದರೆ ಉನ್ನತ ಶಿಕ್ಷಣ ಇಲಾಖೆ ಶುಕ್ರವಾರ ಷರತ್ತು ವಿಧಿಸಿ ಸೀಟು ಹಂಚಿಕೆಗೆ ಒಪ್ಪಿಗೆ ಸೂಚಿಸಿದೆ. ನಿಗದಿತ ಅವಧಿಯೊಳಗೆ ಕಾಲೇಜುಗಳು ಅಗತ್ಯ ಇರುವ ದಾಖಲೆಗಳನ್ನು ಒದಗಿಸಬೇಕು ಎಂದೂ ಸೂಚಿಸಿದೆ ಎಂದು ಅವರು ವಿವರಿಸಿದರು.

ಆ್ಯಪ್ಷನ್ ಎಂಟ್ರಿಗೆ ಅವಕಾಶ: ವೈದ್ಯಕೀಯ, ದಂತ ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಎಲ್ಲ ಕೋರ್ಸ್‌ಗಳಿಗೆ ಆ್ಯಪ್ಷನ್ ಎಂಟ್ರಿ ಮಾಡುವ ಪ್ರಕ್ರಿಯೆ ಶನಿವಾರ (ಆಗಸ್ಟ್ 5ರಂದು) ಸಂಜೆ ಆರಂಭವಾಗಲಿದೆ. ಆಗಸ್ಟ್ 9ರವರೆಗೆ ಆ್ಯಪ್ಷನ್ ಎಂಟ್ರಿಗೆ ಅವಕಾಶ ಇರುತ್ತದೆ. ಎಲ್ಲ ಕೋರ್ಸ್ ಗಳಿಗೂ ಏಕಕಾಲದಲ್ಲಿ ಆ್ಯಪ್ಷನ್ ಎಂಟ್ರಿ ಮಾಡುವ ಅವಕಾಶ ಕಲಿಸಲಾಗಿದೆ.

ಸೀಕ್ರೆಟ್ ಕೀ: ಆಫ್ ಲೈನ್ ಮೂಲಕ ದಾಖಲೆಗಳನ್ನು ಪರಿಶೀಲಿಸಿದ ಮತ್ತು ‌ಯುಜಿ‌ಸಿಇಟಿ -23 ಪರಿಶೀಲನೆ ಸ್ಲಿಪ್ ಅನ್ನು ಪಡೆದಿರುವ ಅಭ್ಯರ್ಥಿಗಳು, ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕೆ ಅರ್ಹರಾಗಿದ್ದಲ್ಲಿ ಮತ್ತು ‌ಪ್ರಾಧಿಕಾರದ ಯುಜಿನೀಟ್-23 ಕ್ಕೆ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಲ್ಲಿ ಅದೇ ರಹಸ್ಯ ಸಂಖ್ಯೆ (Secret Key) ಯನ್ನು ವೈದ್ಯಕೀಯ ಕೋರ್ಸ್ ಗಳ ಆ್ಯಪ್ಷನ್ ಎಂಟ್ರಿಗೆ ಬಳಸಬೇಕು ಎಂದು ಅವರು ತಿಳಿಸಿದ್ದಾರೆ.

Rahul Gandhi : ರಾಹುಲ್ ಗಾಂಧಿಗೆ ವಿಧಿಸಿದ್ದ  ಶಿಕ್ಷೆಗೆ ತಡೆಯಾಜ್ಞೆ : ಪ್ರಜಾಪ್ರಭುತ್ವಕ್ಕೆ ಸಂದಿರುವ ಜಯ ಎಂದ ಸಿಎಂ

Photo shop: ಉಡುಪಿ ಕಾಲೇಜಿನ ಘಟನೆ ಮಾಸುವ ಮುನ್ನವೇ ಮತ್ತೊಂದು ಪ್ರಕರಣ

Fund discrimination: ಅನುದಾನ ಹಂಚಿಕೆಯಲ್ಲಿ ತಾರತಮ್ಯ.! ಕೋರ್ಟ್ ಮೆಟ್ಟಿಲೇರಲು ಸಿದ್ಧ..!

 

- Advertisement -

Latest Posts

Don't Miss