KEAಯಿಂದ ಬಿಗ್ ಅನೌನ್ಸ್‌ಮೆಂಟ್ – 4,744 ಹುದ್ದೆಗಳಿಗೆ ಪರೀಕ್ಷೆ ಫಿಕ್ಸ್?

ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವ ಲಕ್ಷಾಂತರ ಯುವಕ-ಯುವತಿಯರಿಗೆ KEA ಕಡೆಯಿಂದ ಬಂಪರ್ ಸಿಹಿಸುದ್ದಿಯೊಂದು ಬಂದಿದೆ. ರಾಜ್ಯದ ವಿವಿಧ ಇಲಾಖೆಗಳು ಹಾಗೂ ನಿಗಮ-ಮಂಡಳಿಗಳಲ್ಲಿ ಖಾಲಿ ಇರುವ ಬರೋಬ್ಬರಿ 4,744 ಹುದ್ದೆಗಳ ನೇಮಕಾತಿಗೆ ಈಗ KEA ಸಕಲ ಸಿದ್ಧತೆ ಮಾಡಿಕೊಂಡಿದೆ.

ಹೌದು, ಪದವಿ, ಪಿಯುಸಿ ಹಾಗೂ ಡಿಪ್ಲೊಮಾ ಮಟ್ಟದ ಒಟ್ಟು 4,744 ತಾಂತ್ರಿಕ ಮತ್ತು ತಾಂತ್ರಿಕೇತರ ಹುದ್ದೆಗಳ ನೇರ ನೇಮಕಾತಿಗಾಗಿ ಈ ತಿಂಗಳಲ್ಲೇ ಅಧಿಕೃತ ಅಧಿಸೂಚನೆ ಹೊರಡಿಸಲು ಪ್ರಾಧಿಕಾರ ಮುಂದಾಗಿದೆ. ಈ ಕುರಿತು ಮಾಹಿತಿ ನೀಡಿರುವ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರಾದ ಹೆಚ್. ಪ್ರಸನ್ನ ಅವರು, ಅಧಿಸೂಚನೆ ಬಂದ ಬೆನ್ನಲ್ಲೇ ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಲಿಖಿತ ಪರೀಕ್ಷೆಗಳನ್ನು ನಡೆಸಲು ಪ್ಲಾನ್ ಮಾಡಲಾಗಿದೆ ಅಂತಾ ತಿಳಿಸಿದ್ದಾರೆ. ಹಾಗಾಗಿ ಆಕಾಂಕ್ಷಿಗಳು ಈಗಲೇ ಬುಕ್ಸ್ ಹಿಡಿದು ಓದಲು ಶುರು ಮಾಡೋದು ಒಳ್ಳೆಯದು!

ಇದರ ಜೊತೆಗೆ ಸದ್ಯ ಯಾವ್ಯಾವ ಹುದ್ದೆಗಳಿವೆ ಅನ್ನೋದರ ಬಗ್ಗೆ ಡೀಟೇಲ್ ಆಗಿ ನೋಡೋದಾದ್ರೆ – ಪದವಿ ಮಟ್ಟದ ತಾಂತ್ರಿಕೇತರ ಹುದ್ದೆಗಳು: 2,421, ಪಿಯುಸಿ ಮಟ್ಟದ ತಾಂತ್ರಿಕೇತರ ಹುದ್ದೆಗಳು: 2,062, ಹಾಗೆಯೇ ಡಿಪ್ಲೊಮಾ ಮತ್ತು ಇಂಜಿನಿಯರಿಂಗ್ ಮಟ್ಟದ ತಾಂತ್ರಿಕ ಹುದ್ದೆಗಳು: 261 ಇವೆ ಅಂತ ತಿಳಿದುಬಂದಿದೆ.

ಹಾಗೇನೇ ‘ಮುಂದಿನ ದಿನಗಳಲ್ಲಿ ಮತ್ತಷ್ಟು ಇಲಾಖೆಗಳಿಂದ ಖಾಲಿ ಹುದ್ದೆಗಳು ಸೇರ್ಪಡೆಯಾಗುವ ಸಾಧ್ಯತೆಯೂ ಇದೆ ಅಂತಾ ಪ್ರಾಧಿಕಾರ ತಿಳಿಸಿದ್ದು, ಆ ಪ್ರಮುಖ ಹುದ್ದೆಗಳ ಪೈಕಿ, ಲೆಕ್ಕ ಸಹಾಯಕರು, ವಾರ್ಡನ್, ಗ್ರಾಮ ಪಂಚಾಯತಿ ಕಾರ್ಯದರ್ಶಿ ಗ್ರೇಡ್-1 ಮತ್ತು ಗ್ರೇಡ್-2, ವಾಣಿಜ್ಯ ತೆರಿಗೆ ಪರಿವೀಕ್ಷಕರು, ಉಪ ನೋಂದಣಾಧಿಕಾರಿಗಳು, FDA, SDA ಹಾಗೂ ಕಿರಿಯ ಇಂಜಿನಿಯರ್ ಸೇರಿದಂತೆ ಹಲವು ಹುದ್ದೆಗಳಿಗೆ ಈ ನೇಮಕಾತಿ ನಡೆಯಲಿದೆ.

ಪರೀಕ್ಷೆ ಹಾಗೂ ಪಠ್ಯಕ್ರಮದ ವಿಚಾರಕ್ಕೆ ಬಂದ್ರೆ, ತಾಂತ್ರಿಕೇತರ ಹುದ್ದೆಗಳಿಗೆ ಸಾಮಾನ್ಯ ಜ್ಞಾನ ಮತ್ತು ಸಂವಹನಕ್ಕೆ ಸಂಬಂಧಿಸಿದ ಪತ್ರಿಕೆಗಳಿರುತ್ತವೆ. ಇನ್ನು ತಾಂತ್ರಿಕ ಹುದ್ದೆಗಳಿಗೆ ಒಂದು ಸಾಮಾನ್ಯ ಪತ್ರಿಕೆ ಹಾಗೂ ಇನ್ನೊಂದು ನಿರ್ದಿಷ್ಟ ತಾಂತ್ರಿಕ ವಿಷಯದ ಪತ್ರಿಕೆ ಇರಲಿದೆ. ವಿದ್ಯಾರ್ಹತೆ, ವಯೋಮಿತಿ ಹಾಗೂ ಅರ್ಜಿ ಸಲ್ಲಿಕೆಯ ಕಂಪ್ಲೀಟ್ ಡೀಟೇಲ್ಸ್‌ ಶೀಘ್ರದಲ್ಲೇ ಕೆಇಎ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟವಾಗಲಿದ್ದು, ಹೆಚ್ಚಿನ ಮಾಹಿತಿಗಾಗಿ kear.kar.nic.in ಅಧಿಕೃತ ವೆಬ್‌ಸೈಟ್ ಗಮನಿಸಬಹುದು. ಒಟ್ಟಿನಲ್ಲಿ ಹೇಳೋದಾದ್ರೆ ‘ಸರ್ಕಾರಿ ನೌಕರಿ ಪಡೆಯಬೇಕು ಅನ್ನೋರಿಗೆ ಇದೊಂದು ಗೋಲ್ಡನ್ ಚಾನ್ಸ್ ಅಂತಾನೆ ಹೇಳಬಹುದು. ಹಾಗಾಗಿ ಈ ಅವಾಕಾಶ ಮಿಸ್ ಮಾಡ್ಕೋಬೇಡಿ!

About The Author