Web Story: ಮಳೆಗಾಲ ಮುಗಿದು ವಾಟರ್ ಆ್ಯಕ್ಟಿವಿಟೀಸ್ ಎಲ್ಲ ಶುರುವಾಗಿದೆ. ಜನ ಕೂಡ ಪ್ರವಾಸಕ್ಕಾಗಿ ಬೇರೆ ಬೇರೆ ಕಡೆ ತೆರಳುತ್ತಿದ್ದಾರೆ. ಹೀಗಿರುವಾಗ ಸ್ಕೂಬಾ ಡೈವಿಂಗ್ ಮಾಡುವ ಆಸೆ ಕೂಡ ಕೆಲವರಿಗಿರುತ್ತದೆ. ಅಂಥವರು ಕೆಲ ಸಂಗತಿಗಳನ್ನು ನೆನಪಿನಲ್ಲಿರಿಸಿಕ“ಳ್ಳಬೇಕು. ಅದೇನು ಅಂತಾ ತಿಳಿಯೋಣ ಬನ್ನಿ.
1. ನಿಮಗೆ ಶೀತವಿರಬಾರದು. ತಲೆನೋವಿರಬಾರದು. 2.ಉಸಿರಾಟದ ಸಮಸ್ಯೆ ಇರಬಾರದು. 3.ನೀವು ಮದ್ಯಪಾನ ಮಾಡಿರಬಾರದು. 4. ನಿದ್ರಾಹೀನತೆಯಿಂದ ಬಳಲುತ್ತಿರಬಾರದು. 5.ಬಾಯಾರಿಕೆ ಇಲ್ಲದೇ, ಚೆನ್ನಾಗಿ ನೀರು ಕುಡಿದಿರಬೇಕು. 6. ಕಾನ್ಫಿಡೆನ್ಸ್ ಇರಬೇಕು.
ಈ 6 ಸಮಸ್ಯೆಗಳಲ್ಲಿ ನಿಮಗೆ ಯಾವುದಾದರೂ 1 ಸಮಸ್ಯೆ ಇದ್ದರೂ ಸ್ಕೂಬಾ ಡೈವಿಂಗ್ ಮಾಡುವಾಗ, ನಿಮ್ಮ ಜೀವಕ್ಕೆ ಆಪತ್ತು ಬರಬಹುದು. ಹಾಗಾಗಿ ಶೀತವಿಲ್ಲದಿದ್ದಾಗ, ತಲೆನೋವು ಇಲ್ಲದಿದ್ದಾಗ, ಉಸಿರಾಡಲು ಸಾಧ್ಯವಾದಾಗ, ಸರಿಯಾದ ಪ್ರಮಾಣದಲ್ಲಿ ನೀರಿನ ಸೇವನೆ ಮಾಡಿ, ಸರಿಯಾದ ನಿದ್ರೆ ಮಾಡಿ, ಫುಲ್ ಕಾನ್ಫಿಡೆನ್ಸ್ ಇದ್ದಾಗ ಮಾತ್ರ ನೀವು ಸ್ಕೂಬಾ ಡೈವಿಂಗ್ ಮಾಡಬಹುದು.
ಅಲ್ಲದೇ ಸ್ಕೂಬಾ ಡೈವಿಂಗ್ ಮಾಡಿದ ಬಳಿಕ ನಿಮಗೆ ಶೀತವಾದಂತಾಗುತ್‌ತಿದೆ. ತಲೆ ನೋವು ಬರುತ್ತಿದೆ. ಉಸಿರಾಡಲು ಸಾಧ್ಯವಾಗುತ್ತಿಲ್ಲ. ಈ ಎಲ್ಲ ಸಮಸ್ಯೆ ಬಂದರೇ, ತಕ್ಷಣವೇ ನೀವು ವೈದ್ಯರನ್ನು ಸಂಪರ್ಕಿಸುವುದು ಉತ್ತಮ.




