ಧರ್ಮಸ್ಥಳ ಬುರುಡೆ ಕೇಸ್ ನಲ್ಲಿ ಕೇರಳ ಕಮ್ಯೂನಿಸ್ಟ್ ಸಂಸದನಿಗೆ ಟೆನ್ಶನ್!!!

ಧರ್ಮಸ್ಥಳದ ತಲೆಬುರುಡೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಆರೋಪಿ ಚಿನ್ನಯ್ಯ ಹಾಗೂ ಇತರರು ತಲೆಬುರುಡೆಯನ್ನು ಕೇರಳದ ಕಮ್ಯೂನಿಸ್ಟ್ ಸಂಸದರಿಗೆ ತೋರಿಸಿದ್ದರು ಎಂಬುದು ಬಹಿರಂಗಗೊಂಡಿದೆ. ಈಗ ಕೇರಳದ ಕಮ್ಯೂನಿಸ್ಟ್ ಸಂಸದ ಸಂತೋಷ್ ಕುಮಾರ್ ಹೆಸರು ಈಗ ಪ್ರಕರಣದಲ್ಲಿ ಕೇಳಿ ಬಂದಿದೆ. ಈ ಪ್ರಕರಣದಲ್ಲಿ ಈವರೆಗೆ ಒಟ್ಟು 11 ಸೆಕ್ಷನ್​​ಗಳ ಅಡಿ ಎಸ್​ಐಟಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

ಹೌದು ತಲೆಬುರುಡೆ ಪ್ರಕರಣದಲ್ಲಿ ಇದೀಗ ಕೇರಳದ ಕಮ್ಯೂನಿಸ್ಟ್ ಸಂಸದ ಸಂತೋಷ್ ಕುಮಾರ್​ಗೆ ಸಂಕಷ್ಟ ಎದುರಾಗಿದೆ. ಚೆನ್ನಯ್ಯ ತಾನೇ ತಲೆಬುರುಡೆಯನ್ನು ಧರ್ಮಸ್ಥಳದಿಂದ ತಂದಿದ್ದು ಅನ್ನೋ ಹೇಳಿಕೆಯನ್ನ ನಿರಾಕರಿಸಿದ್ದಾರೆ. ತಲೆಬುರುಡೆಯನ್ನು ತೆಗೆದುಕೊಂಡು ಆರೋಪಿ ಚಿನ್ನಯ್ಯ, ಗಿರೀಶ್ ಮಟ್ಟಣ್ಣನವರ್, ಜಯಂತ್ ಟಿ ಕೇರಳದ ಸಂಸದನ ಬಳಿ ತೆರಳಿ ಅವರ ಮುಂದೆ ವಿಚಾರ ಪ್ರಸ್ತಾಪಿಸಿತ್ತು ಎಂಬ ಸ್ಫೋಟಕ ಮಾಹಿತಿ ಎಸ್​​ಐಟಿ ತನಿಖೆ ವೇಳೆ ತಿಳಿದು ಬಂದಿವೆ. ಹೀಗಂತ ಮೂಲಗಳು ತಿಳಿಸಿವೆ.
ಈ ಹಿನ್ನೆಲೆಯಲ್ಲಿ ಎಸ್‌ಐಟಿ ತನಿಖೆ ಇನ್ನಷ್ಟು ಗಂಭೀರವಾಗಿದೆ.

ತಲೆಬುರುಡೆ ಪ್ರಕರಣ ಹಾಗೂ ಒಟ್ಟಾರೆ ಧರ್ಮಸ್ಥಳ ಪ್ರಕರಣವನ್ನು ಎಸ್​ಐಟಿ ಪೊಲೀಸರು BNS 211(A), 336, 230, 231, 229, 227, 228, 240, 236, 233, 248 ಸೇರಿ ಒಟ್ಟು 11 ಸೆಕ್ಷನ್‌ಗಳ ಅಡಿಯಲ್ಲಿ ಕೇಸ್ ದಾಖಲಿಸಿದ್ದಾರೆ. ಸುಳ್ಳು ಸಾಕ್ಷ್ಯ, ನಕಲಿ ದಾಖಲೆ, ನ್ಯಾಯಾಂಗ ಪ್ರಕ್ರಿಯೆಗೆ ತೊಂದರೆ ಎಂಬ ಗಂಭೀರ ಆರೋಪಗಳಿವೆ. ಈ ಎಲ್ಲ ಬೆಳವಣಿಗೆ ಮಧ್ಯೆ ಕೇರಳ ಸಂಸದನ ಹೆಸರು ಪ್ರಕರಣದಲ್ಲಿ ತಳಕುಹಾಕಿಕೊಂಡಿದೆ.

ವರದಿ : ಲಾವಣ್ಯ ಅನಿಗೋಳ

About The Author