Kerala: ಕೇರಳದಲ್ಲಿ ಸಿಪಿಎಂ ಮುಖಂಡನೋರ್ವ ಭಾಷಣ ಮಾಡುವ ವೇಳೆ, ಹೆಂಗಸರು ಗಂಡನಿಗೆ ಸುಖ ನೀಡಲು ಮತ್ತು ಮಕ್ಕಳು ಮಾಡಲು, ಅವರನ್ನು ಸಾಕಲು ಮಾತ್ರ ಯೋಗ್ಯರು ಎಂಬಂತೆ ಹೇಳಿಕೆ ನೀಡಿದ್ದಾರೆ. ಈ ಭಾಷಣ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.
ಮಲ್ಲಪುರಂ ಎಂಬಲ್ಲಿ ಸಿಪಿಎಂ ಮುಖಂಡ ಸಯೀದ್ ಅಲಿ ಮಸೀದ್ ಮಾತನಾಡಿದ್ದು, ವಿವಾಹವಾಗಿರುವ ಹೆಂಗಸರನ್ನು ಚುನಾವಣೆಗೆ ನಿಲ್ಲಿಸಬಾರದು. ಮುಸ್ಲೀಂ ಲೀಗ್ ಪುರುಷರು ಈ ವಾರ್ಡ್ ಮೇಲೆ ಹಿಡಿತ ಸಾಧಿಸಲು ತಮ್ಮ ವಿವಾಹಿತ ಮಹಿಳೆಯರನ್ನು ಇತರರ ಮುಂದೆ ತಂದು ನಿಲ್ಲಿಸಬಾರದಿತ್ತು. ನಾನು ಕೂಡ ವಿವಾಹಿತ. ನನಗೂ ಹೆಣ್ಣು ಮಕ್ಕಳಿದ್ದಾರೆ. ಆದರೆ ಹೆಣ್ಣು ಮಕ್ಕಳಿರೋದು ಪತಿಯ ಜತೆ ಮಲಗಲು ಮತ್ತು ಮಕ್ಕಳು ಮಾಡಲು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಅಲ್ಲದೇ ನೀವು ಚುನಾವಣೆಗೆ ನಿಲ್ಲುವುದಾದರೆ, ಟೀಕೆಗಳನ್ನು ಎದುರಿಸಲು ಸಿದ್ಧರಾಗಿ. ಇಲ್ಲದಿದ್ದಲ್ಲಿ ಮನೆಯಲ್ಲಿ ಗೃಹಿಣಿಯಾಗಿರಿ ಎಂದು ಸಯೀದ್ ಅಲಿ ಹೇಳಿದ್ದಾರೆ. ಈ ವೀಡಿಯೋ ವೈರಲ್ ಆಗುತ್ತಿದ್ದಂತೆ, ಇದಕ್ಕೆ ಕಾಮೆಂಟ್ ಮಾಡಿರುವ ಹಲವರು, ಈತ ಸಾರ್ವಜನಿಕ ಜೀವನದಲ್ಲಿರಲು ಯೋಗ್ಯನಲ್ಲ. ಈತನನ್ನು ಹುದ್ದೆಯಿಂದ ಕೆಳಗಿಳಿಸಿ ಎಂದು ವೈಗ್ದಾಳಿ ನಡೆಸಿದ್ದಾರೆ.
ಈತ ಸ್ಥಳೀಯ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿ, ಮಲ್ಲಪುರಂ ಜಿಪಂ ವಾರ್ಡ್ನಿಂದ ಸ್ಪರ್ಧೆ ಮಾಡಿ ಗೆಲುವು ಸಾಧಿಸಿದ್ದ. ಇಂದು ವಿಜಯೋತ್ಸವದ ಮೆರವಣಿಗೆ ಮಾಡುವ ಸಮಯದಲ್ಲಿ ಈ ರೀತಿಯಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.




