Kerala: ಮಹಾಕುಂಭ ಮೇಳದಲ್ಲಿ ಫೇಮಸ್ ಆಗಿದ್ದ ಹುಡುಗಿ ಮೋನಾಲೀಸಾಗೆ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದ್ದು ಎಲ್ಲರಿಗೂ ತಿಳಿದಿದೆ. ಇದೀಗ ಈ ಹುಡುಗಿ ಕೇರಳದಲ್ಲಿ ಮಹಾರಾಷ್ಟ್ರದ ಮುಸ್ಲಿಂ ಯುವಕನನ್ನು ವಿವಾಹವಾಗಿದ್ದಾಳೆ.
ಮೂಲಗಳ ಮಾಹಿತಿ ಪ್ರಕಾರ ಈಕೆ ತನ್ನ ತಂದೆಗೆ ವಿಷಯ ತಿಳಿಸದೇ, ಸೀದಾ ಕೇರಳದ ದೇವಸ್ಥಾನಕ್ಕೆ ಹೋಗಿ, ವಿವಾಹವಾಗಿದ್ದಾಳೆ. ಮುಸ್ಲಿಂ ಯುವಕ ಕೂಡ ಈಕೆಯ ಜತೆ ದೇವಸ್ಥಾನಕ್ಕೆ ಬಂದು, ತಾಳಿ ಕಟ್ಟಿದ್ದಾನೆ. ಇವರ ಜತೆ ಇವರ ಮದುವೆಗೆ ಬೆಂಬಲಿಸಿದ್ದ ಕೆಲ ಜನರು ಕೂಡ ಇದ್ದಿದ್ದು ಕಂಡು ಬಂದಿದೆ.
ಈಕೆಯ ಬಾಯ್‌ಫ್ರೆಂಡ್ ಹೆಸರು ಫರ್ಮಾನ್ ಖಾನ್ ಆಗಿದ್ದು, ಈತನ ಜತೆ ವಿವಾಹವಾಗಲು ಮೋನಾಲೀಸಾ ತಂದೆ ವಿರೋಧಿಸಿದ್ದು, ಹಾಗಾಗಿ ಅಪ್ಪನಿಗೆ ತಿಳಿಸದೇ, ಕೇರಳದಲ್ಲಿ ಪೋಲೀಸರ ರಕ್ಷಣೆ ಕೇಳಿ, ದೇವಸ್ಥಾನದಲ್ಲಿ ವಿವಾಹವಾಗಿದ್ದಾಳೆ.
ಈ ಬಗ್ಗೆ ಮಾಧ್ಯಮದ ಜತೆ ಮಾತನಾಡಿರುವ ಮೋನಾಲೀಸಾ, ನನಗೂ ಹೀಗೆ ಮದುವೆಯಾಗಲು ಇಷ್ಟವಿಲ್ಲಾ.. ಆದರೆ ನನ್ನ ಮನೆಯವರು ಬೇರೆಯವನ ಜತೆ ನನ್ನ ಮದುವೆ ಮಾಡಲು ನಿರ್ಧರಿಸಿದ್ದರು. ನನಗದು ಇಷ್ಟವಿರಲಿಲ್ಲ. ಹಾಗಾಗಿ ನಾನು ಹೀಗೆ ಮದುವೆಯಾದೆ.. ನಾನೀಗ ತುಂಬಾ ಖುಷಿಯಾಗಿದ್ದೇನೆ ಎಂದು ಮೋನಾಲೀಸಾ ಹೇಳಿದ್ದಾಳೆ.
ಇನ್ನು ಆಕೆಯ ಪತಿ ಫರ್ಮಾನ್ ಮಾತನಾಡಿದ್ದು, ನಾವಿಬ್ಬರೂ ಲವ್ ಮಾಡಿದಿವಿ. ನಾವಿಲ್ಲಿ ಪ್ರವಾಸಕ್ಕ ಬಂದಿದ್ದೆವು. ನಮಗೆ ಈ ದೇವಸ್ಥಾನ ಇಷ್ಟಾ ಆಯ್ತು, ಅಲ್ಲದೇ ಇಲ್ಲಿನ ಜನ ಕೂಡಾ ತುಂಬಾ ಉತ್ತಮವರು. ಹಾಗಾಗಿ ನಾವು ಈ ಜನ ಮತ್ತು ದೇವರ ಸಮ್ಮುಖದಲ್ಲಿ ಮದುವೆಯಾಗಿದ್ದೇವೆ ಎಂದು ಹೇಳಿದ್ದಾನೆ.
ಒಟ್ಟಾರೆಯಾಗಿ ಕೆಲವರು ಇವರಿಗೆ ಅಭಿನಂದನೆ ಸಲ್ಲಿಸಿದರೆ, ಇನ್ನು ಕೆಲವಲು ಇದು ಲವ್ ಟ್ರ್ಯಾಪ್ ಜಿಹಾದ್. ಇದು ಇನ್ನ`ಂದು ಕೇರಳಾ ಸ್ಟೋರಿ ಅಂತಾ ಹೀಯಾಳಿಸಿದ್ದಾರೆ.




