ಜನ ತಿರುಪತಿ ತಿಮ್ಮಪ್ಪನಿಗೆ ಮುಡಿ ಕೊಡೋದ್ಯಾಕೆ..?

ತಿರುಪತಿಯಲ್ಲಿ ಹೆಚ್ಚಾಗಿ ಹೋರುವ ಹರಕೆ ಅಂದ್ರೆ ಮುಡಿ ಕೊಡೋದು. ಹೆಂಗಸರೂ ಕೂಡ ತಿಮಪ್ಪನಿಗೆ ಮುಡಿ ನೀಡುವ ಸಂಪ್ರದಾಯ ಇಲ್ಲಿದೆ. ತಮ್ಮ ಬೇಡಿಕೆಗಳನ್ನ ಈಡೇರಿಸಿದರೆ, ತಿಮ್ಮಪ್ಪನಿಗೆ ಮುಡಿ ನೀಡುತ್ತೇವೆಂದು ಕೇಳಿಕೊಳ್ಳುವ ಭಕ್ತರು. ತಿರುಪತಿಗೆ ಬಂದು ಮುಡಿ ಅರ್ಪಿಸಿ, ತಿಮ್ಮಪ್ಪನ ದರ್ಶನ ಪಡೆದು ಹೋಗುತ್ತಾರೆ. ಹಾಗಾದ್ರೆ ಈ ಮುಡಿಯನ್ನ ಯಾಕೆ ಕೊಡಲಾಗುತ್ತದೆ ಎಂಬ ಬಗ್ಗೆ ನಾವಿವತ್ತು ತಿಳಿಸಿಕೊಡಲಿದ್ದೇವೆ.

ದೇಶದ ಶ್ರೀಮಂತ ದೇವರೆನ್ನಿಸಿಕೊಂಡ ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಪ್ರತಿನಿತ್ಯ ಲಕ್ಷಾಂತರ ಭಕ್ತರು ಭೇಟಿ ಕೊಟ್ಟು ಬಾಲಾಜಿಯ ದರ್ಶನ ಮತ್ತು ಆಶೀರ್ವಾದ ಪಡೆದು ಹೋಗುತ್ತಾರೆ. ಹರಕೆ ಹೊತ್ತ ಭಕ್ತರು ಮುಡಿ ಹರಕೆ ತೀರಿಸುತ್ತಾರೆ. ಈ ಹರಕೆ ಹೊರಲು ಕಾರಣ ಏನಂದರೆ, ಪುರಾಣದ ಪ್ರಕಾರ ರಾಜಾ ಚೋಳನ ಅರಮನೆಯಲ್ಲಿದ್ದ ಹಸುಗಳನ್ನ ನೋಡಿಕೊಳ್ಳುತ್ತಿದ್ದ ದನಗಾಯಿ, ಪ್ರತಿದಿನ ಹಸು ಮೇಯಿಸಲು ಬರುತ್ತಿದ್ದ.

ಆದ್ರೆ ಕಾಮಧೇನು ಎಂಬ ಹಸು ಹಾಲೇ ನೀಡುತ್ತಿರಲಿಲ್ಲ. ಹೀಗಾಗಿ ಕಾಮಧೇನು ಮೇಯಲು ಹೋದಾಗ ಅದನ್ನ ಹಿಂಬಾಲಿಸಿದ ದನಗಾಯಿಗೆ ಆಶ್ಚರ್ಯವೊಂದು ಕಾದಿತ್ತು. ಹಸು ಪ್ರತಿದಿನ ಹುತ್ತಕ್ಕೆ ತನ್ನ ಹಾಲು ಎರೆಯುತ್ತಿತ್ತು ಎಂಬುದು ತಿಳಿಯುತ್ತದೆ. ಆಗ ಸಿಟ್ಟಾದ ದನಗಾಯಿ ಕೊಡಲಿಯಿಂದ ಕಾಮಧೇನುವಿಗೆ ಹೊಡೆಯಲು ಹೋದಾಗ, ಆ ಹೊಡೆತ ಹುತ್ತಕ್ಕೆ ಬೀಳುತ್ತದೆ.

ತದನಂತರ ನೋಡಿದರೆ, ಹುತ್ತದಲ್ಲಿ ಶ್ರೀನಿವಾಸನಿರುತ್ತಾನೆ. ಹಸು ರೂಪದಲ್ಲಿ ಹಾಲೆರೆಯುತ್ತಿದ್ದ ಕಾಮಧೇನುವೇ ಶಿವನಾಗಿರುತ್ತಾನೆ. ಹುತ್ತಕ್ಕೆ ಬಿದ್ದ ಕೊಡಲಿ ಪೆಟ್ಟು ಶ್ರೀನಿವಾಸನ ತಲೆಗೆ ತಾಗಿರುತ್ತದೆ. ಆಗ ಶ್ರೀನಿವಾಸನ ಪರಮ ಭಕ್ತೆ ನೀಲಾದೇವಿ ತಮ್ಮ ಮುಡಿಯಿಂದ ಕೂದಲು ಕತ್ತರಿಸಿ ಶ್ರೀನಿವಾಸನ ತಲೆಗೆ ಜೋಡಿಸುತ್ತಾಳೆ. ಈ ವೇಳೆ ಪ್ರಸನ್ನನಾದ ಶ್ರೀನಿವಾಸ, ಭಕ್ತರು ನನಗೆ ಕೊಡುವ ಮುಡಿ ನಿನ್ನ ಮೂಲಕ ನನಗೆ ಅರ್ಪಣೆಯಾಗಲಿ ಎಂದು ವರ ನೀಡುತ್ತಾನೆ. ಹಾಗಾಗಿ ಈ ಕಲಿಯುಗದಲ್ಲಿ ಭಕ್ತರು ತಿರುಪತಿ ತಿಮ್ಮಪ್ಪನಿಗೆ, ನಮ್ಮ ಬೇಡಿಕೆ ಪೂರೈಸು ಎಂದು ಹರಕೆ ಹೊತ್ತು, ಮುಡಿ ಅರ್ಪಿಸುತ್ತಾರೆ.

ಪಂಡಿತ್ ಮಾಧವ್ ರಾವ್ ಗುರೂಜಿ
ದೂರವಾಣಿ ಸಂಖ್ಯೆ : 886727934
ಗಂಡ ಹೆಂಡತಿ ಸಮಸ್ಯೆ, ಪ್ರೀತಿಯಲ್ಲಿ ನಂಬಿ ಮೋಸ ಹೋಗಿದ್ರೆ, ಇಷ್ಟಪಟ್ಟವರು ನಿಮ್ಮಂತೆ ಆಗಲು, ಸ್ತ್ರೀ/ ಪುರುಷ ವಶೀಕರಣ.. ನಿಮ್ಮ ಜೀವನದಲ್ಲಿ ಲವ್ ಪ್ರಾಬ್ಲಂ, ಆಸ್ತಿ, ಮದುವೆ ವಾಹನದಲ್ಲಿ ತೊಂದರೆ, ಸತಿ-ಪತಿ ಕಲಹ, ಸಂತಾನ, ಸ್ತ್ರೀ ಪುರುಷ ವಶಿಕರಣದಂತಹ ಸಮಸ್ಯೆಗಳಿಗೆ 1 ದಿನದಲ್ಲಿ ಪರಿಹಾರ – 8867272934
ಕೇರಳ ಮಾಂತ್ರಿಕ ಜ್ಯೋತಿಷ್ಯರು
ಪಂಡಿತ್ ಮಾಧವ್ ರಾವ್ ಗುರೂಜಿ
ನಂ1 ವಶೀಕರಣ ಸ್ಪೆಷಲಿಸ್ಟ್
8867272934

About The Author