ನೀನು ಎಲ್ಲಿ ಓಡಿ ಹೋದ್ರೂ ನಿನ್ನನ್ನು ಹುಡುಕುತ್ತೇನೆ ಎಂದು ಕೇತನ್ ಬೆದರಿಸಿದ್ದ: ಸೀಯಾ

Pune News: ಮದುವೆ ಇಷ್ಟವಿಲ್ಲದ ಕಾರಣಕ್ಕೆ ಮಧುಮಗನನ್ನೇ ಕಂದಕಕ್ಕೆ ತಳ್ಳಿ ಹತ್ಯೆ ಮಾಡಿದ ಪ್ರಕರಣದಲ್ಲಿ ಹತ್ಯೆ ಮಾಡಿದ ಸೀಯಾ ಇದೀಗ ಕೇತನ್ ವಿರುದ್ಧ ಹೇಳಿಕೆ ನೀಡಿದ್ದಾಳೆ.

ಸೀಯಾ ಮತ್ತು ಉದ್ಯಮಿ ಕೇತನ್ ವಿವಾಹ ಇದೇ ನವೆಂಬರ್‌ನಲ್ಲಿ ಫಿಕ್ಸ್ ಆಗಿತ್ತು. ಇವರ ಎಂಗೇಜ್‌ಮೆಂಟ್ ಆಗಿತ್ತು. ಆದರೆ ಸೀಯಾ ಅಪ್ಪನ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದ ಚೇತನ್ ಎಂಬಾತನನ್ನು ಪ್ರೀತಿಸಿದ್ದಳು. ಆದರೆ ಮನೆಯವರ ಬಳಿ ಹೇಳಿದರೆ, ಅವರು ಮದುವೆಗೆ ನಿರಾಕರಿಸುತ್ತಾರೆಂದು, ಆಕೆ ಕೇತನ್ ಜತೆಗಿನ ಮದುವೆಯನ್ನು ನಿರಾಕರಿಸದೇ, ಆತನ ಹತ್ಯೆ ಮಾಡಿದ್ದಾಳೆ.

ಸೀಯಾ ಬರ್ತ್‌ಡೇಗಾಗಿ ಕೇತನ್ ಮತ್ತು ಆತನ ಫ್ಯಾಮಿಲಿ ಬೇರೆ ಬೇರೆ ರೀತಿಯ ಪ್ಲಾನ್ ಮಾಡಿತತ್ತು. ಆಕೆಯ ಖುಷಿಗಾಗಿ ಕೋಟಿ ಕೋಟಿ ಖರ್ಚು ಮಾಡಲು ಮುಂದಾಗಿತ್ತು. ಆದರೆ ಬಾಲಿಯ ಪ್ರವಾಾಸ, ಫೈವ್‌ಸ್ಟಾರ್ ಹೋಟೇಲ್‌ನಲ್ಲಿ ಪಾರ್ಟಿ, ಫಾರಿನ್ ಪ್ರವಾಸ ಎಲ್ಲವನ್ನು ನಿರಾಕರಿಸಿದ್ದ ಸೀಯಾ ಪುಣೆಯ ಲೋಹಗಡ್ ಫೋರ್ಟ್‌ಗೆ ಕರೆದ“ಯ್ದು ಅಲ್ಲಿ ಚೇತನ್ ಜತೆ ಸೇರಿ, ಕೇತನ್ ಹತ್ಯೆ ಮಾಡಿದ್ದಳು. ಮತ್ತು ಆತ ಕಾಲು ಜಾರಿ ಬಿದ್ದನೆಂದು ನಾಟಕವಾಡಿದ್ದಳು.

ಆದರೆ ಈಗ ಸತ್ಯ ತಿಳಿದಿದ್ದು, ಸೀಯಾ ಮತ್ತು ಚೇತನ್ ಇಬ್ಬರೂ ಜೈಲು ಪಾಲಾಗಿದ್ದಾರೆ. ವಿಚಾರಣೆ ವೇಳೆ ಹೇಳಿಕೆ ನೀಡಿರುವ ಸೀಯಾ, ನಾನು ಕೇತನ್ ಬಳಿ ಪ್ರೀತಿ ವಿಷಯ ಹೇಳಿದ್ದೆ. ಆದರೆ ಆತ ನಮ್ಮದು ಪ್ರಭಾವಿ ಫ್ಯಾಮಿಲಿ, ನೀನು ಓಡಿ ಹೋಗೋದಾದ್ರೆ ಹೋಗು, ನೀನು ಎಲ್ಲಿ ಹೋದರೂ ನಿನ್ನನ್ನು ಮತ್ತೆ ಕರೆತರುತ್ತೇನೆ ಎಂದು ಕೇತನ್ ಬೆದರಿಸಿದ್ದ ಎಂದು ಸೀಯಾ ಹೇಳಿದ್ದಾಳೆ.

ಅಲ್ಲದೇ ಜೂನ್‌ 14ರಂದು ಕೇತನ್‌ನನ್ನು ಬೆಟ್ಟದಿಂದ ತಳ್ಳಿದ್ದು, ಆಗ ಪ್ಲಾನ್ ಫ್ಲಾಪ್ ಆಗಿತ್ತು. ಆ ವೇಳೆ ನಾನು ಕೇತನ್ ಬಳಿ ಹಾವು ಬಂತೆಂದು ನಾಟಕವಾಡಿದ್ದೆ. ನಮ್ಮ ಪ್ಲಾನ್ ಫ್ಲಾಪ್ ಆಗಿದ್ದಕ್ಕೆ, ಚೇತನ್ ನನ್ನ ಎದುರು ಮಗುವಿನಂತೆ ಅತ್ತಿದ್ದ ಹಾಗಾಗಿ ನಾನು ಮತ್ತೆ ಆತನ ಹತ್ಯೆಗೆ ಪ್ಲಾನ್ ಮಾಡಿದ್ದು ಎಂದಿದ್ದಾಳೆ.

ಆದರೆ ಇತ್ತ ಚೇತನ್, ಆ ಹತ್ಯೆಗೂ ನನಗೂ ಸಂಬಂದವಿಲ್ಲ. ಸೀಯಾ ನನ್ನನ್ನು ಅಲ್ಲಿ ಕರೆದಿದ್ದಳು. ಹಾಗಾಗಿ ನಾನು ಫೋರ್ಟ್‌ಗೆ ಹೋಗಿದ್ದೆ. ಕೇತನ್‌ನ್ನು ತಳ್ಳಿದ್ದು ಸೀಯಾ. ನಾನು ಆಕೆಯನ್ನು ವಾಪಸ್ ಕರೆದ“ಯ್ಯಲು ಹೋಗಿದ್ದೆ ಎಂದು ಹೇಳುತ್ತಿದ್ದಾನೆ. ಸದ್ಯ ಪೋಲೀಸರು ತನಿಖೆ ಮುಂದುವರಿಸಿದ್ದಾರೆ.

About The Author