Wednesday, April 24, 2024

Latest Posts

BIG WAR : ಪ್ರೀ ಬುಕ್ಕಿಂಗ್ ನಾಳೆಯಿಂದ ಆರಂಭ, ಆರ್.ಆರ್.ಆರ್ ದಾಖಲೆ ಮುರಿಯುತ್ತಾ ಕೆ.ಜಿ.ಎಫ್..?

- Advertisement -

 

ಈಗ ಎಲ್ಲರ ಕಣ್ಣು ನೆಟ್ಟಿರೋದು ಕನ್ನಡದ ಹೆಮ್ಮೆ ಕೆಜಿಎಫ್ ಚಾಪ್ಟರ್೨ ಮೇಲೇನೇ. ಅದೇನು ಜೋಷ್, ಅದೇನು ಹವಾ, ರಾಕಿಭಾಯ್ ದೇಶಾದ್ಯಂತ ಚಾಪ್ಟರ್ ೨ ಪ್ರೊಮೋಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಚಿತ್ರದ ಮತ್ತೊಂದು ಮೋಸ್ಟ್ ಎಕ್ಸ್ಪೆಕ್ಟೆಡ್ ಸಾಂಗ್ `ಗಗನ ನೀ ಭುವನ ನೀ’ ರಿಲೀಸ್ ಆಗಿ ಟ್ರೆಂಡಿAಗ್‌ನಲ್ಲಿ ಮುನ್ನುಗ್ತಿದೆ. ಆದ್ರೆ ಸದ್ಯ ರಿಲೀಸ್ ಆಗಿ ಸಾವಿರ ಕೋಟಿ ಕಲೆಕ್ಷನ್ ಮಾಡಿರೋ ರಾಜಮೌಳಿ ಮಾಸ್ಟರ್‌ಪೀಸ್ ಆರ್‌ಆರ್‌ಆರ್ ಸವಾಲನ್ನು ಕೆಜಿಎಫ್ ಮೆಟ್ಟಿನಿಲ್ಲುತ್ತಾ ಅನ್ನೋ ಪ್ರಶ್ನೆ ಅಭಿಮಾನಿಗಳನ್ನು ಕಾಡ್ತಿದೆ..
ರಾಮ್ ಚರಣ್ ತೇಜ ಜ್ಯೂನಿಯರ್ ಎನ್ಟಿಆರ್ ಅಭಿನಯದ ಆರ್‌ಆರ್‌ಆರ್ ಪ್ರೀ ಬುಕ್ಕಿಂಗ್‌ನಲ್ಲಿ ಗಳಿಸಿದ್ದು ಬರೋಬ್ಬರಿ ೧೦ ಕೋಟಿಗಿಂತ ಹೆಚ್ಚು. ಅಂದ್ರೆ ರಿಲೀಸ್‌ಗೂ ಮೊದಲೇ ಬುಕ್ಕಿಂಗ್‌ನಿAದ ಬಂದ ಹಣ ೧೦ ಕೋಟಿಗಿಂತ ಹೆಚ್ಚು, ಈಗ ಕೆಜಿಎಫ್ ರಾಜಮೌಳಿ ಸವಾಲನ್ನು ಮೆಟ್ಟಿನಿಲ್ಲುತ್ತಾ..? ಕೆಜಿಎಫ್ ಸದ್ಯದ ಕ್ರೇಜ್ ನೋಡಿದ್ರೆ ಸುಲಭವಾಗಿ ೧೦ ಕೋಟಿ ಪ್ರೀ ಬುಕ್ಕಿಂಗ್ ದಾಖಲೆಯನ್ನು ಉಡೀಸ್ ಮಾಡುತ್ತೆ ಆದರೆ ರಾಕಿಭಾಯ್‌ಗೆ ಒಂದು ಸವಾಲಿದೆ, ಅದೇ ಬೀಸ್ಟ್.
ಬೀಸ್ಟ್ ಕೆಜಿಎಫ್‌ಗಿಂತ ಒಂದು ದಿನ ಮೊದಲೇ ರಿಲೀಸ್ ಆಗಿರುತ್ತೆ. ಬೀಸ್ಟ್ ಚೆನ್ನಾಗಿದೆ ಅನ್ನೋ ರಿವ್ಯೂ ಬಂದ್ರೆ ಕೆಜಿಎಫ್ ಸಣ್ಣಮಟ್ಟಿಗಿನ ಹೊಡೆತವನ್ನಂತೂ ಖಂಡಿತಾ ಮಾಡುತ್ತೆ. ತಮಿಳುನಾಡಿನಲ್ಲಿ ದೊಡ್ಡ ಹೊಡೆತ ಕೆಜಿಎಫ್‌ಗೆ ಮೊದಲೇ ಫಿಕ್ಸ್ ಇನ್ನು ಬೀಸ್ಟ್ ಚೆನ್ನಾಗಿದೆ ಅನ್ನೋ ರಿವ್ಯೂ ಬಂದ್ರೆ ಕೆಜಿಎಫ್ ಕಲೆಕ್ಷನ್‌ಗೆ ನಷ್ಟ ಆಗೋದು ಗ್ಯಾರಂಟಿ ಹಾಗಾಗಿನೇ ರ‍್ಬೇಕು ಯಶ್ ಮೊದಲಿಗೇ ತಮಿಳಿನಲ್ಲಿ ತಮ್ಮ ಕೆಜಿಎಫ್ ಚಾಪ್ಟರ್ ೨ ಬುಕ್ಕಿಂಗ್ ಸ್ಟಾರ್ಟ್ ಆಗಿದೆ. ಟಿಕೆಟ್ ಬುಕ್ ಮಾಡ್ಕೊಳ್ಳಿ, ಸಿನಿಮಾ ನೋಡಿ ಅಂತ ತಮಿಳು ಭಾಷೆಯಲ್ಲಿ ಮನವಿ ಮಾಡಿದ್ದಾರೆ.

- Advertisement -

Latest Posts

Don't Miss