Sandalwood: ಅಕ್ಟೋಬರ್ 31ನೇ ತಾರೀಖಿನಂದು ತನೀಷಾ ಕುಪ್ಪಂಡ ಅವರ ಕೋಣ ಸಿನಿಮಾ ರಿಲೀಸ್ ಆಗಿದೆ. ಈ ಸಿನಿಮಾವನ್ನು ತನೀಷಾ ಅವರೇ ನಿರ್ಮಿಸಿದ್ದಾರೆ. ಕೋಮಲ್ ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಬಗ್ಗೆ ತನೀಷಾ ಅವರೇ ಮಾತನಾಡಿದ್ದಾರೆ ನೋಡಿ.
ಈ ಸಿನಿಮಾದಲ್ಲಿ ತನೀಷಾ ಕೂಡ ನಟಿಸಿದ್ದು, ಲಕ್ಷ್ಮೀ ಎಂಬ ಪಾತ್ರ ನಿರ್ವಹಿಸಿದ್ದಾರೆ. ತನೀಷಾ ಅವರು ನಟಿಯಾಗಿದ್ದಾಗ, ಅವರ ಎದುರು ಬೇರೆಯವರಿಗೆ ಉತ್ತಮ ರೀತಿಯಾಗಿ ಎಲ್ಲಾ ಸೌಕರ್ಯ ನೀಡಿ, ತನೀಷಾ ಅವರನ್ನು ನಿರ್ಲಕ್ಷಿಸಿದ್ದರು. ಆಗ ತನೀಷಾ ಅವರಿಗೆ ತಾನು ನಿರ್ಮಾಪಕಿಯಾಗಬೇಕು. ಆದರೆ ಎಲ್ಲಾ ಕಲಾವಿದರಿಗೂ ಉತ್ತಮ ರೀತಿಯ ಸೌಕರ್ಯ ನೀಡಬೇಕು ಎಂದು ನಿರ್ಧರಿಸಿದ್ದರು. ಅದೇ ಪ್ರಯತ್ನದಿಂದಲೇ ಇಂದು ತನೀಷಾ ಕೋಣ ಸಿನಿಮಾ ನಿರ್ಮಿಸಿದ್ದಾರೆ.
ಇನ್ನು ತಮಿಳು ಸಿನಿಮಾದಲ್ಲಿ ನಟಿಸಲು ತನೀಷಾ ಅವರಿಗೆ ಅವಕಾಶ ಸಿಕ್ಕಿತ್ತಂತೆ. ಈ ಸಿನಿಮಾವನ್ನು ಕುಷ್ಬು ಅವರನ್ನು ನಿರ್ಮಿಸಿದ್ದರು. ಓರ್ವ ಹೆಣ್ಣು ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ ಎಂದು ಆಗ ತನೀಷಾ ಅವರಿಗೆ ಖುಿಷಿ ಆಗಿತ್ತಂತೆ. ಹಾಗಾಗಿ ಅವರನ್ನೇ ಮಾದರಿಯನ್ನಾಗಿ ಇಟ್ಟುಕ“ಂಡಿದ್ದರಂತೆ. ಅಲ್ಲದೇ, ತನೀಷಾ ಅವರ ತಾಯಿ ಮನೆ ನಡೆಸುವ ರೀತಿ ನೋಡಿ, ತಾನು ಲೀಡರ್ ಆಗುವುದನ್ನು ತನೀಷಾ ಕಲಿತಿದ್ದರಂತೆ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

