ಕಿಚ್ಚ ಸರ್ ದೇವರಂಥಾ ಮನುಷ್ಯ: Rithvik Krupakar Podcast

Sandalwood: ನಟ ರಿತ್ವಿಕ್ ಕೃಪಾಕರ್ ಸಂದರ್ಶನದಲ್ಲಿ ಮಾತನಾಡಿದ್ದು, ಜೀವನದಲ್ಲಿ ಸೋಲು ಅನ್ನೋದು ಬರಬೇಕು. ಆ ಸೋಲಿನಿಂದಲೇ ನಾವು ಬುದ್ಧಿ ಕಲಿಯಬೇಕು ಎಂದಿದ್ದಾರೆ.

ಸೋತರೆ ಸೋತು ನೆಲ್ಲಕ್ಕೆ ಬಿದ್ದು ಮಣ್ಣು ಮುಖಕ್ಕೆ ತಾಕಬೇಕು. ಆಗಲೇ ನಮಗೆ ಮುಂದೆ ಆ ತಪ್ಪು ಮಾಡಬಾರದು ಅಂತಾ ತಿಳಿಯೋದು. ಸೋಲನ್ನು ಅನುಭವಿಸುವುದರಲ್ಲೂ ಮಜಾ ಇದೆ. ಜೀವನದಲ್ಲಿ ಅದು ಕೂಡ ಬೇಕು ಅಂತಾರೆ ರಿತ್ವಿಕ್ ಕೃಪಾಕರ್.

ಇನ್ನು ಕಿಚ್ಚ ಸುದೀಪ್ ಬಗ್ಗೆ ಮಾತನಾಡಿರುವ ರಿತ್ವಿಕ್, ನಾನು ಮುಂಚೆ ಎಲ್ಲಾ ನಟನೆಗೆ ಅವಕಾಶ ಕೇಳುತ್ತಿದ್ದೆ. ಆಗ ಸುದೀಪ್ ಸರ್ ನನಗೆ ಹೀಗೆ ಹೇಳಿದರು. ನೀವು ಉತ್ತಮ ನಟರಾಗಿದ್ದೀರಿ. ಉತ್ತಮ ಕಲಾವಿದರಾಗಿದ್ದೀರಿ. ಅವಕಾಶ ನಿಮ್ಮ ಬಳಿ ಬಂದೇ ಬರುತ್ತದೆ ಎಂದಿದ್ದರು ಎಂದು ಹೇಳಿದ್ದಾರೆ ರಿತ್ವಿಕ್.

ಮಂಡ್ಯ ರಮೇಶ್, ನಿರ್ದೇಶಕ ರಾಮ್‌ಜೀ ಅವರು ಕೂಡ ನನ್ನ ಸಿನಿಮಾದ ಗಾಡ್‌ಫಾದರ್. ಇವರೆಲ್ಲ ನನ್ನ ಯಶಸ್ಸು ಬಯಸಿದರೆ, ಕೆಟ್ಟದ್ದಾಗಲಿ ಅಂತಾ ಬಯಸುವವರು ಊರ ತುಂಬಾ ಇದ್ದಾರೆ ಅಂತಾ ಹೇಳಿದ್ದಾರೆ ರಿತ್ವಿಕ್ ಕೃಪಾಕರ್.

ಇನ್ನು ಉದಾಸೀನತೆ ಮತ್ತು ಕೋಪ ರಿತ್ವಿಕ್ ಅವರ ಮೈನಸ್ ಆಗಿತ್ತಂತೆ. ಆದರೆ ಈಗ ಯಾುದೇ ಕಾರಣಕ್ಕೂ ರಿತ್ವಿಕ್ ಉದಾಸೀನತೆ ತೋರಿಸುವುದೇ ಇಲ್ಲ. ಆಗ ಮಾಡಬೇಕಾದ ಕೆಲಸ ಆಗಲೇ ಮಾಡುತ್ತೇನೆ ಎಂದಿದ್ದಾರೆ. ಇನ್ನು ಡಯಟ್ ಮೆಂಟೇನ್ ಮಾಡೋದು ಕಷ್ಟ. ನನಗೆ ಊಟ ಅಂದ್ರೆ ತುಂಬಾ ಇಷ್ಟ. ಆದರೆ ಯಾವುದಾದರೂ ಕೆಲಸ ಆಗಲೇಬೇಕು ಎಂದು ನಿರ್ಧರಿಸಿದರೆ, ಆ ಕೆಲಸ ಮಾಡಿಯೇ ಮಾಡುತ್ತೇನೆ ಅಂತಾರೆ ರಿತ್ವಿಕ್. ಸಂದರ್ಶನಕ್ಕಾಗಿ ವೀಡಿಯೋ ನೋಡಿ.

About The Author