Thursday, March 13, 2025

Latest Posts

ಕಿಚ್ಚನ ಹೊಸ ಲುಕ್ ಗೆ ಫಿದಾ ಆದ ಪ್ರೇಕ್ಷಕರು…!

- Advertisement -

Bigboss:

ಬಿಗ್ ಬಾಸ್ ಓಟಿಟಿ ಸಖತ್ತಾಗೆ ಸದ್ದು ಮಾಡಿತ್ತಿದ್ದು ಇದೀಗ ಸುದೀಪ್ ಹೊಸ ಲುಕ್ ನಿಂದ ಸದ್ದು ಮಾಡುತ್ತಿದೆ. ಸುದೀಪ್ ಕ್ಲೀನ್ ಶೇವ್ ಲುಕ್ ನಲ್ಲಿ ಕಾಣಿಸಿಕೊಂಡಿರುವುದು ಅಭಿಮಾನಿಗಳಿಗೆ ಖುಷಿಯ ಜೊತೆ ಕುತೂಹಲವನ್ನು ತಂದೊಡ್ಡಿದೆ.

ಹೌದು ಸುದೀಪ್​ಗೆ ಇಷ್ಟು ದಿನ ಗಡ್ಡ ಇತ್ತು. ‘ವಿಕ್ರಾಂತ್ ರೋಣ’ ಸಿನಿಮಾದಲ್ಲೂ ಅವರಿಗೆ ಅದೇ ರೀತಿಯ ಲುಕ್ ಇತ್ತು. ಅದನ್ನೇ ಸುದೀಪ್ ಮುಂದುವರಿಸಿದ್ದರು. ಈಗ ಅವರು ಏಕಾಏಕಿ ಕ್ಲೀನ್​ ಶೇವ್ ಮಾಡಿಸಿದ್ದಾರೆ. ಕಿಚ್ಚನ ಹೊಸ ಗೆಟಪ್ ಫ್ಯಾನ್ಸ್​ಗೆ ಸಖತ್ ಖುಷಿ ಕೊಟ್ಟಿದೆ.

ಸದ್ಯ ಕಿಚ್ಚನ ಲುಕ್​ಅನ್ನು ಕಲರ್ಸ್ ಸೂಪರ್ ಟಿವಿ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ‘ಮೊದಲಿಗಿಂತ ಈಗ ನೀವು ಮತ್ತಷ್ಟು ಯಂಗ್ ಆಗಿದ್ದೀರಿ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ‘ಲವರ್ ಬಾಯ್ ಕಿಚ್ಚ’ ಎಂದು ಕಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಅವರ ಹೊಸ ಲುಕ್ ಫ್ಯಾನ್ಸ್​ಗೆ ಸಖತ್ ಇಷ್ಟವಾಗಿದೆ.

 

- Advertisement -

Latest Posts

Don't Miss