ಪಾಲಿಟಿಕ್ಸ್ ಗೆ ಸುದೀಪ್ ಎಂಟ್ರಿ ಪಕ್ಕಾ ?

ಚಿತ್ರರಂಗದಲ್ಲಿ ಸಕ್ಸಸ್ ಪಡೆದಿರುವ ಕಿಚ್ಚ ಸುದೀಪ್ ಅವರು ಪಾಲಿಟಿಕ್ಸ್​ಗೆ ಎಂಟ್ರಿ ಕೊಡ್ತಾರಾ?

ನಟಿ ರಮ್ಯಾ ಅವರು ಈಗಾಗಲೇ ಕಿಚ್ಚ ಸುದೀಪ್ ಅವರೊಂದಿಗೆ ಮಾತನಾಡಿದ್ದಾರೆ ಎಂದು ಹೇಳಲಾಗಿದೆ. ಕಿಚ್ಚ ಸುದೀಪ್ ಅವರನ್ನು ಭೇಟಿಯಾಗಿ ರಾಜಕೀಯಕ್ಕೆ ಎಂಟ್ರಿ ಕೊಡುವ ಬಗ್ಗೆ ನಟಿ ಮಾತನಾಡಿದ್ದಾರೆ ಎನ್ನಲಾಗಿದೆ.

ವಿಧಾನಸಭಾ ಚುನಾವಣೆ ಸಮೀಪಿಸಿರುವ ಸಂದರ್ಭ ಕಿಚ್ಚ ಸುದೀಪ್​ಗೆ ಆಫರ್ ಕೊಡಲಾಗಿದೆ. ನಟ ಸುದೀಪ್ ಅವರನ್ನು ಪಕ್ಷಕ್ಕೆ ಸೆಳೆಯುವ ತಂತ್ರ ಶುರುವಾಗಿದೆ.

ಸುದೀಪ್‌ ಅವರು ಕಾಂಗ್ರೆಸ್‌ ಕರೆ ತೆರುವ ನಿಟ್ಟಿನಲ್ಲಿ ನಟಿ, ಮಾಜಿ ಸಂಸದೆ ರಮ್ಯಾ ಅವರು ಕೂಡ ಮುಂದಾಗಿದ್ದಾರೆ ಎನ್ನಲಾಗಿದೆ. ನಟ ಸುದೀಪ್‌ ಅವರು ವಾಲ್ಮಿಕಿ ಸಮುದಾಯಕ್ಕೆ ಸೇರಿದ್ದು, ಈ ನಿಟ್ಟಿನಲ್ಲಿ ಎಸ್‌ಟಿ ಸಮುದಾಯದ ಓಟುಗಳನ್ನು ಕೂಡ ತನ್ನ ಸೆಳೆಯಲು ಕಾಂಗ್ರೆಸ್‌ ಮುಂದಾಗಿದೆ.

ಒಂದು ವೇಳೇ ಕಾಂಗ್ರೆಸ್‌ನ ಸುದೀಪ್‌ ಅವರು ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಮನಸ್ಸು ಮಾಡಿದರು. ನಟ ಸುದೀಪ್‌ ಅವರು ಎಸ್‌ಟಿ ವಿಧಾನಸಭೆಯಿಂದ ಸ್ಪರ್ಧೆ ಮಾಡುವುದು ಬಹುತೇಕ ಖಚಿತವಾಗುತ್ತದೆ.

About The Author