Wednesday, April 16, 2025

Latest Posts

ಕಿಚ್ಚನಿಗೆ ನಿಂದನೆ: ಅಹೋರಾತ್ರ, ಚರಣ್ ವಿರುದ್ಧ ಸೈಬರ್ ಕ್ರೈಂಗೆ ದೂರು

- Advertisement -

ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಕೆಟ್ಟ ಪದಗಳಿಂದ ನಿಂದಿಸುತ್ತಿದ್ದ ಅಹೋರಾತ್ರ ಮತ್ತು ಚರಣ್ ವಿರುದ್ಧ ಫೀಲ್ಮ್ ಚೇಂಬರ್ ಅಧ್ಯಕ್ಷರಾದ ಭಾ.ಮಾ ಹರೀಶ್ ಅವರು ಸೈಬರ್ ಅಪರಾಧ ಕಮೀಷನರಿಗೆ ದೂರು ನೀಡಿದ್ದಾರೆ.

ಅಹೋರಾತ್ರ ಮತ್ತು ಚರಣ್ ಸಾಮಾಜಿಕ ಜಾಲತಾಣದಲ್ಲಿ ಸುದೀಪ್ ಬಗ್ಗೆ ಬಹಳ ಕೆಟ್ಟ ಕೆಟ್ಟದಾಗಿ ಬೈದು ಅವಹೇಳನಕಾರಿ ಹೇಳಿಕೆ ನೀಡಿದ್ದರು. ಅಂತರ ಜಾಲದ ಗೇಮ್‌ಗಳ ಪ್ರಚಾರದ ವಿಚಾರವಾಗಿ ಅವರಿಗೆ ಬಾಯಿಗೆ ಬಂದತೆ ಮಾತನಾಡುತ್ತಿದ್ದರು.

ಈ ಹಿನ್ನೆಲೆಯಲ್ಲಿ ಭಾ.ಮಾ. ಹರೀಶ್ ಅವರು ದೂರು ನೀಡಿದ್ದು ತಮ್ಮ ದೂರಿನಲ್ಲಿ ‘ಸುದೀಪ್ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿರುವ ನಟ. ಈ ರೀತಿ ಅವಹೇಳನಕಾರಿ ಹೇಳಿಕೆ ನೀಡುವ ಮೂಲಕ ಸುದೀಪ್ ಗೌರವಕ್ಕೆ ಚ್ಯುತಿ ಬರುವ ರೀತಿ ವರ್ತಿಸಲಾಗುತ್ತಿದೆ. ಅಹೋರಾತ್ರ ಮತ್ತು ಚರಣ್ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ತಮ್ಮ ದೂರಿನಲ್ಲಿ ತಿಳಿಸಿದ್ಧಾರೆ.

- Advertisement -

Latest Posts

Don't Miss