Saturday, April 20, 2024

Latest Posts

ಬಿಗ್‌ಬಾಸ್ ಸೀಸನ್-9ಗೆ ಭರ್ಜರಿ ಸಿದ್ಧತೆ..!

- Advertisement -

ಈ ಬಾರಿಯ ಬಿಗ್‌ಬಾಸ್ ಮನೆ ಹೇಗಿರಲಿದೆ ಎಂಬ ಸುಳಿವು ನೀಡಿದ ಪರಮೇಶ್ವರ್ ಗುಂಡ್ಕಲ್..!

ಬಿಗ್‌ಬಾಸ್…ಕನ್ನಡದ ಬಿಗ್ಗೆಸ್ಟ್ ರಿಯಾಲಿಟಿ ಶೋ.. ಮನೆ ಮಂದಿಯೆಲ್ಲಾ ಒಟ್ಟಿಗೆ ಕೂತು ನೋಡುವ ಬಿಗ್‌ಬಾಸ್ ರಿಯಾಲಿಟಿ ಶೋನ ಮುಂದಿನ ಸೀಸನ್‌ನಲ್ಲಿ ಯಾರಾರೆಲ್ಲಾ ಬರ್ತಾರೆ. ಈ ಬಾರಿಯ ಬಿಗ್‌ಮನೆ ಹೇಗಿರುತ್ತೆ…ಹೀಗೆ ಒಂದಲ್ಲಾ ಎರಡಲ್ಲಾ ಸಾಕಷ್ಟು ಪ್ರಶ್ನೆಗಳು ಬಿಗ್‌ಬಾಸ್ ಅಭಿಮಾನಿಗಳಲ್ಲಿ ಮೂಡೋದು ಸಾಮಾನ್ಯ. ಅದರಂತೆ ನಿಮ್ಮ ಕುತೂಹಲವನ್ನೀಗ ಮತ್ತಷ್ಟು ಹೆಚ್ಚಿಸಿದ್ದಾರೆ ಕಲರ್ಸ್ ಕನ್ನಡದ ಹೆಡ್ ಪರಮೇಶ್ವರ್ ಗುಂಡ್ಕಲ್.

ಹೌದು, ಬಿಗ್ ಬಾಸ್ ನ ಪ್ರತೀ ಸೀಸನ್ ಶುರುವಾಗೋಕೂ ಮುನ್ನ ಇದರ ಬಗ್ಗೆ ಕಂಪ್ಲೀಟ್ ಮಾಹಿತಿ ಹಂಚಿಕೊಳ್ಳೋದು ಅಥವಾ ಬಿಗ್‌ಬಾಸ್ ಹೌಸ್ ಬಗ್ಗೆ ಅಪ್ಡೇಟ್ ಕೊಡೋದು ಪರಮೇಶ್ವರ್ ಗುಂಡ್ಕಲ್ ಅವರೇ. ಅದರಂತೆಯೇ ಈ ಬಾರಿ ಸಹ ಬಿಗ್‌ಬಾಸ್ ಸೀಸನ್-9ರ ಬಗ್ಗೆ  ಬಿಗ್ ಅಪ್ಡೇಟ್‌ವೊಂದನ್ನ ನೀಡಿದ್ದಾರೆ.

ಇತ್ತೀಚಿಗಷ್ಟೆ ಬಿಗ್ ಬಾಸ್ ಸೀಸನ್ 9 ಬಗ್ಗೆ ಹೊಸ ಅಪ್ ಡೇಟ್ ಬಹಿರಂಗವಾಗುವ ಮೂಲಕ ಅಭಿಮಾನಿಗಳಲ್ಲಿ ಥ್ರಿಲ್ ಹೆಚ್ಚಿಸಿದ್ದರು. ಬಹುನಿರೀಕ್ಷೆಯ ಬಿಗ್ ಬಾಸ್ ಆಗಸ್ಟ್‌ ಮೊದಲ ವಾರದಿಂದ ಆರಂಭವಾಗಲಿದೆ ಎನ್ನುವ ಮಾಹಿತಿ ರಿವೀಲ್ ಆಗಿತ್ತು. ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 9 ಬಗ್ಗೆ ಮತ್ತೊಂದು ಇಂಟ್ರಸ್ಟಿಂಗ್ ಮಾಹಿತಿ ರಿವೀಲ್ ಆಗಿದೆ. ಬಿಗ್ ಬಾಸ್ ಸೀಸನ್ 9ಗೆ ಭರ್ಜರಿ ಸಿದ್ಧತೆ ನಡೆಸುತ್ತಿರುವ ಬಗ್ಗೆ ಬಿಗ್ ಬಾಸ್  ಆಯೋಜಕ ಪರಮೇಶ್ವರ್ ಗುಂಡ್ಕಲ್ ಅಪ್ ಡೇಟ್ ನೀಡಿದ್ದಾರೆ. ಈಗಾಗಲೇ ಬಿಗ್ ಮನೆಯ ಕೆಲಸ ಪ್ರಾರಂಭವಾಗಿದೆ. ಆಕರ್ಷಕವಾಗಿ ಬಿಗ್ ಬಾಸ್ ಮನೆಯನ್ನು ನಿರ್ಮಿಸಲಾಗುತ್ತದೆ. ಈಗಾಗಲೇ ಬಿಗ್ ಬಾಸ್ ಮನೆಯ ನಿರ್ಮಾಣ ಕಾರ್ಯ ಪ್ರಾರಂಭವಾಗಿದೆ.

ಬಿಗ್ ಬಾಸ್ ಮನೆಯ ಕೆಲಸ ಈಗಾಗಲೇ ಆರಂಭವಾಗಿದೆ ಎಂದು ಪರಮೇಶ್ವರ್ ಗುಂಡ್ಕಲ್ ಬಹಿರಂಗ ಪಡಿಸಿದ್ದಾರೆ. ಫೋಟೋ ಶೇರ್ ಮಾಡುವ ಮೂಲಕ ಬಿಗ್ ಬಾಸ್ ಸೀಸನ್ 9 ಕೆಲಸ ಪ್ರಾರಂಭವಾಗಿದೆ ಎಂದಿದ್ದಾರೆ. ಬಿಗ್ ಮನೆಯ ಮುಂದೆ ನಿಂತು ಫೋಟೋ ಶೇರ್ ಮಾಡಿರುವ ಪರಮೇಶ್ವರ್ ನಿರ್ಮಾಣ ಹಂತದಲ್ಲಿದೆ ಎಂದು ಹೇಳಿದ್ದಾರೆ.

- Advertisement -

Latest Posts

Don't Miss