ಬೆಂಗಳೂರು: ಕೆ.ಒನ್ ಅಸೋಸಿಯೇಷನ್ ಆಫ್ ಕರ್ನಾಟಕ ಆಯೋಜಿಸಿದ್ದ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಗಾಯಗೊಂಡಿದ್ದ ಹೊಸಕೆರೆಯ ಕಿಕ್ ಬಾಕ್ಸರ್ ನಿಖಿಲ್ (23) ಕೊನೆಯುಸಿರೆಳೆದಿದ್ದಾರೆ.
ಜು.10ರಂದು ರಾಜ್ಯ ಮಟ್ಟದ ಕೆ1 ಕಿಕ್‍ಬಾಕ್ಸಿಂಗ್ ಚಾಂಪಿಯನ್‍ಶಿಪ್ ಜ್ಯೋತಿ ನಗರದ ಪೈ ಇಂಟರ್‍ನ್ಯಾಷನಲ್‍ನ ಐದನೆ ಮಹಡಿಯಲ್ಲಿ ನಡೆದಿತ್ತು. ನಾಗರಬಾವಿಯ ರಾಪಿಡ್ ಫಿಟ್ನೆಸ್‍ನಲ್ಲಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಮೈಸೂರಿನ 23 ವರ್ಷದ ನಿಖಿಲ್ ರಿಂಗ್ ಕಣದಲ್ಲಿರುವಾಗಲೇ ಎದುರಾಳಿ ನೀಡಿದ ಪಂಚ್‍ಗೆ ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲಿ ಕುಸಿದುಬಿದ್ದಿದ್ದಾನೆ. ಕೂಡಲೇ ಯಶವಂತಪುರದ ಮಣಿಪಾಲ್ ಆಸ್ಪತ್ರೆಗೆ ಸೇರಿಸಲಾಯಿತು.
ಆಸ್ಪತ್ರೆಗೆ ಸೇರಿಸುವಾಗ ಪ್ರಾಥಮಿಕ ಚಿಕಿತ್ಸೆ ನೀಡಿಲ್ಲಘಿ. ಪ್ರಜ್ಞೆ ಕಳೆದುಕೊಂಡಿದ್ದ ನಿಖಿಲ್‍ಗೆ 30 ನಿಮಿಷಗಳ ಕಾಲ ಆಮ್ಲಾಜನ ವ್ಯವಸ್ಥೆ ಇರಲಿಲ್ಲ . ಇದರ ಪರಿಣಾಮ ಶ್ವಾಸ ಕೋಶಕ್ಕೆ ಹೆಚ್ಚು ಹಾನಿಯಾಯಿತು ಎಂದು ಕೋಚ್ ವಿಕ್ರಂ ತಿಳಿಸಿದ್ದಾರೆ.
https://karnatakatv.net/wp-admin/post-new.php
ಜೊತೆಗೆ ಆಯೋಜಕರು ಆ್ಯಂಬುಲೆನ್ಸ್, ಸ್ಟ್ರೆಚರ್ ಹಾಗೂ ವೈದ್ಯಕೀಯ ಸೌಲಭ್ಯಯಗಳನ್ನು ಒದಗಿಸಿರಲಿಲ್ಲ. ಸ್ಟ್ರೆಚರ್ ಇಲ್ಲದ ಕಾರಣ ಐದನೆ
ಮಹಡಿಯಿಂದ ನಿಖಿಲ್ ಅವರನ್ನು ಹೊತ್ತು ಆಸ್ಪತ್ರೆಗೆ ಸಾಗಿಸಲಾಯಿತು. ರಕ್ತಸ್ರಾವ ಹೆಚ್ಚಾಗಿತ್ತು ಸಿಟಿ ಸ್ಕ್ಯಾನ್‍ನಲ್ಲೂ ಪರಿಸ್ಥಿತಿ ಕೈಮೀರಿ ಹೋಗಿರುವುದು ಕಂಡು ಬಂತು ಎಂದು ತಿಳಿಸಿದ್ದಾರೆ.
ಮಣಿಪಾಲ ಆಸ್ಪತ್ರೆಗೆ ದಾಖಲಿಸಿದರೂ ನಿಖಿಲ್ ಸ್ಪಂದಿಸಲಿಲ್ಲ. ಆಯೋಜಕರ ನಿರ್ಲಕ್ಷ್ಯದಿಂದಾಗಿ ಪ್ರತಿಭಾನ್ವಿತಾ ಬಾಕ್ಸರ್‍ರೊಬ್ಬರನ್ನು ಕಳೆದುಕೊಂಡಾಂತಾಗಿದೆ.
ಆಯೋಕರ ನಿರ್ಲಕ್ಷ ಸಾವಿಗೆ ಕಾರಣ!
ಸ್ಥಳದಲ್ಲಿ ವೈದ್ಯರು, ಆಂಬುಲೆನ್ಸ್ ಸೇರಿ ಯಾವುದೇ ಮುಂಜಾಗ್ರತ ಕ್ರಮ ಕೈಗೊಂಡಿರಲಿಲ್ಲ. ಇದರಿಂದಾಗಿಯೇ ಪ್ರಥಮ ಚಿಕಿಸ್ತೆ ಸರಿಯಾಗಿ ಸಿಗದೇ ಸಾವನ್ನಪ್ಪಿದ್ದಾನೆ ಎಂದು ನಿಖಿಲ್ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸದ್ಯ ಆಯೋಜಕರ ನವೀನ್ ರವಿಶಂಕರ್ ತಲೆಮರೆಸಿಕೊಂಡಿದ್ದಾನೆ. ಅವನಿಗಾಗಿ ಹುಡುಕಾಟ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.