Sunday, September 8, 2024

Latest Posts

ಕಿವೀಸ್ ಮಹಿಳಾ ಕ್ರಿಕೆಟ್ ಟೀಂಗೆ ಬೆದರಿಕೆ..!

- Advertisement -

www.karnatakatv.net: ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯಕ್ಕಾಗಿ ನ್ಯೂಜಿಲೆಂಡ್ ಮಹಿಳಾ ಕ್ರಿಕೆಟ್ ತಂಡಕ್ಕೆ ಬಾಂಬ್ ಬೆದರಿಕೆ ಬಂದಿದೆ. ಈ  ಹಿನ್ನೆಲೆಯಲ್ಲಿ ಇಂಗ್ಲೆಂಡ್ ನ ಲೈಸೆಸ್ಟರ್ ಗೆ ಬಂದಿಳಿದಿದ್ದ ಆಟಗಾರರು ಅಭ್ಯಾಸದಲ್ಲೂ ಪಾಲ್ಗೊಂಡಿಲ್ಲ.

 ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಮ್ಯಾನೇಜ್ ಮೆಂಟ್ ಸದಸ್ಯರನ್ನ ಸಂಪರ್ಕಿಸಿ, ಅವರು ಉಳಿದಿರುವ ಹೋಟೆಲ್ ನಲ್ಲಿ ಬಾಂಬ್ ಇರಿಸಲಾಗಿದ್ದು ಮತ್ತು ಅವರು ಪ್ರಯಾಣಿಸುವ ವಿಮಾನದಲ್ಲೂ ಬಾಂಬ್ ಇಡಲಾಗಿದೆ ಎಂದು ಬೆದರಿಕೆಹಾಕಲಾಗಿತ್ತು. ಈ ಬೆದರಿಕೆ ಕರೆ ಬಗ್ಗೆ ಮಂಡಳಿ ಪೊಲೀಸರು ಮತ್ತು ಭಯೋತ್ಪಾದನಾ ನಿಗ್ರಹ ದಳಕ್ಕೆ ಮಾಹಿತಿ ತಿಳಿಸಿದೆ.

ಮೇಲ್ ಮೂಲಕ ಬೆದರಿಕೆ ಬಂದಿದೆಯಾದರೂ ಇದರಲ್ಲಿ ನ್ಯೂಜಿಲೆಂಡ್ ಮಹಿಳಾ ಕ್ರಿಕೆಟ್ ತಂಡವನ್ನೇ ಉಲ್ಲೇಖಿಸಲಾಗಿಲ್ಲ. ಈ ಕುರಿತು ತನಿಖೆ ನಡೆಯುತ್ತಿದೆ. ಇನ್ನೂ ನ್ಯೂಜಿಲೆಂಡ್ ಮಹಿಳಾ ಕ್ರಿಕೆಟ್ ತಂಡ ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯಕ್ಕಾಗಿ ಲಿಸೇಸ್ಟರ್​ಗೆ ಬಂದಿದ್ದು,  ಈ ಬಾಂಬ್ ಬೆದರಿಕೆಯಿಂದಾಗಿ ಆಟಗಾರರು ಅಭ್ಯಾಸದಲ್ಲೂ ಪಾಲ್ಗೊಂಡಿಲ್ಲ ಎಂದು ವರದಿಯಾಗಿದೆ.

- Advertisement -

Latest Posts

Don't Miss