ವೇಗಿ ಪ್ಯಾಟ್ ಕಮಿನ್ಸ್ ಅವರ ಆಲ್ರೌಂಡ್ ಆಟದ ನೆರೆವಿನಿಂದ ಕೋಲ್ಕತ್ತಾ ನೈಟ್ ರೈಡರ್ಸ್ ಬಲಿಷ್ಠ ಮುಂಬೈ ವಿರುದ್ಧ 5 ವಿಕೆಟ್‍ಗಳ ಭರ್ಜರಿ ಗೆಲುವು ದಾಖಲಿಸಿದೆ.
ಪುಣೆಯಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಕೋಲ್ಕತ್ತಾ ಫೀಲ್ಡಿಂಗ್ ಆಯ್ದುಕೊಂಡಿತು.ಮುಂಬೈ ಪರ ಆರಂಭಿಕರಾಗಿ ಕಣಕ್ಕಿಳಿದ ನಾಯಕ ರೋಹಿತ್ ಶರ್ಮಾ 3 ಹಾಗೂ ಇಶನ್ ಕಿಶನ್ 14 ಉತ್ತಮ ಆರಂಭ ಕೊಡುವಲ್ಲಿ ಎಡವಿದರು.
ನಂತರ ಬಂದ ಡೆವಾಲ್ಡ್ ಬ್ರೆವಿಸ್ 29,ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ 52, ತಿಲಕ್ ವರ್ಮಾ 38 ರನ್ ಗಳಿಸಿದರು. ಕಿರಾನ್ ಪೊಲಾರ್ಡ್ ಅಜೇಯ 22 ರನ್‍ಗಳಿಸಿದರು. ಮುಂಬೈ ತಂಡ ನಿಗದಿತ 20 ಓವರ್‍ಗಳಲ್ಲಿ 4 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿತು.
162 ರನ್‍ಗಳ ಗುರಿ ಬೆನ್ನತ್ತಿದ ಕೋಲ್ಕತ್ತಾ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ವೆಂಕಟೇಶ್ ಅಯ್ಯರ್ ಅಜೇಯ50, ಅಜಿಂಕ್ಯ ರಹಾನೆ 7, ಶ್ರೇಯಸ್ ಅಯ್ಯರ್ 10, ಸಾಮ್ ಬಿಲ್ಲಿಂಗ್ಸ್ 17, ನಿತೀಶ್ ರಾಣಾ 8, ಆಂಡ್ರೆ ರಸೆಲ್ 11 ರನ್‍ಗಳಿಸಿದರು. 101 ರನ್‍ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಆಗಮಿಸಿದ ಪ್ಯಾಟ್ ಕಮಿನ್ಸ್ ಮುಂಬೈ ಬೌಲರ್ಸ್‍ಗಳ ಬೆವರಿಳಿಸಿದರು.
ಬರೋಬ್ಬರಿ 6 ಸಿಕ್ಸರ್, 4 ಬೌಂಡರಿ ಸೇರಿ 14 ಎಸೆತದಲ್ಲಿ ಅರ್ಧ ಶತಕ ಸಿಡಿಸಿ ಐಪಿಎಲ್‍ನಲ್ಲಿ ವೇಗದ ಆರ್ಧ ಶತಕ ದಾಖಲಿಸಿದರು. ಕೆ.ಎಲ್.ರಾಹುಲ್ ಹೆಸರಿನಲ್ಲಿದ್ದ ದಾಖಲೆಯನ್ನು ಸರಿಗಟ್ಟಿದರು.