Web Story: ಚಳಿ ಶುರುವಾಗಿದೆ. ಆದರೆ ಕೆಲಸ ಮಾಡುವವರಿಗೆ, ವಾಹನವೇರಿ ಕೆಲಸಕ್ಕೆ ಹೋಗಲೇಬೇಕು ಎನ್ನುವವರಿಗೆ ಎಲ್ಲ ಕಾಲವೂ ಸೇಮ್. ಆದರೆ ಚಳಿಗಾಲದಲ್ಲಿ ಬೆಳಿಗ್ಗೆ ಬೆಳಿಗ್ಗೆ ಕೆಲಸಕ್ಕೆ ಹೋಗುವವರಿಗೆ, ಮಂಜು ಅಡ್ಡ ಬಂದು ಕಿರಿಕಿರಿಯಾಗೋದು ಖಂಡಿತ. ಇದು ಬರೀ ಕಿರಿ ಕಿರಿ ಅಲ್ಲ, ಬದಲಾಗಿ, ಜೀವಕ್ಕೂ ಆಪತ್ತು ತರಬಹುದು. ಹಾಗಾಗಿ ನಾವಿಂದು ನಿಮಗೆ ಆಪತ್ತು ಬಾರದ ಹಾಗೆ ಮಾಡಬಹುದಾದ 5 ಕೆಲಸದ ಬಗ್ಗೆ ಹೇಳಲಿದ್ದೇವೆ. ಇದನ್ನು ಫಾಲೋ ಮಾಡಿ, ಜೀವಹಾನಿಯಿಂದ ನೀವು ಪಾರಾಗಬಹುದು.
1. ನಿಮ್ಮ ಬೈಕ್ ಮತ್ತು ನಿಮ್ಮ ಹೆಲ್ಮೆಟ್ ಮತ್ತು ನಿಮ್ಮ ಬ್ಯಾಗ್‌ಗೆ ನೂರು ರೂಪಾಯಿಗೆ ಸಿಗುವ ರಿಫ್ಲೆಕ್ಟಿವ್ ಟೇಪ್ ಅಂಟಿಸಿ. ಹೀಗೆ ಮಾಡುವುದರಿಂದ ಇತರ ವಾಹನ ಸವಾರರಿಗೆ ನಿಮ್ಮ ಬೈಕ್ ದೂರದಿಂದಲೇ ಕಾಣಿಸುತ್ತದೆ. ಆಗ ಅಪಘಾತವಾಗುವುದನ್ನು ತಪ್ಪಿಸಬಹುದು.
2. ಉತ್ತಮ ಕ್ವಾಲಿಟಿಯ ಹೆಲ್ಮೆಟ್ ಖರೀದಿ ಮಾಡಿ. ಅಪಘಾತವಾಗಿ ಲಕ್ಷ ಲಕ್ಷ ಖರ್ಚು ಮಾಡುವ ಬದಲು ಉತ್ತಮವಾದ ಹೆಲ್ಮೆಟ್ ಖರೀದಿ ಮಾಡುವುದೇ ಉತ್ತಮ. ಹಾಗಾಗಿ ನೀವು ಬೈಕ್‌ನಿಂದ ಬಿದ್ದರೂ ನಿಮ್ಮ ತಲೆ ಸೇಫ್ ಆಗಿ ಇರಲು ಖಂಡಿತವಾಗಿಯೂ ಗಟ್ಟಿ ಮುಟ್ಟಾಗಿರುವ ಹೆಲ್ಮೆಟ್ ಖರೀದಿ ಮಾಡಿ.
3. ನಿಮ್ಮ ಬೈಕ್ ಲೈಟ್ಗೆ ಎಲ್ಲೋ ಕಲರ್ ಪ್ಲಾಸ್ಟಿಕ್ ಅಂಟಿಸಿ. ಏಕೆಂದರೆ, ಬಿಳಿ ಲೈಟ್ಗಿಂತ್ ಹಳದಿ ಬಣ್ಣದ ಲೈಟ್ ಗಾಢವಾಗಿರುತ್ತದೆ. ಹಾಗಾಗಿ ಬೆಳಕು ಹೆಚ್ಚಾಗಿ ಬೀಳುವ ಕಾರಣ, ಅಪಘಾತದ ಸಾಧ್ಯತೆ ಕಡಿಮೆಯಾಗುತ್ತದೆ.
4. ಲಾರಿ, ಬಸ್, ಟ್ರ್ಯಾಕ್ಟರ್ ನಂಥ ವಾಹನಗಳ ಬಳಿ ಹೆಚ್ಚು ಹೋಗಬೇಡಿ. ಏಕೆಂದರೆ ಮಂಜು ಬೀಳುವುದರಿಂದ ಆ ವಾಹನದ ಅಕ್ಕ ಪಕ್ಕ ಯಾವ ಗಾಡಿ ಬರುತ್ತಿದೆ ಅನ್ನೋದನ್ನ, ಅಂಥ ಗಾಡಿಯಲ್ಲಿ ಕುಳಿತ ಚಾಲಕರು ಪತ್ತೆ ಹಚ್ಚಲು ಕಷ್ಟವಾಗಬಹುದು. ಹಾಗಾಗಿ ಇಂಥ ವಾಹನಗಳ ಬಳಿ ಗಾಡಿ ಓಡಿಸೋದನ್ನು ಅವೈಡ್ ಮಾಡಿ.
5. ಬೈಕ್ ಅಲ್ಲಿ ಹೋಗುವಾಗ ಆಗಾಗ ಹಾರ್ನ್ ಹಾಕಿ. ಮಂಜಿನಲ್ಲಿ ನಿಮ್ಮ ಬೈಕ್ ಕಾಣದಿದ್ದರೂ, ಅಕ್ಕ ಪಕ್ಕದಲ್ಲಿರುವ ವಾಹನ ಸವಾರರು ನಿಮ್ಮ ಬೈಕ್ ಹಾರ್ನ್ ಸೌಂಡ್ ಕೇಳಿಯಾದರೂ, ಎಚ್ಚೆತ್ತುಕ“ಳ್ಳುತ್ತಾರೆ.
6.ಆದಷ್ಟು ನಿಮ್ಮ ಬೈಕ್ ಮಿರರ್ ಕ್ಲೀನ್ ಆಗಿರಿಸಿ. ಇದರಿಂದಲೂ ಅಪಘಾತ ಸಂಭವ ತಪ್ಪುತ್ತದೆ ಅಂದ್ರೆ ನೀವು ನಂಬಲೇಬೇಕು.




