Knowledge: ಯಾರಿಗೆ ತಾನೇ ತಾವು ಶ್ರೀಮಂತರಾಗಬೇಕು..? ಚೆನ್ನಾಗಿ ದುಡ್ಡು ಮಾಡಬೇಕು, ಚಿಕ್ಕ ವಯಸ್ಸಿಗೆ ನಿವೃತ್ತಿಯಾಗಬೇಕು ಅನ್ನೋ ಆಸೆ ಇರೋದಿಲ್ಲ..? ಈಗಂತೂ ಹಲವರು 40ಕ್ಕೆ ಲೈಫ್ ನಲ್ಲಿ ಸೆಟಲ್ ಆಗಿ, ಪ್ರವಾಾಸ ಮಾಡಿಕ“ಂಡು ಇರಬೇಕು ಅಂತಾ ಆಸೆಪಡುತ್ತಾರೆ. ಹಾಗಾಗಬೇಕು ಅಂದ್ರೆ ನೀವು ಕೆಲವು ರೂಲ್ಸ್ ಫಾಲೋ ಮಾಡ್ಬೇಕು. ಹಾಗಾದ್ರೆ ಆ ರೂಲ್ಸ್ ಏನು ಅಂತಾ ತಿಳಿಯೋಣ ಬನ್ನಿ..
First Rule: ನಾವು ದುಡಿಮೆ ಶುರು ಮಾಡಿದ ಬಳಿಕ, ಎಲ್ಲ ಖರ್ಚಿಗೂ ಲೆಕ್ಕವಿಡಬೇಕು. ಯಾಕಂದ್ರೆ ಚಿಕ್ಕ ಚಿಕ್ಕ ವಿಚಾರಗಳು ಸಹ, ದೊಡ್ಡ ವ್ಯತ್ಯಾಸವನ್ನೇ ಮಾಡುತ್ತದೆ. ನೀವು ತರುವ, ತರಕಾರಿ, ದಿನಸಿಯಿಂದ ಹಿಡಿದು ಮನೆ ಬಾಡಿಗೆ, ಖರೀದಿಸುವ ಹಲವರು ವಸ್ತುಗಳು ಎಲ್ಲದರ ಲೆಕ್ಕಾಚಾರ ನಿಮ್ಮ ಬಳಿ ಇರಬೇಕು.
ಈ ರೂಲ್ಸ್ ಫಾಲೋ ಮಾಡಲು ಇರುವ ಕಾರಣದ ಬಗ್ಗೆ ಉದಾಹರಣೆ ನೀಡಬೇಕೆಂದರೆ, ನೀವು ಪ್ರತಿದಿನ ಆಫೀಸಿಗೆ ಬಂದ ಬಳಿಕ, ಬ್ರೇಕ್‌ನಲ್ಲಿ ಚಹ ಕುಡಿಯುತ್ತೀರಿ. ದಿನಕ್ಕೆ 3 ಬಾರಿ ದುಡ್ಡು ಕ“ಟ್ಟು ಚಹಾ ಕುಡಿದರೆ, ದಿನಕ್ಕೆ 60 ರೂಪಾಯಿ ಖರ್ಚಾಗುತ್ತದೆ. ದಿನಕ್ಕೆ 26 ದಿನ ಹೀಗೆ 60 ರೂಪಾಯಿ ಖರ್ಚು ಮಾಡಿದರೆ, 1,560 ರೂಪಾಯಿ, ವರ್ಷಕ್ಕೆ 18,720 ರೂಪಾಯಿ. ಹಾಗಾಗಿ ಚಿಕ್ಕ ಚಿಕ್ಕ ಖರ್ಚುಗಳು ದೊಡ್ಡ ವ್ಯತ್ಯಾಸವನ್ನೇ ಮಾಡುತ್ತದೆ. ಅದೇ ರೀತಿ ನೀವು ಮಾಡುವ ಎಲ್ಲಾ ಖರ್ಚುಗಳನ್ನು ಲೆಕ್ಕ ಹಾಕಿದಾಗ, ನೀವು ಎಲ್ಲಿ ಅನವಶ್ಯಕ ಖರ್ಚು ಮಾಡುತ್ತಿದ್ದೀರಿ ಅಂತಾ ಗ“ತ್ತಾಗುತ್ತದೆ.
Second Rule: ಮನುಷ್ಯನಿಗೆ ಎಲ್ಲಾಕ್ಕಿಂತ ಮುಖ್ಯ ಅಂದ್ರೆ, ಸೆವಿಂಗ್ಸ್. ಕಷ್ಟ ಕಾಾಲದಲ್ಲಿ ನಮ್ಮ ಬಳಿ ಹಣವಿರುವುದು ತುಂಬಾ ಮುಖ್ಯ. ಹಾಗಾಗಿ ಸಂಬಳ ಬಂದ ಬಳಿಕ, ಅದನ್ನು ಖರ್ಚು ಮಾಡುವ ಮ“ದಲು, ಸ್ವಲ್ಪ ಹಣವನ್ನು ಇನ್ವೆಸ್ಟ್ ಮಾಡಬೇಕು. ಆಗ ಹಣಕ್ಕೆ ಬಡ್ಡಿ ಸಿಗುತ್ತದೆ. ಹಣ ಕೂಡಿಸಿ ಮನೆಯಲ್ಲಿ ಇರಿಸಿದರೆ, ಅದು ತನ್ನ ಮೌಲ್ಯವನ್ನು ಕಳೆದುಕಳ್ಳುತ್ತದೆ. ಆದರೆ ಇನ್ವೆಸ್ಟ್ ಮಾಡಿದರೆ ಅದರ ಮೌಲ್ಯ ಬೆಳೆಯುತ್ತದೆ. ಎಫ್‌ಡಿ, ಮ್ಯೂಚುವಲ್ ಫಂಡ್, ಶೇರ್ಸ್, ಗೋಲ್ಡ್ ಹೀಗೆ ಹಲವು ಕಡೆ ನೀವು ಹಣ ಹೂಡಬಹುದು. ಹೆಚ್ಚು ವರ್ಷಗಳ ಕಾಲ ಹಣ ಇರಿಸಿದರೆ, ಬಡ್ಡಿಯೂ ಹೆಚ್ಚು ಬರುತ್ತದೆ. ಹೀಗೆ ತಿಂಗಳು ತಿಂಗಳು ಇನ್ವೆಸ್ಟ್ ಮಾಡಿದ ಬಳಿಕ ನಿಮ್ಮ ಬಳಿ ಉಳಿದ ಹಣವನ್ನು ಖರ್ಚಿಗೆ ಬಳಸಿ.
Third Rule: ಇನ್ನು ಮೂರನೇಯದಾಗಿ ನಮ್ಮ ಆರೋಗ್ಯ ಯಾವಾಗ ಬೇಕಾದ್ರೂ ಹಾಳಾಗಬಹುದು. ನಮ್ಮ ಜೀವ ಯಾವಾಗ ಬೇಕಾದರೂ ಹೋಗಬಹುದು. ಹಾಗಾಗಿ ಹೆಲ್ತ್ ಇನ್ಶುರೆನ್ಸ್ ಮತ್ತು ಟರ್ಮ್ ಇನ್ಶುರೆನ್ಸ್ ತೆಗೆದುಕ“ಳ್ಳಿ. ಆರೋಗ್ಯ ಹಾಳಾದಾಗ, ಹೆಲ್ತ್ ಇನ್ಶೂರೆನ್ಸ್ ಇಲ್ಲದಿದ್ದರೆ, ನೀವು ಮುಂದಿನ ಭವಿಷ್ಯಕ್ಕಾಗಿ ಕೂಡಿಟ್ಟ ಅಷ್ಟೂ ಸೇವಿಂಗ್ಸ್ ಖಾಲಿಯಾಗುತ್ತದೆ. ಆದರೆ ಹೆಲ್ತ್ ಇನ್ಶುರೆನ್ಸ್ ತೆಗೆದುಕ“ಂಡರೆ, ಅದರಿಂದ ಸಿಕ್ಕ ಹಣದಿಂದ ಚಿಕಿತ್ಸೆ ಪಡಿಯಬಹುದು. ಕಡಿಮೆ ದುಡ್ಡು ಕಟ್ಟಿದರೂ, ನಿಮಗೆ ಲಕ್ಷ , ಕೋಟಿಯಲ್ಲಿ ಹಣ ಸಿಗುತ್ತದೆ.
ಇನ್ನು ನಿಮ್ಮನ್ನು ನಂಬಿಕ“ಂಡು ನಿಮ್ಮ ಮನೆಯವರು ಇದ್ದಲ್ಲಿ, ಅವರಿಗೆ ಟರ್ಮ್ ಇನ್ಶುರೆನ್ಸ್ ಮಾಡಿಸಿಕ“ಳ್ಳಿ. ನಿಮ್ಮ ಕಾಲಾ ನಂತರದಲ್ಲಿ ನಿಮ್ಮ ಮನೆಯವರಿಗೆ ಲಕ್ಷ ಲಕ್ಷ ಹಣ ಸಿಗುವ ಹಾಗೆ, ಕಡಿಮೆ ಹಣ ಕಟ್ಟಿ ಟರ್ಮ್ ಇನ್ಶುರೆನ್ಸ್ ಮಾಡಿಸಬಹುದು. ಕೆಲವು ಇನ್ಶುರೆನ್ಸ್‌ಗಳು ರಿಟರ್ನ್ ಸಿಗುವ ಹಾಗೆ ಇರುತ್ತದೆ. ಅಂದ್ರೆ ನೀವು ಎಷ್ಟು ಅವಧಿಗೆ ಹಣ ಕಟ್ಟಿರುತ್ತೀರೋ, ಆ ಅವಧಿಯಲ್ಲಿ ನಿಮಗೇನೂ ಆಗದಿದ್ದಲ್ಲಿ, ಜಿಎಸ್‌ಟಿ ಕಟ್ ಆಗಿ ನೀವು ಕಟ್ಟಿದ ಹಣ ನಿಮಗೆ ವಾಪಸ್ ಸಿಗುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಮುಂದಿನ ಭಾಗದಲ್ಲಿ ತಿಳಿಯೋಣ.