Saturday, April 19, 2025

Latest Posts

Kodi Shree : ರಾಜ್ಯ, ರಾಷ್ಟ್ರ ರಾಜಕೀಯದಲ್ಲಿ ಅಸ್ಥಿರತೆ ಕಾಡಲಿದೆ : ಭವಿಷ್ಯ ನುಡಿದ ಕೋಡಿ ಮಠದ ಸ್ವಾಮೀಜಿ

- Advertisement -

Hubballi News : ಹುಬ್ಬಳ್ಳಿಯಲ್ಲಿ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ರಾಜಕೀಯ ಭವಿಷ್ಯ ನುಡಿದಿದ್ದಾರೆ. ರಾಜ್ಯ ಹಾಗೂ ರಾಷ್ಟ್ರ ರಾಜಕೀಯದಲ್ಲಿ ಅಸ್ತಿರತೆ ಕಾಡಲಿದೆ,ರಾಷ್ಟ್ರ ರಾಜಕಾರಣ‌ , ರಾಜ್ಯ ರಾಜಕಾರಣದಲ್ಲೂ ಅಸ್ತಿರತೆ ಉಂಟಾಗಲಿದೆ,ಯುಗಾದಿ ನಂತರ ಏನಾಗುತ್ತೋ‌ ಕಾದು‌ನೋಡಿ, ಯುಗಾದಿ ವರೆಗೂ ಸಮಯ ಇದೆ, ಎಲ್ಲವೂ ಕಾದುನೋಡಬೇಕಾಗಿದೆ. ಎಂಬುವುದಾಗಿ ಕೋಡಿ ಮಠದ ಸ್ವಾಮೀಜಿ ಅಚ್ಚರಿ ಭವಿಷ್ಯ ನುಡಿದಿದ್ದಾರೆ.

ರಾಜ್ಯದಲ್ಲಿ ಬರಗಾಲದ ಛಾಯೆ ವಿಚಾರವಾಗಿಯೂ ಮಾತನಾಡಿದ ಸ್ವಾಮೀಜಿ ಮನುಷ್ಯ ಮಾಡಿದ ತಪ್ಪುಗಳಿಗೆ ದೇವರು ಕ್ಷಮಿಸುತ್ತಾನೆ, ಆದ್ರೆ ಮನುಷ್ಯ ಮಾಡಿದ ಪಾಪ‌ಕರ್ಮಗಳು ಮನುಷ್ಯನನ್ನು ಕ್ಷಮಿಸುವುದಿಲ್ಲ, ಮನುಷ್ಯನ‌ ಪಾಪಕರ್ಮಗಳೇ ಇಂತಹ ಪರಿಸ್ಥಿತಿಗೆ ಕಾರಣ. ಆತನ ಕರ್ಮ ಭಾದೆ ಗಳು ಹೆಚ್ಚಾದಾಗ ಇಂತಹ ಪರಿಸ್ಥಿತಿ ಸಾಮೂಹಿಕವಾಗಿ ಅನುಭವಿಸಬೇಕಾಗುತ್ತದೆ.
ಶ್ರಾವಣ ಮಾಸದ ಮಧ್ಯಭಾಗದಲ್ಲಿ ಮಳೆಯಾಗಿದೆ, ಅಮಾವಾಸ್ಯೆ ಕಳೆದ ನಂತರ ಇನ್ನೂ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ವಿಚಾರವಾಗಿ ಭವಿಷ್ಯ ನುಡಿದ ಸ್ವಾಮೀಜಿ ಅದು ಅವರವರ ವಿಚಾರ ಅದರ ಬಗ್ಗೆ ಹೇಳಲು ಆಗುವುದಿಲ್ಲ, ದೇಶದ ಬಗ್ಗೆ ಈ ಹಿಂದೆಯೂ ಹೇಳಿದ್ದೆ. ದೊಡ್ಡ ದೊಡ್ಡ ನಗರಗಳಿಗೆ ಆಪತ್ತು ಕಾದಿದೆ,ರಾಜಕೀಯ ವ್ಯವಸ್ಥೆಯಲ್ಲಿ‌ಅಸ್ತಿರತೆ ಉಂಟಾಗಲಿದೆ. ರಾಜ್ಯ ಹಾಗೂ ರಾಷ್ಟ್ರೀಯ ರಾಜಕೀಯದಲ್ಲೂ ಅಸ್ತಿರತೆ ಕಾಡಲಿದೆ ಎಂದು ಅಚ್ಚರಿ ಭವಿಷ್ಯ ನುಡಿದಿದ್ದಾರೆ.

ಸನಾತನ ಧರ್ಮದ ವಿಚಾರ ಬಗ್ಗೆ ಸ್ಟಾಲಿನ್ ಹೇಳಿಕೆ ವಿಚಾರವಾಗಿ, ಇದು ಅವರವರ ಧರ್ಮದವರ ಹೇಳಿಕೆ ಅದು ಅವರ‌ನೋವಿನ ಸಂಗತಿ, ಎಲ್ಲಾ ಜನಾಂಗದಲ್ಲಿಯೂ ಅವರವರ ನೋವು ಇರುತ್ತೆ, ಅದನ್ನು ಈ ರೀತಿ ನೋವಿನ‌ ಮೂಲಕ ಹೊರಹಾಕುತ್ತಾರೆ. ಧರ್ಮದ ವಿಚಾರದಲ್ಲಿ ರಾಜಕೀಯ ಬೆರೆಸುವುದು ಸೂಕ್ತವಲ್ಲ, ಉದಯನಿಧಿ ಸ್ಟಾಲಿನ್ ಅವರಿಗೆ ಯಾವ ನೋವಿನಿಂದ ಹೇಳಿದ್ದಾರೋ ಗೊತ್ತಿಲ್ಲ, ಆಯಾ ಧರ್ಮದಲ್ಲಿರೋರು ತಮಗಾಗಿರೋ‌ ನೋವಿನಿಂದಾಗಿ ಈ ರೀತಿ‌ಹೇಳಿಕೆ ನೀಡುತ್ತಾರೆ, ಜನರಲ್ಲಿ ಪೂರ್ಣವಾದ ಜ್ಞಾನದ‌ ಕೊರತೆ ಇದೆ, ಪೂರ್ಣವಾದ ಅರಿವಿನ ಕೊರತೆಯಿಂದಾಗಿ ಈ ರೀತಿ ಧರ್ಮ, ರಾಜಕೀಯ ವಿಚಾರ ಮುನ್ನೆಲೆಗೆ ತರುತ್ತಾರೆ. ಧರ್ಮ‌ ಎಂದರೆ ನೆಮ್ಮದಿ,‌ಶಾಂತಿ ನಿಜವಾದ ಜ್ಞಾನ ಮೂಡಿಸುತ್ತೆ, ಆದ್ರೆ ಅದರಲ್ಲಿ ನೆಮ್ಮದಿ, ಶಾಂತಿ ಕಂಡುಕೊಳ್ಳದವರಿಂದ‌ ಈ ರೀತಿ ಅಸಮಾಧಾನ‌ ಮೂಡುತ್ತೆ, ಸನಾತನ ಧರ್ಮವನ್ನ ಸಾಂಕ್ರಾಮಿಕ ರೋಗಕ್ಕೆ ಅನ್ವಯ ವಿಚಾರ, ಧರ್ಮದ ವಿಚಾರವಾಗಿ ಹೇಳಿಕೆ ನೀಡೋರು ಯಾಕೆ‌ ನೊಂದಿದ್ದಾರೆ ಅವರೇ ಹೇಳಬೇಕು ಎಂದರು.

ರಾಜ್ಯ ರಾಜಕೀಯದಲ್ಲಿ ಸ್ವಪಕ್ಷದವರಿಂದಲೇ ಕಚ್ಚಾಟ ವಿಚಾರ ಮನುಷ್ಯನಿಗೆ ಅತೃಪ್ತಿ ಅನ್ನೋದು ರಾಜಕೀಯದಲ್ಲಿ ಈ ರೀತಿ ಅಸಮಾಧಾನ ಸಹಜ, ರಾಜ್ಯ ಆರ್ಥಿಕ ದಿವಾಳಿತನಕ್ಕೆ ಹೋಗುತ್ತೆ ಅನ್ನೋ ಆರೋಪ‌ವಿಚಾರ ಆ ರೀತಿ ಏನೂ ಆಗಲ್ಲ ರಾಜ್ಯ ಸಂಪಬ್ಧರಿತವಾಗಿರುತ್ತೆ, ಜನಸಾಮಾನ್ಯರಿಗೆ ಸಾಕಷ್ಟು ಅನುಕೂಲಕರವಾಗಿವೆ. ಎಂದು ಕೋಡಿ ಮಠದ ಸ್ವಾಮೀಜಿ ಹೇಳಿದರು.

Siddaramaiah : ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ : ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

Laxmi Hebbalkar : ಬಾಳೆಕುಂದ್ರಿ ಶ್ರೀ ರಾಮೇಶ್ವರ ಮಂದಿರದಲ್ಲಿ ದೇವರ ದರ್ಶನ ಪಡೆದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

K Y Nanjegowda : ಬಿ.ಕೆ.ಹರಿಪ್ರಸಾದ್ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ : ಶಾಸಕ ಕೆ.ವೈ. ನಂಜೇಗೌಡ

- Advertisement -

Latest Posts

Don't Miss