ಅಜಿಯ್ ರಾವ್ ನಟನೆಯ ಶೋಕಿವಾಲ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ U/A ಸರ್ಟಿಫಿಕೇಟ್ ಸಿಕ್ಕಿದೆ. ಈ ಚಿತ್ರ ಜನರ ಮುಂದೆ ಬಂದು ಗೆಲುವ ಪರೀಕ್ಷೆಗೆ ತಯಾರಿ ನಡೆಸುತ್ತಿದೆ. ಜನವರಿಯಲ್ಲಿ ಚಿತ್ರಮಂದಿರಕ್ಕೆ ತರುವ ಎಲ್ಲಾ ಸಾಧ್ಯತೆಗಳು ಇವೆ ಎಂದು ಚಿತ್ರತಂಡದವರು ತಿಳಿಸಿದ್ದಾರೆ. ಈ ಸಿನಿಮಾದ ಲಿರಿಕಲ್ ವೀಡಿಯೋ ರೀಲಿಸ್ ಆಗಿ ಎಲ್ಲರ ಕಡೆಯಿಂದಲೂ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಂದು ಹೇಳಿದ್ದರು. ಈಗ ಮತ್ತೋಂದು ಹಾಡನ್ನು ಬಿಡುಗಡೆ ಮಾಡಲು ತಯಾರಿ ನಡೆಯುತ್ತಿದೆ. ಹರಸಿ, ಪ್ರೀತಿ ತೊರಿಸುತ್ತಿರುವ ಎಲ್ಲಾರಿಗೂ ಮತ್ತು ತಮಗೂ ನನ್ನ ಕಡೆಯಿಂದ ಧನ್ಯವಾದವನ್ನು ತಿಳಿಸುತ್ತೆನೆ. ನನಗೆ ಅವಕಾಶ ಕೊಟ್ಟ ಟಿ.ಆರ್ ಚಂದ್ರಶೇಖರ್ ಸರ್, ಕಿಶೋರ್ ಸರ್ ಗೆ ತುಂಬಾಧನ್ಯವಾದಗಳು .
ಶೋಕಿವಾಲ ಪಕ್ಕಾ ಹಳ್ಳಿ ಸೊಡಗಿನ ಚಿತ್ರ. ಇದರಲ್ಲಿ ಅಜಯ್ ರಾವ್, ಸಂಜನಾ ಆನಂದ್, ಶರತ್ ಲೋಹಿತಾಶ್ವ, ಗಿರೀಶ್ ಶಿವಣ್ಣ, ತಬಲಾ ನಾಣಿ, ಮುನಿರಾಜ್, ಪ್ರಮೋದ್ ಶೆಟ್ಟಿ, ಅರುಣ ಬಾಲರಾಜ್, ವಾಣಿ, ಚಂದನ, ಲಾಸ್ಯ, ನಾಗರಾಜಮೂರ್ತಿ ಇನ್ನೂ ತುಂಬಾ ಜನ ಕಲಾವಿದರು ನಟಿಸಿದ್ದಾರೆ.
ಇದುವರೆಗೆ ಚನ್ನಪಟ್ಟಣ, ಹೊಂಗನೂರು, ವಿರುಪಾಕ್ಷೀಪುರ, ಶ್ರೀರಂಗಪಟ್ಟಣ, ಮಂಡ್ಯ, ಮೈಸೂರು, ತುಮಕೂರು, ಮಾಗಡಿಯತಂಹ ಹಳ್ಳಿಗಳಲ್ಲಿ ಶುಟಿಂಗ್ ಮಾಡಿದ್ದಾರೆ. ಇದಕ್ಕೆ ಶ್ರೀಧರ್.ವಿ.ಸಂಭ್ರಮ್ ರವರ ಸಂಗೀತವಿದ್ದು, 4 ಹಾಡುಗಳು ತುಂಬಾ ಚನ್ನಾಗಿ ಮೂಡಿಬಂದಿದೆ. ಜಯಂತ್ ಕಾಯ್ಕಿಣಿ, ನಾಗೇಂದ್ರ ಪ್ರಸಾದ್, ಚೇತನ್ ಕುಮಾರ್ ರವರ ಶೊಕಿವಾಲ ಚಿತ್ರಕ್ಕೆ ಸಾಹಿತ್ಯ ಬರೆದಿದ್ದಾರೆ. ನವೀನ್ ಕುಮಾರ್.ಎಸ್ ಕ್ಯಾಮೆರಾಮೆನ್. ಕೆ.ಎಂ.ಪ್ರಕಾಶ್ ಎಡಿಟರ್. ಪ್ರಶಾಂತ್ ರಾಜಪ್ಪ ಅವರ ಸಂಭಾಷಣೆ. ಮೊಹನ್ ನೃತ್ಯ. ವಿಕ್ರಮ್ ಮೋರ್ ಸಾಹಸ. ಮೂಸೂರು ರಘುರವರ ಕಲಾ ನಿರ್ದೇಶನ.
ಹೀಗೆ ಎಲ್ಲ ತಂತ್ರಜ್ಞರ ಸಹಾಯದಿಂದ ಸೋಕಿವಾಲ ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ಕೊರೊನಾ ಕ್ಲಿಯರ್ ಆಗಿ 100% ಸಿಟ್ಟುಗಳು ಸಿಕ್ಕಿದ ಕೂಡಲೆ ಚಿತ್ರಮಂದಿರಕ್ಕೆ ಶೋಕಿವಾಲ ಎಂಟ್ರಿ ಕೋಡುತ್ತಾನೆ. ಎಂದು ನಿರ್ಮಾಕ ಟಿ.ಆರ್.ಚಂದ್ರಶೇಖರ್ ಹಾಗೂ ನಿರ್ದೇಶಕ ಜಾಕಿ ರವರು ಹೆಳಿದ್ಧಾರೆ.