ಸಿನಿಮೀಯ ಶೈಲಿಯಲ್ಲಿ ನಡೀತು ಕಿಡ್ನ್ಯಾಪ್, ಮುಂದೆ ಏನಾಯ್ತು..?

ಕೋಲಾರದಲ್ಲಿ ಗುರುವಾರ ನಡೆದಿದ್ದ ಯುವತಿಯ ಕಿಡ್ನಾಪ್ ಪ್ರಕರಣವು ಸುಖಾಂತ್ಯ ಕಂಡಿದೆ. ಅಪಹೃತರಿಗೆ ಚಳ್ಳೆಹಣ್ಣು ತಿನ್ನಿಸಿ ಯುವತಿ ತಪ್ಪಿಸಿಕೊಂಡು ಬಂದಿದ್ದಾಳೆ.

ಕೋಲಾರದಲ್ಲಿ ಗುರುವಾರ ಮಧ್ಯಾನ್ಹ 21 ರ ಹರೆಯದ ಯುವತಿಯ ಕಿಡ್ನಾಪ್ ನಡೆದಿತ್ತು. ಹಾಡಹಗಲೆ ಮೂವರು ಕಿಡಿಗೇಡಿಗಳು ರಸ್ತೆಯಲ್ಲಿ ಹೋಗುತ್ತಿದ್ದ ಯುವತಿಯನ್ನು ಕಾರಲ್ಲಿ ಅಪಹರಿಸಿದ್ದರು. ಈ ಘಟನೆಯು ಕೋಲಾರದಲ್ಲಿ ತಲ್ಲಣ ಸೃಷ್ಟಿಸಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದರೂ ಪೊಲೀಸರ ಕೈಗೆ ದುಷ್ಕರ್ಮಿಗಳು ಸಿಕ್ಕಿರಲಿಲ್ಲ.

ಆದ್ರೆ. ಇಂದು ಮಧ್ಯಾಹ್ನ ತುಮಕೂರು ಬಳಿಯ ಸೋಮಸಂದ್ರದ ಬಳಿ ಯುವತಿ ಒಂಟಿಯಾಗಿ ಪತ್ತೆಯಾಗಿದ್ದಾಳೆ. ಗುರುವಾರ ಮಧ್ಯಾಹ್ನ ಕೋಲಾರದಿಂದ ಯುವತಿಯನ್ನು ಕಾರಲ್ಲಿ ಕಿಡ್ನಾಪ್ ಮಾಡಿದ್ದ ದುಷ್ಕರ್ಮಿಗಳು ಆಕೆಯನ್ನು ತುಮಕೂರಿನ ಲಾಡ್ಜ್ ಒಂದರಲ್ಲಿ ಇರಿಸಿಕೊಂಡಿದ್ದರು. ಆರೋಪಿಗಳು ನಿದ್ರೆಗೆ ಜಾರಿದ್ದ ಸಮಯವನ್ನು ನೋಡಿಕೊಂಡು ಯುವತಿಯು ಲಾಡ್ಜ್ ನಿಂದ ಹೊರಬಂದಿದ್ದಾಳೆ.

ಸ್ಥಳೀಯರ ನೆರವನ್ನು ಪಡೆದುಕೊಂಡ ಯುವತಿಯು ಪೊಲೀಸರ ವಶಕ್ಕೆ ಬಂದು ಮಾಹಿತಿ ಕೊಟ್ಟಿದ್ದಾಳೆ. ಯುವತಿಯು ಕೊಟ್ಟ ಮಾಹಿತಿಯನ್ನು ಅನುಸರಿಸಿ ಆರೋಪಿಗಳನ್ನು ಬೆನ್ನತ್ತಿದ ತುಮಕೂರು ಪೊಲೀಸರ ಕೈಗೆ ದುಷ್ಕರ್ಮಿಗಳು ಸಿಕ್ಕಿಲ್ಲ. ಅಪಹೃತ ಯುವತಿಯನ್ನು ಕೋಲಾರಕ್ಕೆ ತಂದಿರುವ ಪೊಲೀಸರು ಆಕೆಯನ್ನು ಪೋಷಕರಿಗೆ ಒಪ್ಪಿಸಿದ್ದಾರೆ. ಕಿಡ್ನಾಪರ್ ಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಕ್ರಮ ಜರುಗಿಸಿದ್ದಾರೆ.

ನಾಗೇಶ್, ಕರ್ನಾಟಕ ನ್ಯೂಸ್, ಕೋಲಾರ

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

About The Author