Saturday, July 27, 2024

Latest Posts

ಕೋಲಾರದಲ್ಲಿ ತಯಾರಾಗುತ್ತಿದೆ ಬೃಹತ್ ರಾಷ್ಟ್ರ ಧ್ವಜ….! ತಿರಂಗ ತಯಾರಿಯಲ್ಲಿ ತೊಡಗಿದ ಸಂಸದ ಮುನಿಸ್ವಾಮಿ

- Advertisement -

75 ನೇ ಸ್ವಾಂತತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆ ಸಂಸದ ಎಸ್ ಮುನಿಸ್ವಾಮಿ ರಿಂದ ಸಾರ್ವಜನಿಕರಿಗೆ ಹಾಗೂ ಸ್ವಾತಂತ್ರ್ಯೋತ್ಸವದಲ್ಲಿ ಭಾಗಿಯಾಗುವ ಶಾಲಾ ಮಕ್ಕಳಿಗೆ ನೀಡುವ ಸಲುವಾಗಿ ಹಾಗೂ ಜಿಲ್ಲೆಯ ಪ್ರತೀ ತಾಲ್ಲೂಕಿಗೆ 35 ಸಾವಿರ  ರಾಷ್ಟ್ರಧ್ವಜಗಳನ್ನು ನೀಡಲು ಸಿದ್ದತೆ ನಡೆಸಲಾಗಿದೆ , ಜೊತೆಗೆ ಸ್ವಾತಂತ್ರ್ಯ ಉತ್ಸವ ದಿನದಂದು ದೇಶದಲ್ಲೇ ಅತಿದೊಡ್ಡದಾದ 1,20,000  ಚದರಡಿಯ ರಾಷ್ಟದ್ವಜ ಹಾರಿಸಲು ಸಿದ್ದತೆ ನಡೆಸಿಕೊಂಡಿದ್ದಾರೆ.

ಹರ್ ಘರ್ ತಿಂರಂಗ ಕಾರ್ಯಕ್ರಮಕ್ಕೆ  ಸಂಸದ ಮುನಿಸ್ವಾಮಿ ಪ್ರತಿ ತಾಲ್ಲೂಕುಗಳಲ್ಲಿ ರಾಷ್ಟದ್ವಜಗಳನ್ನು ಹಂಚಿಕೆ ಮಾಡಿದ್ದು , ಆಗಷ್ಟ್  15 ರಂದು ನಡೆಯುವ ಸ್ವಾತಂತ್ರ್ಯ ಉತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗುವ ವಿದ್ಯಾರ್ಥಿಗಳಿಗೆ 15 ಸಾವಿರ ರಾಷ್ಟ್ರದ್ವಜಗಳ ಸಿದ್ದತೆ ಗೊಳಿಸಿಕೊಂಡಿದ್ದಾರೆ,   ರಾಷ್ಟ್ರ ದ್ವಜಗಳ ಸಿದ್ದತೆಯಲ್ಲಿ ತೊಡಗಿರುವ ಸಂಸದ ಎಸ್.ಮುನಿಸ್ವಾಮಿ ಕಳೆದ 8 ದಿನಗಳಿಂದ ಕೋಲಾರ ನಗರದ ಪೇಟೆ ಚಾಮನಹಳ್ಳಿ ಬಳಿ ದ್ವಜಗಳನ್ನು ಸಿದ್ದಗೊಳಿಸುತ್ತಿದ್ದು, ರಾಷ್ಟ್ರದ್ವಜಗಳ ಸಿದ್ದತೆಯಲ್ಲಿ ಸಂಸದರಿಗೆ ಬಿಜೆಪಿ ಮಹಿಳಾ ಮೋರ್ಚಾ, ಸೇರಿದಂತೆ ಅನೇಕ ಕಾರ್ಯಕರ್ತರು ಸಾಥ್ ನೀಡುವ ಮೂಲಕ ಸ್ವಾತಂತ್ರ್ಯ ದಿನಕ್ಕೆ ತಯಾರಿ ನಡೆಸಿಕೊಂಡಿದ್ದಾರೆ.

ಸ್ವಾತಂತ್ರ್ಯ ಕ್ಕಾಗಿ ಲಕ್ಷಾಂತರ ಜನರು ಪ್ರಾಣ ತ್ಯಾಗ ಮಾಡಿದ್ದು ಅವರಿಗೆ ಗೌರವ ಸೂಚಿಸುವ ಸಲುವಾಗಿ ರಾಷ್ಟ್ರ ಧ್ವಜ ಹಾರಿಸಿ ಒಗ್ಗಟ್ಟು ಪ್ರದರ್ಶನ ಮಾಡಬೇಕು, ಆಗಷ್ಟ್ 13 ರಿಂದ 15 ರವರೆಗೆ ಮನೆ ಮೇಲೆ ಹಾಗೂ ಅಂಗಡಿಗಳಲ್ಲಿ ರಾಷ್ಟ್ರ ಹಾರಿಸುವ ಮೂಲಕ 75 ನೇ ಸ್ವಾತಂತ್ರ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಬೇಕು ಎಂದು ಸಂಸದ ಮುನಿಸ್ವಾಮಿ ಕರೆ ನೀಡಿದ್ದಾರೆ .

ಇನ್ನು ಇದೇ ಮೊದಲ ಬಾರಿಗೆ ಕೋಲಾರದಲ್ಲಿ  ದೇಶದಲ್ಲೇ ಅತಿದೊಡ್ಡ ರಾಷ್ಟ ದ್ವಜ ಹಾರಿಸುವ ಸಲುವಾಗಿ 1 ಲಕ್ಷ 20 ಸಾವಿರ ಚದರಡಿಯ ಬೃಹತ್ ದ್ವಜ ತಯಾರಾಗುತ್ತಿದ್ದು ಆಗಷ್ಟ್ 15 ರಂದು ಕೋಲಾರ ನಗರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಹಾರಿಸುವ ಮೂಲಕ ಸ್ವಾತಂತ್ರ್ಯ ದಿನವನ್ನು ಆಚರಣೆ ಮಾಡಲಾಗುವುದು ಎಂದು ಸಂಸದ ಮುನಿಸ್ವಾಮಿ ತಿಳಿಸಿದ್ದಾರೆ .

 

- Advertisement -

Latest Posts

Don't Miss