ಕೋಲಾರ: ರಾಜ್ಯದಲ್ಲಿ ಹೊಸ ಸರ್ಕಾರ ಬಂದಾಗಿನಿಂದ ಪ್ರತಿದಿನ ಕೊಲೆ ಹಿಂಸಾಚಾರ ಅತ್ಯಾಚಾರಗಳು ಉಗ್ರಾಗಾಮಿಗಳ ಆಗಮನ ಎಲ್ಲವೂ ನಡೆಯುತ್ತಿರುವ ಕಾರಣ ಕೋಲಾರದಲ್ಲಿ ಬಿಜೆಪಿ ನಾಯಕರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ರಾಜ್ಯದಲ್ಲಿ ಹಿಂಸಾಚಾರಗಳು ದಿನದಿಂದ ದಿನಕ್ಕೆ ಮಿತಿಮೀರುತ್ತಿವೆ ಇದರ ಕುರಿತು ಸರ್ಕಾರ ಯಾವುದೇ ರೀತಿಯ ಕ್ರಮ ಕೈಗೊಳ್ಳುತ್ತಿಲ್ಲ ಇವಕ್ಕೆಲ್ಲ ಸರ್ಕಾರ ಕುಮ್ಮಕ್ಕು ಕೊಡುತ್ತಿದೆ. ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಕಾನೂನಿನ ಸುವ್ಯವಸ್ಥೆ ಹಾಳಾಗಿ ಹೋಗಿದೆ ಎಂದು ಕೋಲಾರದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಕೋಲಾರದ ಪಲ್ಲವಿ ವೃತ್ತದಲ್ಲಿ ಬಿಜೆಪಿ ನಾಯಕರು ರಸ್ತೆ ತಡೆದು ಪ್ರತಿಭಟನೆ ಕೈಗೊಂಡರು ಬಿಜೆಪಿ ರಾಜ್ಯಾಧ್ಯಕ್ಷ ವೇಣುಗೋಪಾಲ್ ನೇತೃತ್ವದಲ್ಲಿ ಕೈಗೊಂಡಿರುವ ಈ ಪ್ರತಿಭಟನೆಯಲ್ಲಿ ಸಿಎಂ ಸಿದ್ದರಾಯಯ್ಯನವರ ಪ್ರತಿಕೃತಿಗೆ ಚಪ್ಪಲಿ ಹಾರ ಹಾಕಿ ಪ್ರತಿಕೃತಿ ದಹಿಸಿದರು.‘
ರಾಜ್ಯದಲ್ಲಿ ಗೂಂಡಾ ಸರ್ಕಾರ ಜಾರಿಯಲ್ಲಿದೆ. ಸಿದ್ದರಾಮುಲ್ಲಾಖಾನ್ ಎಂದು ವ್ಯಂಗ್ಯವಾಗಿ ಕೂಗಿ ದಿಕ್ಕಾರಗಳ ಘೋಷಣೆ ಕೂಗಿದರು. ಪ್ರತಿಭಟನೆಯಲ್ಲಿ ಮಾಜಿ ಶಾಸಕರಾದ ವೈ ಸಂಪಂಗಿ, ಗುಂಜೂರು ಶ್ರೀನಿವಾಸರೆಡ್ಡಿ, ಶೀಗೆಹಳ್ಳಿಸುಂದರ್ ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದರು.
Udupi: ಕಾಲೇಜಿನ ಮಹಿಳಾ ಶೌಚಾಲಯದಲ್ಲಿ ಮೊಬೈಲ್ ಇಟ್ಟು ಶೂಟ್ ಮಾಡಿದ ಮುಸ್ಲಿಂ ವಿದ್ಯಾರ್ಥಿನಿಯರು
Hotel : ಹೊಟೇಲ್ ಗಳಲ್ಲಿ ಆಹಾರದ ಬೆಲೆ ಆಗಸ್ಟ್ ನಿಂದ ಜಾಸ್ತಿ ಮಾಡಲಿರುವ ಮಾಲೀಕರು