Monday, December 23, 2024

Latest Posts

ಸಿದ್ದರಾಮಯ್ಯ ಸ್ಪರ್ಧೆ ವಿಚಾರವಾಗಿ ಹೈ ವೋಲ್ಟೇಜ್ ಕ್ಷೇತ್ರವಾಗಿ ಪರಿಗಣಿಸಿರುವ ಕೋಲಾರದಲ್ಲಿ ಜೆಡಿಎಸ್ ಅಲ್ಪಸಂಖ್ಯಾತರ ಸಮಾವೇಶ

- Advertisement -

ಕೋಲಾರ :

೨೦೨೩ ರ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದ್ದು ಕೋಲಾರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ಅಬ್ಬರದ ಪ್ರಚಾರವನ್ನ ಮುಂದುವರೆಸಿದ್ದಾರೆ, ಸಿದ್ದರಾಮಯ್ಯ ಸ್ಪರ್ಧೆ ವಿಚಾರವಾಗಿ ಹೈ ವೋಲ್ಟೇಜ್ ಕ್ಷೇತ್ರವಾಗಿ ಪರಿಗಣಿಸಿರುವ ಕೋಲಾರದಲ್ಲಿ ಜೆಡಿಎಸ್ ಅಲ್ಪಸಂಖ್ಯಾತರ ಸಮಾವೇಶ, ಭೋವಿ ಸಮಾವೇಶ, ಸವಿತಾಸಮಾಜ ಸೇರಿದಂತೆ ವಿವಿಧ ಸಮಾಜಗಳ ಸಮಾವೇಶ ಮಾಡುವ ಮೂಲಕ ಪ್ರಚಾರದಲ್ಲಿ ಮೇಲುಗೈ ಸಾದಿಸಿದೆ.

ಇದರ ಬೆನ್ನಲ್ಲೇ ಜೆಡಿಎಸ್ ಗೆ ದಲಿತ ಸಮೂದಾಯ ಒಕ್ಕೊರಲಿನಿಂದ ಬೆಂಬಲ ಸೂಚಿಸುವ ಮೂಲಕ ಜೆಡಿಎಸ್ ಗೆ ಬಲ ಹೆಚ್ಚಿಸಿದೆ ಈ ನಿಟ್ಟಿನಲ್ಲಿ ಪ್ರಜ್ಞಾವಂತ ದಲಿತ ಸಂಘಟನೆಗಳ ಒಕ್ಕೂಟದಿಂದ ದಲಿತ ನಡೆ ಜೆಡಿಎಸ್ ಕಡೆಗೆ ಎನ್ನುವ ಬೃಹತ್ ಸಮಾವೇಶವನ್ನ ದಲಿತ ಮುಖಂಡರ ನೇತೃತ್ವದಲ್ಲಿ ಹಮ್ಮಿಕೊಳ್ಳುವ ಮೂಲಕ ಶನಿವಾರ ಶಕ್ತಿ ಪ್ರದರ್ಶನ ಮಾಡಿದ್ದಾರೆ, ಕೋಲಾರ ನಗರದ ಸಿ ಬೈರೇಗೌಡ ನಗರದ ಬಳಿ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳುವ ಮೂಲಕ, ಬಿಜೆಪಿ ಹಾಗೂ ಕಾಂಗ್ರೇಸ್ ಪಕ್ಷಕ್ಕೆ ಎಚ್ಚರಿಕೆಯನ್ನ ನೀಡಿದ್ದಾರೆ, ಬೃಹತ್ ಸಮಾವೇಶದಲ್ಲಿ ಕೋಲಾರ ವಿಧಾನಸಭಾ ಕ್ಷೇತ್ರದಿಂದ ೧೦ ಸಾವಿರ ಮಂದಿ ಆಗಮಿಸುವ ಮೂಲಕ ಕಾರ್ಯಕ್ರಮವನ್ನು ಅಭೂತಪೂರ್ವವಾಗಿ ಯಶಸ್ವಿಗೊಳಿಸಿದ್ರು ಕಾರ್ಯಕ್ರಮವನ್ನ, ಎಂ.ಎಲ್.ಸಿ ಗೋಂವಿಂದರಾಜು, ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಸೇರಿದಂತೆ ಹಲವು ನಾಯಕರು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು.

ಸಮಾವೇಶಕ್ಕೆ ಬಂದ ಜನರಿಗೆ ಸಿಎಂಆರ್ ಶ್ರೀನಾಥ್ ಕಡೆಯಿಂದ ಭೋಜನ ವ್ಯವಸ್ಥೆ ಮಾಡಲಾಗಿತ್ತು, ಕಾರ್ಯಕ್ರಮದ ವೇದಿಕೆ ಭಾಗದಲ್ಲಿ ಮಾತನಾಡಿದ ನಾಯಕರು, ಕಾಂಗ್ರೇಸ್ ಪಕ್ಷದ ಕೆಲವು ನಾಲ್ಕೈದು ದಲಿತ ಮುಖಂಡರು ಇಡೀ ದಲಿತ ಸಮುದಾಯ ನಮ್ಮೊಟ್ಟಿಗೆ ಇದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ರನ್ನು ಕೋಲಾರಕ್ಕೆ ಕರೆತಂದಿದ್ದಾರೆ, ಇವತ್ತಿನ ಈ ಜನ ಸಮೂಹವನ್ನ ನೋಡಿದ್ರೆ ಕೆಲವರಿಗೆ ಜೆಡಿಎಸ್ ನ ಪ್ರಾಭಲ್ಯ ಅರ್ಥವಾಗಿರುತ್ತದೆ ಎಂದು ಟಾಂಗ್ ನೀಡಿದ್ರು ಕಳೆದ ಚುನಾವಣೆಯಲ್ಲಿ ಶ್ರೀನಿವಾಸಗೌಡರನ್ನು ನಂಬಿದ ಕ್ಷೇತ್ರದ ಜನರು ೪೦ ಸಾವಿರಕ್ಕೂ ಹೆಚ್ಚಿನ ಮತಗಳ ಅಂತದಿಂದ ಗೆಲ್ಲಿಸುವ ಮೂಲಕ ಬೆಂಬಲಿಸಿದ್ರಿ ಅದೇ ನಮ್ಮ ದುರದೃಷ್ಟ ಜೆಡಿಎಸ್ ನಲ್ಲಿ ಗೆದ್ದು ಕೋಲಾರ ಅಭಿವೃದ್ದಿ ಪಡಿಸದೇ ಕಾಲ ಹರಣ ಮಾಡಿ ನಲವತ್ತು ವರ್ಷಗಳ ಹಿಂದಕ್ಕೆ ಕೋಲಾರವನ್ನು ಕೊಂಡೊಯ್ದಿದ್ದೇ ಶ್ರೀನಿವಾಸಗೌಡ ಅಭಿವೃದ್ದಿ ಕೆಲಸವಾಗಿದೆ, ಇನ್ನು ಇಡೀ ದೇಶಕ್ಕೆ ಸಂವಿಧಾನ ತಂದುಕೊಟ್ಟ ಸಂವಿಧಾನ ಶಿಲ್ಪ ಡಾ.ಬಿ.ಅರ್ ಅಂಬೇಡ್ಕರ್ ರವರನ್ನು ಕಾಂಗ್ರೇಸ್ ಪಕ್ಷ ನಡೆಸಿಕೊಂಡ ರೀತಿ ಯಾರು ಒಪ್ಪುವಂತದಲ್ಲ ಪೂನಾ ಮಸೂದೆಯನ್ನು ಮಂಡಿಸಲು ಮುಂದಾಗಿದ್ದ ಅಂಬೇಡ್ಕರ್ ಅವರಿಗೆ ಆ ಮೂಸೂದೆಯನ್ನ ತಿರಸ್ಕಾರ ಮಾಡಿದ್ದು ಕಾಂಗ್ರೇಸ್ ಪಕ್ಷ, ಲೋಕಸಭಾ ಚುನಾವಣೆಯಲ್ಲಿ ಆಂಬೇಡ್ಕರ್ ಅವರನ್ನ ಸೋಲಿಸಿದ್ದು ಸಹ ಇದೆ ಕಾಂಗ್ರೇಸ್ ಪಕ್ಷ ಎಂದು ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು .

ಧ್ರುವ ನಟನೆಯ ಕೆಡಿ ಸಿನಿಮಾದಲ್ಲಿ ಸತ್ಯವತಿಯಾಗಿ ಶಿಲ್ಪಾ ಶೆಟ್ಟಿ ನಟನೆ

47ನೇ ವಯಸ್ಸಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿಯ ತಾಯಿ..

ಜಗ್ಗೇಶ್ ನಟನೆಯ “ರಾಘವೇಂದ್ರ ಸ್ಟೋರ್” ಚಿತ್ರಮಂದಿರಕ್ಕೆ ಏಪ್ರಿಲ್ 28 ರಂದು

 

- Advertisement -

Latest Posts

Don't Miss