Friday, August 29, 2025

Latest Posts

ಕೊಂಕಣಿ ಶೈಲಿಯ ತವ್ವೆ ರೆಸಿಪಿ..

- Advertisement -

ಟೊಮೆಟೋ ಬಿಟ್ರೆ ಮನೆಯಲ್ಲಿ ಬೇರೆ ತರಕಾರಿ ಇಲ್ಲ, ಅನ್ನದ ಜೊತೆ ಯಾವ ಸಾರು ಮಾಡಬೇಕೆಂಬ ಚಿಂತೆ ನಿಮ್ಮದಾದ್ರೆ, ಅದಕ್ಕೆ ಇಲ್ಲೊಂದು ರೆಸಿಪಿ ಇದೆ. ಅದನ್ನ ಟ್ರೈ ಮಾಡಿ.

ನಾವಿವತ್ತು, ಸಿಂಪಲ್ ಆಗಿ 10 ನಿಮಿಷದಲ್ಲಿ ತಯಾರಾಗೋ ತವ್ವೆ ಹೇಗೆ ಮಾಡೋದು ಅನ್ನೋದನ್ನ ಹೇಳಲಿದ್ದೇವೆ. ತವ್ವೆಗೆ ಬೇಕಾದ ಸಾಮಗ್ರಿ ನೋಟ್ ಮಾಡಿಕೊಳ್ಳಿ.

ಅರ್ಧ ಕಪ್ ಹೆಸರು ಬೇಳೆ, ಒಂದು ಟೊಮೆಟೋ, ಒಂದು ಸ್ಪೂನ್ ಬೆಲ್ಲದ ಪುಡಿ, 2 ಸ್ಪೂನ್ ಎಣ್ಣೆ, ಅರ್ಧ ಸ್ಪೂನ್ ಜೀರಿಗೆ, ಅರ್ಧ ಸ್ಪೂನ್ ಸಾಸಿವೆ, ಒಂದರಿಂದ 2 ಹಸಿ ಮೆಣಸಿನ ಕಾಯಿ, 5ರಿಂದ 6 ಎಸಳು ಕರೀಬೇವು, ಚಿಕ್ಕ ತುಂಡು ಹಸಿ ಶುಂಠಿ, ಚಿಟಿಕೆ ಇಂಗು, ಚಿಟಿಕೆ ಅರಿಷಿಣ, ಅರ್ಧ ಕಪ್ ಸಣ್ಣಗೆ ಹೆಚ್ಚಿದ ಕೊತ್ತೊಂಬರಿ ಸೊಪ್ಪು, ಅಗತ್ಯಕ್ಕೆ ತಕ್ಕಷ್ಟು ಉಪ್ಪು ಮತ್ತು ನೀರು.

ಹೆಸರು ಬೇಳೆಯನ್ನು ಚೆನ್ನಾಗಿ ತೊಳೆದು ಪಕ್ಕಕ್ಕಿರಿಸಿ. ಒಂದು ಕುಕ್ಕರಿನಲ್ಲಿ ಎಣ್ಣೆ, ಸಾಸಿವೆ, ಜೀರಿಗೆ, ಕರಿಬೇವು, ಹಸಿಮೆಣಸು, ಇಂಗು, ಹಸಿ ಶುಂಠಿ ಹಾಕಿ ಹುರಿಯಿರಿ.

ಇದಕ್ಕೆ ಟೊಮೆಟೋ ಸೇರಿಸಿ ಕೊಂಚ ಫ್ರೈ ಮಾಡಿ. ನಂತರ ಬೇಳೆ ಹಾಕಿ ಒಂದು ನಿಮಿಷ ಹುರಿದು, ಅರಿಷಿನ, ಉಪ್ಪು, ಬೆಲ್ಲದ ಪುಡಿ, ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ 3ರಿಂದ 4 ವಿಶಲ್ ಬರುವವರೆಗೂ ಬೇಯಿಸಿ.

15 ನಿಮಿಷದ ನಂತರ ಕುಕ್ಕರ್ ಮುಚ್ಚಳ ತೆಗೆದು ಕೊತ್ತೊಂಬರಿ ಸೊಪ್ಪು ಸೇರಿಸಿ, ಮಿಕ್ಸ್ ಮಾಡಿ ಮತ್ತೆ ಕುಕ್ಕರ್ ಕವರ್ ಮಾಡಿ. 10 ನಿಮಿಷದ ನಂತರ ಘಮ ಘಮಿಸುವ ತವ್ವೆ ರೆಡಿ.

ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ

https://youtu.be/gWwJQ4ZUrS8

- Advertisement -

Latest Posts

Don't Miss