Koppala News: ಸಿಲಿಂಡರ್ ಅಭಾವಕ್ಕೆ ಮೋದಿ- ಟ್ರಂಪ್ ಸ್ನೇಹ ಕಾರಣ ಎಂದಿದ್ದ ಬೋಸ್‌ರಾಜುಗೆ ರೆಡ್ಡಿ ಟಾಂಗ್

Koppala News: ಕೊಪ್ಪಳದಲ್ಲಿಂದು ಜನಾರ್ಧನ ರೆಡ್ಡಿ ಮಾಧ್ಯಮದ ಜತೆ ಮಾತನಾಡಿದ್ದು, ಸಿಲಿಂಡರ್ ಅಭಾವಕ್ಕೆ ಮೋದಿ- ಟ್ರಂಪ್ ಸ್ನೇಹವೇ ಕಾರಣ ಎಂದು ಹೇಳಿದ್ದ ಬೋಸ್‌ರಾಜುಗೆ ಟಾಂಗ್ ನೀಡಿದ್ದಾರೆ.

ಇರಾನ್‌ನಿಂದ ಬರುತ್ತಿರುವ ಹಡಗುಗಳಲ್ಲಿ ಭಾರತದ ಫ್ಲ್ಯಾಗ್ ಕಂಡ್ರೆ ಅದಕ್ಕೇನು ಸಮಸ್ಯೆ ಮಾಡಬೇಡಿ ಎಂದು ಇರಾನ್ ಮುಖ್ಯಸ್ಥರೇ ಹೇಳಿದ್ದ ಮಾತನ್ನು ಇಂಡೀ ಪ್ರಪಂಚವೇ, ನೋಡಿದೆ, ಕೇಳಿದೆ. ಮೋದಿ ಬೆಲೆ ತಿಳಿದಿರುವ ಕಾರಣ ಭಾರತಕ್ಕೆ ಬರುತ್ತಿರುವ ಹಡಗುಗಳಿಗೆ ಯಾವುದೇ ಸಮಸ್ಯೆ ಆಗುತ್ತಿಲ್ಲ.

ಆದರೆ ಬೇರೆ ದೇಶಗಳ ಹಡಗುಗಳಿಗೆ ಸಮಸ್ಯೆಯಾಗುತ್ತಿದೆ. ಆದರೆ ನಮ್ಮ ದೇಶ ಮೋದಿ ಆಡಳಿತದಲ್ಲಿರುವ ಕಾರಣ, ನಮ್ಮ ಹಡಗನ್ನು ಪೂರ್ತಿ ಸಂರಕ್ಷಿಸಿ ಕಳುಹಿಸುತ್ತಿದ್ದಾರೆ. ಹಾಗಾಗಿ ಬೋಸ್‌ರಾಜು ಅವರು ತಿಳಿದು ಮಾತನಾಡಬೇಕು. ಮೋದಿ ಮತ್ತು ಟ್ರಂಪ್ ಸ್ನೇಹದಿಂದ ಸಿಲಿಂಡರ್ ಸಮಸ್ಯೆ ಆಗುತ್ತಿದೆ ಅನ್ನೋದು ತಲೆಕೆಟ್ಟವರ ಮಾತು ಎಂದಿದ್ದಾರೆ ಜನಾರ್ಧನ ರೆಡ್ಡಿ.

About The Author